ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q1ರಲ್ಲಿ ಚಿನ್ನದ ಹೂಡಿಕೆಯ ಬೇಡಿಕೆಯಲ್ಲಿ ಭಾರಿ ಕುಸಿತ

|
Google Oneindia Kannada News

ನವದೆಹಲಿ, ಏಪ್ರಿಲ್ 30: ವಿಶ್ವ ಚಿನ್ನ ಪರಿಷತ್ತಿನ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿ ಪ್ರಕಾರ, ಹೆಚ್ಚಿನ ಬಡ್ಡಿದರಗಳ ನಿರೀಕ್ಷೆಗಳು ಭಾವನೆಯ ಮೇಲೆ ಪರಿಣಾಮ ಬೀರಿರುವುದರಿಂದ ಚಿನ್ನದ ಬೆಂಬಲಿತ ವಿನಿಮಯ-ವಹಿವಾಟು ನಿಧಿಗಳಲ್ಲಿ (ಇಟಿಎಫ್) ಭಾರಿ ಹೊರಹರಿವು ಉಂಟಾಗಿತ್ತು. ಇದರಿಂದ ಮೊದಲನೇ ತ್ರೈಮಾಸಿಕದಲ್ಲಿ ಚಿನ್ನದ ಹೂಡಿಕೆಯ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡಿದೆ.

ಮೊದಲ ತ್ರೈಮಾಸಿಕದ ಒಟ್ಟು ಜಾಗತಿಕ ಚಿನ್ನದ ಬೇಡಿಕೆ 815.7 ಟನ್‌ಗಳಷ್ಟಿದ್ದು, ಅದು ಅದರ ಹಿಂದಿನ ತ್ರೈಮಾಸಿಕಕ್ಕೆ ಸಮನಾಗಿತ್ತು. ನಂತರ ಚಿನ್ನದ ಬೆಂಬಲಿತ ಇಟಿಎಫ್‌ಗಳು 177.9 ಟನ್‌ ಹೊರಹರಿವಿನ ಕಾರಣದಿಂದ ವರ್ಷದಿಂದ ವರ್ಷಕ್ಕೆ ಗಮನಾರ್ಹ ಕುಸಿತ (23%) ಕಂಡಿದೆ.

ಚಿನ್ನದ ಬೆಲೆ ಭಾರಿ ಕುಸಿತ, ಯಾವ ನಗರದಲ್ಲಿ ಹೆಚ್ಚು ಏರಿಳಿತ? ಚಿನ್ನದ ಬೆಲೆ ಭಾರಿ ಕುಸಿತ, ಯಾವ ನಗರದಲ್ಲಿ ಹೆಚ್ಚು ಏರಿಳಿತ?

ಆದಾಗ್ಯೂ, ಇಟಿಎಫ್‌ ಬೇಡಿಕೆಯ ಕುಸಿತದ ಪರಿಣಾಮವು ಬಾರ್ ಮತ್ತು ನಾಣ್ಯದ ಬೇಡಿಕೆ ಕೂಡ ಕುಸಿತ ಕಂಡಿದೆ. ಅಂತಹ ಚಿಲ್ಲರೆ ಚಿನ್ನದ ಖರೀದಿಗಳು 339.5 ಟಿ (ವರ್ಷದಿಂದ ವರ್ಷಕ್ಕೆ ಶೇ.36) ತಲುಪಿದ್ದು, ಬೆಲೆ-ಚಾಲಿತ 'ಚೌಕಾಶಿ-ಬೇಟೆ' ಮತ್ತು ಹೆಚ್ಚುತ್ತಿರುವ ಹಣದುಬ್ಬರ ಒತ್ತಡಗಳ ಬಗ್ಗೆ ವ್ಯಾಪಕ ಕಾಳಜಿಯಿಂದ ಪ್ರಭಾವಿತವಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೆಲೆಯಲ್ಲಿ ಶೇ. 10ರಷ್ಟು ಇಳಿಕೆ

ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೆಲೆಯಲ್ಲಿ ಶೇ. 10ರಷ್ಟು ಇಳಿಕೆ

ಇದಲ್ಲದೆ, ಗ್ರಾಹಕರು ಖರೀದಿಸಿದ ಚಿನ್ನದ ಆಭರಣಗಳ ಮೌಲ್ಯವು ಕೋವಿಡ್ ನಂತರದ ಏರಿಕೆಯಾಗಿದ್ದು, ಇದು 477.4 ಟನ್‌ಗೆ ಹೆಚ್ಚಳವಾಗಿದೆ. ಇದು ವಾರ್ಷಿಕ ಶೇ.52ರಷ್ಟು ಹೆಚ್ಚಳವಾಗಿದೆ. ಇದು ಅತ್ಯಂತ ದುರ್ಬಲವಾದ 2020ರ ಮೊದಲ ತ್ರೈಮಾಸಿಕದಲ್ಲಿ ಬಲವಾದ ಸುಧಾರಣೆ ತಂದಿದೆ.

