• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಳ್ಸುದ್ದಿ ವಿರುದ್ಧ ಸಮರ, ವಾಟ್ಸಾಪ್ ಸಂದೇಶ ಹಂಚಿಕೆಗೆ ಕಡಿವಾಣ

|

ಬೆಂಗಳೂರು, ಏಪ್ರಿಲ್ 6: ಫೇಸ್ಬುಕ್ ಒಡೆತನದ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಕೊರೊನಾವೈರಸ್ ವಿರುದ್ಧ ಜಾಗತಿಕವಾಗಿ ನಿರ್ಣಾಯಕ ಹೋರಾಟದಲ್ಲಿ ವಿವಿಧ ದೇಶಗಳು ತೊಡಗಿವೆ. ಆದರೆ ಹೋರಾಟದ ದಿಕ್ಕು ತಪ್ಪಿಸಲು ಕಿಡಿಗೇಡಿಗಳು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣ, ಚಾಟಿಂಗ್ ಆಪ್ ಮೂಲಕ ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ವಾಟ್ಸಾಪ್ ನಿರ್ಧರಿಸಿದೆ. ಇನ್ಮುಂದೆ ನಿಮಗೆ ಬಂದ ಸಂದೇಶಗಳನ್ನೆಲ್ಲ ಬೇಕಾಬಿಟ್ಟಿ ಹಂಚಿಕೆ ಮಾಡುವುದು ಕಷ್ಟವಾಗಲಿದೆ.

ಫಾರ್ವರ್ಡ್ ಮಾಡುವ ಸಂದೇಶಗಳನ್ನು ಒಂದು ಬಾರಿಗೆ ಒಂದು ಚಾಟ್‌ಗೆ ಮಾತ್ರ ಸೀಮಿತಗೊಳಿಸುವುದಕ್ಕೆ ವಾಟ್ಸಾಪ್ ಮುಂದಾಗಿದೆ. ಒಂದೇ ಸಂದೇಶವನ್ನು ಐದು ಬಾರಿ ಹೆಚ್ಚು ಫಾರ್ವರ್ಡ್ ಮಾಡಲಾಗಿದ್ದು, ಈ ರೀತಿ ಪದೇ ಪದೇ ಫಾರ್ವರ್ಡ್ ಮಾಡುವ ಸಂದೇಶವನ್ನು ಸ್ವೀಕರಿಸಿದರೆ, ಅಂಥಾ ಸಂದೇಶವನ್ನು ನೀವು ಒಂದು ಬಾರಿ ಮಾತ್ರ ಫಾರ್ವರ್ಡ್ ಮಾಡಲು ಸಾಧ್ಯವಾಗಲಿದೆ. ಅಂದರೆ, ಒಂದೇ ಸಮಯದಲ್ಲಿ ಒಂದೇ ಚಾಟ್‌ಗೆ ಕಳುಹಿಸಲು ಸಾಧ್ಯವಾಗುತ್ತದೆ.

15 ಸೆಕೆಂಡ್‌ಗೆ ಇಳಿಕೆಯಾದ ವಾಟ್ಸ್ ಅಪ್ ವಿಡಿಯೋ ಸ್ಟೇಟಸ್

2018ರಲ್ಲಿ ಒಮ್ಮೆಗೆ 250 ಗುಂಪುಗಳಿಗೆ ಫಾರ್ವರ್ಡ್ ಮೆಸೇಜ್ ಕಳಿಸುವ ಅವಕಾಶ ಇತ್ತು. ಆದರೆ, ಇದೇ ರೀತಿ ಸುಳ್ಸುದ್ದಿ, ದ್ವೇಷಪೂರಿತ ಸುದ್ದಿ ಹಂಚಿಕೆ ಹೆಚ್ಚಾಗಿದ್ದರಿಂದ 2019ರಲ್ಲಿ 5 ಗುಂಪಿಗೆ ಮಿತಿಗೊಳಿಸಲಾಯಿತು. ಈಗ ಒಂದು ಗುಂಪಿಗೆ ಇಳಿಸಲಾಗಿದೆ. ಇದರಿಂದ ಜಾಗತಿಕವಾಗಿ ಸುಮಾರು ಶೇ 25ರಷ್ಟು ಸುಳ್ಸುದ್ದಿ ಹಬ್ಬುವುದನ್ನು ತಡೆಗಟ್ಟಲಾಗಿದೆ ಎಂದು ವಾಟ್ಸಾಪ್ ಹೇಳಿದೆ.

