Gold Safety: ಚಿನ್ನ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದೀರಾ? ಹಾಗಾದರೆ ತಪ್ಪದೇ ಈ ಸುದ್ದಿ ಓದಿ...
ಚಿನ್ನದ ಬೆಲೆ ಆಕಾಶ ತಲುಪಿದ್ದು, ನೋಡ ನೋಡುತ್ತಲೇ ಚಿನ್ನ ಹಾಗೂ ಬೆಳ್ಳಿಗೆ ಭಾರಿ ಡಿಮ್ಯಾಂಡ್ ಬಂದುಬಿಟ್ಟಿದೆ. ಚಿನ್ನದ ಬೆಲೆ ಇನ್ನೂ ಹೆಚ್ಚಾಗುತ್ತೆ, ಅಲ್ಲದೆ ಕೆಲವೇ ದಿನಗಳಲ್ಲಿ ಬಂಗಾರದ ಬೆಲೆಯು ಪ್ರತಿ 10 ಗ್ರಾಂಗೆ 1,70,000 ರೂಪಾಯಿಗೆ ತಲುಪಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಎಲ್ಲಾ ಚರ್ಚೆಗಳ ನಡುವೆ ಹೊಸ ಚಿಂತೆ ಶುರುವಾಗಿದೆ. ಅದು ಏನೆಂದರೆ ಬಹುತೇಕರು ತಮ್ಮ ತಮ್ಮ ಮನೆಗಳಲ್ಲಿ ಚಿನ್ನ ಇಡುವ ಬದಲಾಗಿ ಬ್ಯಾಂಕ್ ಲಾಕರ್ ಒಳಗೆ ಸೇಫ್ ಆಗಿ ಚಿನ್ನ ಇಡಲು ಬಯಸುತ್ತಾರೆ. ಹಾಗಾದ್ರೆ ನೀವು ಕೂಡ ಚಿನ್ನ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದೀರಾ? ಅಥವಾ ಚಿನ್ನ ಬ್ಯಾಂಕ್ ಲಾಕರ್‌ನಲ್ಲಿ ಇಡುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ತಪ್ಪದೇ ಈ ಸುದ್ದಿ ಓದಿ.
ಇಡೀ ಜಗತ್ತಿನಲ್ಲಿ ಚಿನ್ನ ಅತ್ಯಮೂಲ್ಯ ವಸ್ತುವಾಗಿದ್ದು, ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇದೆ. ಅಲ್ಲದೆ ಇದೇ ಚಿನ್ನ ಅದೆಷ್ಟೋ ಸಾಮ್ರಾಜ್ಯಗಳನ್ನು ಕಟ್ಟಿದೆ ಹಾಗೂ ಅದೆಷ್ಟೋ ಸಾಮ್ರಾಜ್ಯಗಳು ನಾಶವಾಗಲು ಕಾರಣ ಕೂಡ ಆಗಿದೆ. ಹೀಗಿದ್ದಾಗ ಆಧುನಿಕ ಕಾಲಘಟ್ಟದಲ್ಲಿ ಕೂಡ ಚಿನ್ನಕ್ಕೆ ಮೊದಲ ಸ್ಥಾನ ಇದ್ದು, ಜನ ಚಿನ್ನದ ಮೇಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಾರೆ. ಹೀಗಿದ್ದಾಗ, ಚಿನ್ನದ ವಿಚಾರ ಬಂದಾಗ ಮೋಸ ಆಗುವುದು ಮಾಮೂಲು.

ಚಿನ್ನ ಕಾಪಾಡಲು ಆರ್‌ಬಿಐ ನಿಯಮಗಳು
ಅದರಲ್ಲೂ ತುಂಬಾ ನಂಬಿಕೆ ಇಟ್ಟು, ಚಿನ್ನ ಸೇಫ್ ಮಾಡಿದ್ದಾಗಲೂ ಮೋಸ ಆಗಿರುವುದು ಆಘಾತ ತರುತ್ತಿದೆ ಜನರಿಗೆ. ಹೀಗಾಗಿ ಸರ್ಕಾರ ಕೂಡ ಹಲವು ನಿಯಮಗಳನ್ನು ರೂಪಿಸಿದೆ, ಇನ್ನು ಲಾಕರ್‌ಗಳ ಭದ್ರತೆ ಮೂಲಕ ಚಿನ್ನ ರಕ್ಷಣೆ ಮಾಡುವ ಜನ ಹೆಚ್ಚಾಗಿದ್ದಾರೆ. ಇಷ್ಟೆಲ್ಲದರ ನಡುವೆ ನೀವು ಬ್ಯಾಂಕ್‌ನಲ್ಲಿ ಚಿನ್ನ ಇಡಲು ಯೋಜಿಸಿದ್ದೀರಾ ಅಥವಾ ಚಿನ್ನ ಈಗಾಗಲೇ ಇಟ್ಟಿದ್ದೀರಾ? ಹಾಗಾದ್ರೆ ಯಾವೆಲ್ಲಾ ನಿಯಮ ಪಾಲನೆ ಮಾಡಬೇಕು ಗೊತ್ತಾ? ಆರ್‌ಬಿಐ ನಿಯಮ ಈ ವಿಚಾರದಲ್ಲಿ ಏನು ಹೇಳುತ್ತದೆ? ಬನ್ನಿ ಎಲ್ಲಾ ರೂಲ್ಸ್ ತಿಳಿಯೋಣ.