2020ರ ಆಗಸ್ಟ್ ತಿಂಗಳಲ್ಲಿ ದಾಖಲಾದ ಗರಿಷ್ಠ ಮಟ್ಟದ ಚಿನ್ನದ ಬೆಲೆಯಲ್ಲಿನ ಕುಸಿತದಿಂದಾಗಿ ಗ್ರಾಹಕರ ಬೇಡಿಕೆ ಹೆಚ್ಚಾಯಿತು. ಮೊದಲ ತ್ರೈಮಾಸಿಕದ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಶೇ. 10ರಷ್ಟು ಇಳಿಕೆ ಕಂಡುಬಂದಿದೆ, ಇದು ಜಾಗತಿಕ ಆರ್ಥಿಕ ಚೇತರಿಕೆಗೆ ಜೊತೆಯಾಗಿದೆ.

 ವರ್ಷದಿಂದ ವರ್ಷಕ್ಕೆ ಶೇ 23ರಷ್ಟು ಕಡಿಮೆಯಾಗಿದೆ

ವರ್ಷದಿಂದ ವರ್ಷಕ್ಕೆ ಶೇ 23ರಷ್ಟು ಕಡಿಮೆಯಾಗಿದೆ

ಮೊದಲ ತ್ರೈಮಾಸಿಕದಲ್ಲಿ ಕೇಂದ್ರೀಯ ಬ್ಯಾಂಕುಗಳ ನಿವ್ವಳ ಖರೀದಿಯಲ್ಲಿ ಸುಧಾರಣೆ ಕಂಡುಬಂದಿದೆ. ಜಾಗತಿಕ ಅಧಿಕೃತ ಚಿನ್ನದ ಸಂಗ್ರಹವು 95.5 ಟನ್‌ ಅಂದರೆ, ವರ್ಷದಿಂದ ವರ್ಷಕ್ಕೆ ಶೇ 23ರಷ್ಟು ಕಡಿಮೆಯಾಗಿದೆ. ಆದರೆ, ತ್ರೈಮಾಸಿಕದಿಂದ ತ್ರೈಮಾಸಿಕದಕ್ಕೆ ಶೇ.20ರಷ್ಟು ಹೆಚ್ಚಳವಾಗಿಸಿದೆ. ಹಂಗೇರಿಯ ದೊಡ್ಡ ಖರೀದಿ (+ 63 ಟನ್‌) ಮೊದಲ ತ್ರೈಮಾಸಿಕದ ಖರೀದಿಯನ್ನು ಹೆಚ್ಚಿಸಿತು. ಇದು ಟರ್ಕಿಯ ಗಣನೀಯ ಮಾರಾಟಕ್ಕೆ ಹೊಂದಿಕೆಯಾಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ತಂತ್ರಜ್ಞಾನದ ಬಳಕೆಗಾಗಿ ಚಿನ್ನದ ಬೇಡಿಕೆ ಶೇ.11ರಷ್ಟಿತ್ತು. ಏಕೆಂದರೆ ಗ್ರಾಹಕರ ವಿಶ್ವಾಸವು ಚೇತರಿಸಿಕೊಳ್ಳುತ್ತಲೇ ಇತ್ತು. ಈ ತಂತ್ರಜ್ಞಾನದ ಬೇಡಿಕೆ 81.1ಟನ್‌ನಷ್ಟಿತ್ತು. ಇದು ಐದು ವರ್ಷಗಳ ತ್ರೈಮಾಸಿಕ ಸರಾಸರಿ 80.9 ಟನ್‌ಗಿಂತ ಸ್ವಲ್ಪ ಹೆಚ್ಚಿದೆ.

ಹಿರಿಯ ಮಾರುಕಟ್ಟೆಗಳ ವಿಶ್ಲೇಷಕ ಲೂಯಿಸ್ ಸ್ಟ್ರೀಟ್

ಹಿರಿಯ ಮಾರುಕಟ್ಟೆಗಳ ವಿಶ್ಲೇಷಕ ಲೂಯಿಸ್ ಸ್ಟ್ರೀಟ್

ವಿಶ್ವ ಚಿನ್ನದ ಮಂಡಳಿಯ ಹಿರಿಯ ಮಾರುಕಟ್ಟೆಗಳ ವಿಶ್ಲೇಷಕ ಲೂಯಿಸ್ ಸ್ಟ್ರೀಟ್, "ಪ್ರಪಂಚದಾದ್ಯಂತ ದೇಶಗಳು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದಂತೆ, ಆರ್ಥಿಕ ಚಟುವಟಿಕೆಗಳು ಮತ್ತೆ ಚಿಗುರುತ್ತಿವೆ. ಪರಿಣಾಮವಾಗಿ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕರಲ್ಲಿ ಚಿನ್ನದ ಖರೀದಿ ಕುರಿತು ವಿಶ್ವಾಸ ಮರಳಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೋವಿಡ್-19 ರ ಆರಂಭಿಕ ಪರಿಣಾಮಗಳಿಂದ ಹೂಡಿಕೆದಾರರು ಚಿನ್ನವನ್ನು ಅವಲಂಬಿಸಿದ್ದರು., 2021ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಚೇತರಿಕೆಯ ವಿಶ್ವಾಸ ಹೆಚ್ಚಾದಂತೆ ಮತ್ತು ಯುಎಸ್ ಬಡ್ಡಿದರಗಳು ತೀವ್ರವಾಗಿ ಏರಿದಂತೆ ಚಿನ್ನದ ಬೆಲೆಯಲ್ಲಿ ಮಾರಾಟವಾಯಿತು" ಎಂದಿದ್ದಾರೆ.