ಸಂಪೂರ್ಣ ಕಡಿವಾಣ ಸಾಧ್ಯವಿಲ್ಲ

ಸಂಪೂರ್ಣ ಕಡಿವಾಣ ಸಾಧ್ಯವಿಲ್ಲ

ಇದರಿಂದ ಕೊರೊನಾವೈರಸ್, COVID-19 ಬಗ್ಗೆ ತಪ್ಪು ಮಾಹಿತಿ, ಸುಳ್ಳುಸುದ್ದಿ ಹರಡುವುದನ್ನು ನಿರ್ಬಂಧಿಸಲು ಅಥವಾ ತಡೆಯಲು ಸಾಧ್ಯವಿಲ್ಲ. ಆದರೆ, ವೈರಲ್ ಸಂದೇಶ, ವಿಡಿಯೋ, ಚಿತ್ರಗಳನ್ನು ತ್ವರಿತವಾಗಿ ಮತ್ತೊಬ್ಬರಿಗೆ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗತಿಗೆ ದೂಡಬಹುದು. ವಾಟ್ಸಾಪ್ ಒಂದು ಕರೋನವೈರಸ್ ಮಾಹಿತಿ ಕೇಂದ್ರವನ್ನು ಸಹ ಪ್ರಾರಂಭಿಸಿದ್ದು, COVID-19- ಸಂಬಂಧಿತ ಪ್ರಶ್ನೆಗಳನ್ನು ಚರ್ಚಿಸುವ ವಾಟ್ಸಾಪ್ ಚಾಟ್‌ಬಾಟ್‌ಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ಕಾರ್ಯ ನಿರ್ವಹಿಸುತ್ತಿವೆ.

ಭಾರತದಲ್ಲಿ ಹೆಲ್ಪ್ ಡೆಸ್ಕ್, ಚಾಟ್ ಬಾಟ್

ಭಾರತದಲ್ಲಿ ಹೆಲ್ಪ್ ಡೆಸ್ಕ್, ಚಾಟ್ ಬಾಟ್

ಕೋವಿಡ್ -19 ಕುರಿತ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು, ಅವರ ಅಗತ್ಯ ಸಂದರ್ಭದಲ್ಲಿ ಸಹಾಯ ಮಾಡಲು ಭಾರತ ಸರ್ಕಾರವು 'ಮೈಗೋವ್ ಕೊರೋನಾ ಹೆಲ್ಪ್‌ಡೆಸ್ಕ್' ಎಂಬ ವಾಟ್ಸಾಪ್ ಚಾಟ್‌ಬಾಟ್ ಹಾಗೂ ಟೆಲಿಗ್ರಾಂ ಗ್ರೂಪ್ ಆರಂಭಿಸಿದೆ. ಕೊರೊನಾ ಕುರಿತು ನಿಮಗೆ ಕಾಡುವ ಅನುಮಾನ, ಕುತೂಹಲಗಳಿಗೆ ಈ ಆಪ್ ನಲ್ಲಿ ಉತ್ತರ ಪಡೆಯಬಹುದು. ಕೊರೊನಾ ಕುರಿತಂತೆ ಸಂದೇಶಗಳಿದ್ದರೂ ಈ ವಾಟ್ಸಾಪ್ ಚಾಟ್‌ಬಾಟ್‌ ಮೂಲಕ ಸಿಗುತ್ತದೆ.

