'0' ಗೆ ಇಳಿದ ಹಣದುಬ್ಬರ; ಇದು 3 ವರ್ಷದಲ್ಲೇ ಕನಿಷ್ಠ
ನವದೆಹಲಿ, ಡಿ. 15: ಇದಕ್ಕೆ 'ಅಚ್ಚೇ ದಿನ್' ಎನ್ನಬಹುದು. ಆದರೆ, ಇದಕ್ಕೆ ನರೇಂದ್ರ ಮೋದಿ ಪರಿಣಾಮವೋ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾದ ಕಾರಣವೋ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಒಟ್ಟು ಹಣದುಬ್ಬರದ ದರವು ನವೆಂಬರ್ ತಿಂಗಳಿನಲ್ಲಿ ಹೆಚ್ಚು ಕಡಿಮೆ ಶೇ. '0' ದಾಖಲಾಗಿದೆ. ಇದಕ್ಕೆ ನೇರ ಕಾರಣ ದೇಶದಲ್ಲಿ ಆಹಾರ, ಇಂಧನ ಮತ್ತು ಮಾನವ ಉತ್ಪಾದಿತ ವಸ್ತುಗಳ ಬೆಲೆ ಕಡಿಮೆಯಾಗುತ್ತಿರುವುದು.
ದೇಶದಲ್ಲಿ 'ಸಗಟು ಬೆಲೆ ಸೂಚ್ಯಂಕ' ಆಧಾರಿತ ಹಣದುಬ್ಬರದವು 2013ರ ಅಕ್ಟೋಬರ್ ತಿಂಗಳಿನಲ್ಲಿ ಶೇ. 1.77 ಹಾಗೂ ನವೆಂಬರ್‌ನಲ್ಲಿ ಶೇ. 7.52ರಷ್ಟಿತ್ತು. ಆದರೆ, 2014ರ ಮೇ ತಿಂಗಳಿನಿಂದ ಆಹಾರ ಹಣದುಬ್ಬರ ಇಳಿಲಾರಂಭಿಸಿತ್ತು. ಸೋಮವಾರ ಸರ್ಕಾರವು ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ ಈ ಪ್ರಮಾಣವು ಮೂರು ವರ್ಷಗಳ ಕನಿಷ್ಠವಾದ ಶೇ. 0.63 ರಷ್ಟು ದಾಖಲಾಗಿದೆ. [ಹಣದುಬ್ಬರ ಕುಸಿತ, ಪೆಟ್ರೋ ಬೆಲೆ ಇಳಿಕೆ]

'ಸಗಟು ಬೆಲೆ ಸೂಚ್ಯಂಕ' ಬೆಲೆಯು 2009ರ ಜುಲೈ ತಿಂಗಳಿನಲ್ಲಿ ಶೇ. (-)0.3 ಪ್ರಮಾಣದಷ್ಟಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಈರುಳ್ಳಿ ದರದ ಇಳಿಕೆ ಶೇ. 59.77ರಷ್ಟಿತ್ತು. ಈ ಪ್ರಮಾಣವು ಶೇ. 56.28 ಕ್ಕೆ ಕಡಿಮೆಯಾಗಿದೆ. ತರಕಾರಿಗಳ ಸಂಕೋಚನ ಪ್ರಮಾಣವು ಶೇ. 28.57ರಷ್ಟಿದೆ.
ಈ ಮಧ್ಯೆಯೂ, ಪ್ರೊಟೀನ್ ಭರಿತ ಆಹಾರಗಳಾದ ಮೊಟ್ಟಿ, ಮಾಂಸ ಮತ್ತು ಮೀನುಗಳು ನವೆಂಬರ್ ತಿಂಗಳಿನಲ್ಲಿ ಶೇ. 4.36ಕ್ಕೆ ಹೆಚ್ಚಳವಾಗಿವೆ. ಈ ಸಂದರ್ಭದಲ್ಲಿ ಬಟಾಟೆಯ ಹಣದುಬ್ಬರ ಪ್ರಮಾಣವು ಶೇ. 34.10ರಷ್ಟಿತ್ತು. [5 ವರ್ಷದಲ್ಲೇ ಅತಿ ಕಡಿಮೆ ಹಣದುಬ್ಬರ]
ಆದರೆ, ಮಾನವ ಉತ್ಪಾದಿತ ಆಹಾರ ಪದಾರ್ಥಗಳಾದ ಸಕ್ಕರೆ, ಖಾದ್ಯ ತೈಲ, ಪಾನೀಯಗಳು ಮತ್ತು ಸಿಮೆಂಟ್ ನವೆಂಬರ್‌ನಲ್ಲಿ ಶೇ. 2.04ಕ್ಕೆ ಬಿದ್ದವು. ಈ ಪ್ರಮಾಣವು ಅಕ್ಟೋಬರ್‌ನಲ್ಲಿ 2.43ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಹಣದುಬ್ಬರ ಪ್ರಮಾಣದ ಇಳಿಕೆಯು ಅಕ್ಟೋಬರ್‌ನಲ್ಲಿ ಶೇ. 0.43ರಷ್ಟಿದ್ದರೆ ನವೆಂಬರ್‌ನಲ್ಲಿ ಶೇ. 4.91ರಷ್ಟು ದಾಖಲಾಗಿತ್ತು.
ಆರು ತಿಂಗಳುಗಳ ಕಾಲ ನಿರಂತರವಾಗಿ 'ಸಗಟು ಬೆಲೆ ಸೂಚ್ಯಂಕ' ಹಣದುಬ್ಬರದಲ್ಲಾದ ಇಳಿಕೆಯು ಚಿಲ್ಲರೆ ಮಾರಾಟದ ಇಳಿಕೆಯು ನವೆಂಬರ್ ತಿಂಗಳಿನಲ್ಲಿ ಕನಿಷ್ಠ ದಾಖಲೆಯಾದ ಶೇ. 4.38ರಷ್ಟು ಹಣದುಬ್ಬರಕ್ಕೆ ಕಾರಣವಾಯಿತು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ












Click it and Unblock the Notifications