"ಇದರ ಹೊರತಾಗಿಯೂ, ಚಿನ್ನವು ಸಮತೋಲಿತ ಪೋರ್ಟ್ಫೋಲಿಯೊಗಳಲ್ಲಿ ಅದರ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ, ವಿಶೇಷವಾಗಿ ಹಣದುಬ್ಬರ ಏರಿಕೆಯಾಗುವ ಅಪಾಯವಿದೆ. ವರ್ಷದ ಉಳಿದ ಭಾಗಗಳನ್ನು ಎದುರು ನೋಡುತ್ತಿರುವಾಗ, ಚಿನ್ನದ ಮಾರುಕಟ್ಟೆಯ ಮುಖ್ಯ ಚಾಲಕರು ಉತ್ತಮವಾಗಿ ಬೆಂಬಲಿಸುತ್ತಿರುವುದರಿಂದ ಆಶಾವಾದಿಯಾಗಿರಲು ಕಾರಣಗಳನ್ನು ನಾವು ನೋಡುತ್ತೇವೆ " ಎಂದಿದ್ದಾರೆ.

 ಮೊದಲ ತ್ರೈಮಾಸಿಕದಲ್ಲಿ ಶೇ.23ರಷ್ಟು ಕುಸಿತ

ಮೊದಲ ತ್ರೈಮಾಸಿಕದಲ್ಲಿ ಶೇ.23ರಷ್ಟು ಕುಸಿತ

ಒಟ್ಟು ಬೇಡಿಕೆ (ಒಟಿಸಿ ಹೊರತುಪಡಿಸಿ) ವರ್ಷದಿಂದ ವರ್ಷಕ್ಕೆ ಮೊದಲ ತ್ರೈಮಾಸಿಕದಲ್ಲಿ ಶೇ.23ರಷ್ಟು ಅಂದರೆ 815.7 ಟನ್‌ ಗೆ ಕುಸಿತಕಂಡಿದೆ.

* ಒಟ್ಟು 177.9 ಟನ್‌ ಒಟ್ಟು ಇಟಿಎಫ್‌ಗಳು ಹೊರಹರಿವುಗಳು ಕಂಡಿದೆ.
* 2016ರ ನಾಲ್ಕನೇ ತ್ರೈಮಾಸಿಕದಲ್ಲಿ ಬಾರ್‌ ಮತ್ತು ಕಾಯಿನ್‌ಗಳ ಬೇಡಿಕೆ ತನ್ನ ಅತ್ಯುತ್ತಮ ಬೇಡಿಕೆ ಅಂದರೆ 339.5 ಟನ್‌ ಗಳಿಸಿತ್ತು.
* 2020ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಆಭರಣ ಬೇಡಿಕೆ ಶೇ.52ರಷ್ಟು ಅಂದರೆ 477.4 ಟನ್‌ಗಳಷ್ಟು ಸುಧಾರಣೆ ಮಾಡಿದೆ.
* 2021ರ ಮೊದಲ ತ್ರೈಮಾಸಿಕದಲ್ಲಿ ಕೇಂದ್ರ ಬ್ಯಾಂಕ್‌ಗಳ 95ಟನ್‌ಗಳ ನಿವ್ವಳ ಖರೀದಿದಾರರಾಗಿದ್ದರು.
* ತಂತ್ರಜ್ಞಾನ ವಲಯದಲ್ಲಿ ಬೇಡಿಕೆ ವರ್ಷದಿಂದ ವರ್ಷದಿಂದ ಶೇ.11ರಷ್ಟು ಅಂದರೆ 81.1 ಟನ್‌ಗೆ ಏರಿಕೆಯಾಗಿದೆ.
* ವರ್ಷದಿಂದ ವರ್ಷಕ್ಕೆ ಒಟ್ಟು ಪೂರೈಕೆ ಶೇ.4ರಷ್ಟು ಕುಸಿತ ಕಂಡಿದೆ.

* ಚಿನ್ನದ ಬೇಡಿಕೆ ಟ್ರೆಂಡ್‌ಗಳು 2021ರ ಮೊದಲ ತ್ರೈಮಾಸಿಕದ ವರದಿಯ ಮೆಟಲ್‌ ಫೋಕಸ್‌ ಒದಗಿಸಿರುವ ಸಮಗ್ರ ದತ್ತಾಂಶ.

English summary
Q1 gold demand (excluding OTC) was 815.7t, virtually on a par with Q4 2020, but down 23% compared with Q1 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X