ಸರಕಾರವನ್ನೇ ಬೆಚ್ಚಿಬೀಳಿಸಿದ ಈ 5 ಸುಳ್ಳು ಸುದ್ದಿಯನ್ನು ಯಾವ ಕಾರಣಕ್ಕೂ ನಂಬಬೇಡಿ

ವಾಟ್ಸಾಪ್ ಚಾಟ್ ಬಾಟ್ ಬಳಸಿ

ವಾಟ್ಸಾಪ್ ಚಾಟ್ ಬಾಟ್ ಬಳಸಿ

ವಾಟ್ಸಾಪ್ ಸಂದೇಶವನ್ನು ಕಳುಹಿಸಿ +91 9013151515 ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸುವ ಮೂಲಕ ಚಾಟ್‌ಬಾಟ್ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಮೂಲಭೂತ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ವಾಟ್ಸ್‌ಆಪ್ ಮೂಲಕ ಒಂದು ಬಟನ್ ಪ್ರೆಸ್ ಮಾಡಿ ಸರಿಯಾದ ಮಾಹಿತಿಯನ್ನು ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶ.

ವಾಟ್ಸಾಪ್ ನಲ್ಲಿ ನಕಲಿ ಸುದ್ದಿ ಪತ್ತೆ ಹೇಗೆ?

ವಾಟ್ಸಾಪ್ ನಲ್ಲಿ ನಕಲಿ ಸುದ್ದಿ ಪತ್ತೆ ಹೇಗೆ?

ನಕಲಿ ಸುದ್ದಿ, ಹೆಚ್ಚು ಫಾರ್ವಡ್ ಆಗಿರುವ ಸಂದೇಶದ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಮಾರ್ಗ.

* ಆಗಾಗ್ಗೆ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಡಬ್ಬಲ್ ಬಾಣ(arrow)ಗಳಿಂದ ಗುರುತು ಮಾಡಿರುತ್ತದೆ.

* ನೀವು ಫಾರ್ವರ್ಡ್ ಮಾಡಿದ ಸಂದೇಶವನ್ನು ಸ್ವೀಕರಿಸಿದಾಗ, ಸಂದೇಶವನ್ನು ನಿಮಗೆ ಈಗ ಕಳುಹಿಸಿದ ವ್ಯಕ್ತಿಯೇ ಆ ಸಂದೇಶದ ಕರ್ತೃವೇ ಅಲ್ಲವೇ, ಎಂಬುದು ಸಂದೇಶದ ಜೊತೆಗೆ ಬರುವ ಬಾಣದ ಗುರುತಿನಿಂದ ತಿಳಿಯುತ್ತದೆ. ಸ್ವಂತ ಸಂದೇಶವಾದರೆ ಬಾಣದ ಗುರುತು ಇರುವುದಿಲ್ಲ.

* ಹೆಚ್ಚಿನ ಮಾಹಿತಿಗೆ ನಿಮಗೆ ಬಂದ ಸಂದೇಶದ ಮೇಲೆ ಒಮ್ಮೆ ಒತ್ತಿ, info ಆಯ್ಕೆಯನ್ನು ಒತ್ತಿ ಎಷ್ಟು ಬಾರಿ ಸಂದೇಶವನ್ನು ಫಾರ್ವರ್ಡ್ ಮಾಡಲಾಗಿದೆ ಎಂಬುದನ್ನು ನೋಡ ಬಹುದಾಗಿದೆ. ಈ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುವ ಸೌಲಭ್ಯವು ಸಿಗಲಿದೆ. ಇದಿನ್ನು ಬೀಟಾ ವರ್ಷನ್ ನಲ್ಲಿದ್ದು, ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಿಲ್ಲ.

English summary
Facebook-owned chat app WhatsApp is to impose a strict new limit on message forwarding to slow the dissemination of fake news, the company has announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X