ಲಾಕರ್ ನಿಯಮಗಳು ಏನು ಹೇಳುತ್ತವೆ?
ಬ್ಯಾಂಕ್ ಲಾಕರ್‌ಗೆ ನೀವು ಹಣ ಕೊಟ್ಟು, ನಿಮ್ಮ ಚಿನ್ನ & ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳೆಲ್ಲಾ ಸೇಫ್ ಆಗಿವೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ಬ್ಯಾಂಕ್ ನೀವು ಕಟ್ಟುವ ವಾರ್ಷಿಕ ಬಾಡಿಗೆಯ 100 ಪಟ್ಟು ಮಾತ್ರ ಹೊಣೆಗಾರಿಕೆ ಹೊತ್ತಿರುತ್ತದೆ. ಕಳ್ಳತನ & ನೌಕರರಿಂದ ಆಗುವ ವಂಚನೆ ರೀತಿ ಅನಿರೀಕ್ಷಿತ ಘಟನೆಗಳು ದೊಡ್ಡ ನಷ್ಟ ಉಂಟುಮಾಡುತ್ತವೆ. ಲಾಕರ್ ವಿಚಾರದಲ್ಲಿ, ಬ್ಯಾಂಕುಗಳ ಹೊಣೆಗಾರಿಕೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟವಾಗಿ ತನ್ನ ನಿಯಮದಲ್ಲಿ ತಿಳಿಸುತ್ತದೆ.
ಇನ್ನೊಂದು ಕಡೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಹೇಳುವಂತೆ, ಹೊಣೆಗಾರಿಕೆ ಸುರಕ್ಷತಾ ಠೇವಣಿ ಲಾಕರ್ ವಾರ್ಷಿಕ ಬಾಡಿಗೆಯ 100 ಪಟ್ಟು ಸೀಮಿತವಾಗಿರುತ್ತೆ. ನಿಮ್ಮ ವಾರ್ಷಿಕ ಲಾಕರ್ ಬಾಡಿಗೆ 2,000 ರೂಪಾಯಿ ಆಗಿದ್ದರೆ, ಬ್ಯಾಂಕ್ ಹೊಣೆಗಾರಿಕೆ 2 ಲಕ್ಷ ರೂಪಾಯಿಗೆ ಸೀಮಿತವಾಗಿರುತ್ತದೆ. ಹೀಗಾಗಿ ನೀವು ಈ ನಿಯಮದ ಬಗ್ಗೆ ಗಮನ ಹರಿಸಬೇಕು. ಅಲ್ಲದೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಯಾವುದೇ ಹಾನಿ ಬಗ್ಗೆ ಕೂಡ ಬೇರೆ ನಿಯಮಗಳು ಇವೆ.
ಪ್ರಕೃತಿ ಮುನಿದರೆ ಪರಿಸ್ಥಿತಿ ಗಂಭೀರ
ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ಲಾಕರ್‌ನ ವಸ್ತುಗಳ ನಷ್ಟ ಅಥವಾ ಭೂಕಂಪ, ಪ್ರವಾಹ, ಮಿಂಚು ಕಾರಣದಿಂದ ನಿಮ್ಮ ಬ್ಯಾಂಕ್ ಲಾಕರ್ ವಸ್ತುಗಳಿಗೆ ನಷ್ಟವಾದರೆ ಆಗ ಬ್ಯಾಂಕ್ ಜವಾಬ್ದಾರಿ ಹೊರುವುದಿಲ್ಲ ಎನ್ನುತ್ತದೆ ನಿಯಮ. ಆದಾಗ್ಯೂ, ಬ್ಯಾಂಕುಗಳು ತಮ್ಮ ಲಾಕರ್ ವ್ಯವಸ್ಥೆಗಳಿಗೆ ಸೂಕ್ತ ಕಾಳಜಿ ವಹಿಸಿ ವಿಪತ್ತುಗಳಿಂದ ಬ್ಯಾಂಕ್ ಲಾಕರ್‌ಗಳನ್ನು ರಕ್ಷಿಸಿಕೊಳ್ಳಲು ಕಠಿಣ ನಿಮಯಗಳನ್ನು ಅರ್‌ಸಿಬಿ ವಿಧಿಸಿದೆ.












Click it and Unblock the Notifications