Stock Market: ಷೇರುಮಾಕಟ್ಟೆಯಲ್ಲಿ ಮೂರು ವರ್ಷಗಳಲ್ಲಿ ₹1.8 ಲಕ್ಷ ಕೋಟಿ ಕಳೆದುಕೊಂಡ 1.1 ಕೋಟಿ ಟ್ರೇಡರ್ಸ್!
ಷೇರುಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಜೂಜಾಡುವುದಕ್ಕೆ ಸಮ ಎಂದು ಕೆಲವರು ಹೇಳುತ್ತಾರೆ. ಆದರೆ ನಿಜಕ್ಕೂ ಷೇರುಮಾರುಕಟ್ಟೆ ಎನ್ನುವುದು ಜೂಜಾಟವಲ್ಲ, ನಿಮಗೆ ಅಧ್ಯಯನ ಮಾಡುವ ಆಸಕ್ತಿ, ಹೂಡಿಕೆ, ತಾಳ್ಮೆ ಇದ್ದರೆ ಲಕ್ಷಗಳನ್ನು ಕೋಟಿಗಳನ್ನಾಗಿ ಮಾಡುವ ಅದ್ಭುತ ತಾಣ ಎನ್ನುವುದು ದೀರ್ಘಾವಧಿ ಹೂಡಿಕೆದಾರರ ಮಾತುಗಳು. ಸೆಬಿ ಕೂಡ ಇತ್ತೀಚೆಗೆ ವರದಿಯನ್ನು ಬಿಡುಗಡೆ ಮಾಡಿದ್ದು ಪ್ಯೂಚರ್ ಮತ್ತು ಆಪ್ಷನ್ (F&O) ಮಾರುಕಟ್ಟೆಯಲ್ಲಿ ಟ್ರೇಡರ್ಸ್‌ಗಳು ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಒಟ್ಟು 1.8 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದೆ.
ಸೆಬಿ ಅಧ್ಯಯನದ ಪ್ರಕಾರ ಸುಮಾರು ಸುಮಾರು 1 ಕೋಟಿಗಿಂತ ಹೆಚ್ಚಿನ ಹೂಡಿಕೆದಾರರಲ್ಲಿ 93 ಪ್ರತಿಶತ ಅಥವಾ 10 ವ್ಯಾಪಾರಿಗಳಲ್ಲಿ ಒಂಬತ್ತು ಮಂದಿ ಪ್ಯೂಚರ್ ಮತ್ತು ಆಪ್ಷನ್ (F&O) ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ್ದಾರೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೇಳಿದೆ.

ಸುಮಾರು 4 ಲಕ್ಷ ವ್ಯಾಪಾರಿಗಳು 2022ರಿಂದ 2024ರವರೆಗೆ ಮುರು ಆರ್ಥಿಕ ವರ್ಷಗಳಲ್ಲಿ ವಹಿವಾಟು ವೆಚ್ಚಗಳನ್ನು ಒಳಗೊಂಡಂತೆ ತಲಾ 28 ಲಕ್ಷ ರೂಪಾಯಿ ಸರಾಸರಿ ನಷ್ಟ ಅನುಭವಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
100 ರಲ್ಲಿ ಕೇವಲ ಒಂದು ಪ್ರತಿಶತದಷ್ಟು ವೈಯಕ್ತಿಕ (Individual) ವ್ಯಾಪಾರಿಗಳು ಮಾತ್ರ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದೆ. ಇದು ಮಾರುಕಟ್ಟೆಯಲ್ಲಿ ಪ್ರತಿದಿನ ಹಣ ಗಳಿಸಬಹುದು ಎಂದು ಕನಸು ಕಾಣುವವರಿಗೆ ದೊಡ್ಡ ಆಘಾತವಾಗಿದೆ.
2023ರ ಜನವರಿಯಲ್ಲಿ ಸೆಬಿ ಅಧ್ಯಯನ ವರದಿಯಲ್ಲಿ 2022ರ ಆರ್ಥಿಕ ವರ್ಷದಲ್ಲಿ 89 ರಷ್ಟು ವೈಯಕ್ತಿಕ ಇಕ್ವಿಟಿ ಮತ್ತು ಪ್ಯೂಚರ್ ಮತ್ತು ಆಪ್ಷನ್ (F&O) ಟ್ರೇಡರ್ಸ್‌ಗಳು ಹಣ ಕಳೆದುಕೊಂಡಿದ್ದಾರೆ ಎಂದು ಹೇಳಿತ್ತು.
ವೈಯಕ್ತಿಕ ಟ್ರೇಡರ್ಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದರೆ, 2024ರ ಆರ್ಥಿಕ ವರ್ಷದಲ್ಲಿ ಪ್ರೊಪ್ರಿಟರಿ ವ್ಯಾಪಾರಿಗಳು 33,000 ಕೋಟಿ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐಗಳು) ರೂ 28,000 ಕೋಟಿಗಳ ಲಾಭ ಮಾಡಿಕೊಂಡಿದ್ದಾರ ಎಂದು ಅಧ್ಯಯನ ಹೇಳಿದೆ.
ಟ್ರೇಡಿಂಗ್ ಅಪಾಯಕಾರಿ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು ಹೆಚ್ಚುವುದು ಎಷ್ಟು ನಿಜವೋ ಸಂಪತ್ತನ್ನು ಕಳೆದುಕೊಳ್ಳುವ ಅಪಾಯ ಇರುವುದು ಕೂಡ ಅಷ್ಟೇ ಸತ್ಯ. ಟ್ರೇಡಿಂಗ್‌ನಲ್ಲಿ ಲಾಭ ಪಡೆದವರಿಗಿಂತ ನಷ್ಟ ಮಾಡಿಕೊಂಡವರ ಸಂಖ್ಯೆಯೇ ಹೆಚ್ಚು, ಟ್ರೇಡಿಂಗ್ ಮಾಡುವವರು ಅದಕ್ಕಾಗಿಯೇ ಹೆಚ್ಚಿನ ಸಮಯ, ಅಧ್ಯಯನ ಬೇಕಾಗುತ್ತದೆ. ಕಡಿಮೆ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಇಲ್ಲವಾದಲ್ಲಿ ನೀವು ಕಷ್ಟಪಟ್ಟು ಸಂಪಾದನೆ ಮಾಡಿದ ಹಣ, ನಿಮ್ಮ ಕಣ್ಣಮುಂದೆಯೇ ಕರಗಿಹೋಗುತ್ತದೆ.
ಟ್ರೇಡಿಂಗ್ ಮಾಡುವುದಕ್ಕಿಂತ ದೀರ್ಘಕಾಲದ ಹೂಡಿಕೆ ನಿಮ್ಮ ಹಣ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಲಾಭವನ್ನು ತಂದುಕೊಡುತ್ತದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.












Click it and Unblock the Notifications