Stock Market: 8 ರೂಪಾಯಿ ಷೇರು ಬೆಲೆ ನಾಲ್ಕು ವರ್ಷದಲ್ಲಿ 947 ರೂಪಾಯಿಗೆ ಏರಿಕೆ
ಷೇರು ಮಾರುಕಟ್ಟೆ ಖಂಡಿತವಾಗಿ ಜೂಜಾಟವಲ್ಲ, ಅದೊಂದು ಕೌಶಲ್ಯ ಬೇಡುವ, ಹಣವೇ ಹಣವನ್ನು ದುಡಿಯುವಂತೆ ಮಾಡುವ ಮಾರ್ಗ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರೆಲ್ಲ ಭಾರಿ ಪ್ರಮಾಣದಲ್ಲಿ ಲಾಭ ಮಾಡಲು ಸಾಧ್ಯವಾ ಎಂದರೆ, ಹೌದು ಮತ್ತು ಇಲ್ಲ ಎನ್ನಬಹುದು. ಷೇರು ಮಾರುಕಟ್ಟೆ ಸಮಯ, ತಾಳ್ಮೆ, ಅಧ್ಯಯನ ಬೇಡುವ ಕ್ಷೇತ್ರ. ನೀವು ಹೂಡಿಕೆ ಬಗ್ಗೆ ಹೆಚ್ಚು ಹೆಚ್ಚು ತಿಳಿದು, ಅಧ್ಯಯನ ಮಾಡಿ ಸರಿಯಾದ ಕಡೆ ಹೂಡಿಕೆ ಮಾಡಿದರೆ ಮಾತ್ರ ಹಣ ಹಣವನ್ನು ಬೆಳೆಸುತ್ತದೆ.
ಈ ಕಂಪನಿಯ ಷೇರು ಅದಕ್ಕೊಂದು ಉದಾಹರಣೆ 2020ರಲ್ಲಿ ಕೇವಲ 7.58 ರೂಪಾಯಿ ಇದ್ದ ಈ ಕಂಪನಿ ಷೇರು ಬೆಲೆ ಇಂದು 947 ರೂಪಾಯಿಗೆ ಏರಿಕೆಯಾಗಿದೆ. ಅಂದರೆ 2020 ರಲ್ಲಿ ನೀವು ಏನಾದರೂ ಈ ಕಂಪನಿ ಷೇರುಗಳ ಮೇಲೆ 7580 ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು 9,47,000 ರೂಪಾಯಿ ರಿಟರ್ನ್ಸ್ ಸಿಗುತ್ತಿತ್ತು.

ಯುಎಸ್ ಕಂಪನಿ ಸ್ವಾಧೀನ
ಎರಾಯ ಲೈಫ್‌ಸ್ಪೇಸ್ (Eraaya Lifespaces) ಇದೀಗ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿರುವ ಕಂಪನಿಯಾಗಿದೆ. ಎರಾಯ ಲೈಫ್‌ಸ್ಪೇಸ್ ಎಬಿಕ್ಸ್ ಇಂಕ್. ಯುಎಸ್‌ಎ
(Ebix Inc. USA) ಮತ್ತು ಅದರ ಜಾಗತಿಕ ಅಂಗಸಂಸ್ಥೆಗಳನ್ನು ಯಶಸ್ವಿಯಾಗಿ ಸ್ವಾಧೀನಪಡಿಸಿಕೊಂಡಿದೆ. 1273.25 ಕೋಟಿ ರೂಪಾಯಿಯನ್ನು ಯಶಸ್ವಿಯಾಗಿ ಪಾವತಿ ಮಾಡುವ ಮೂಲಕ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಷೇರು ಬೆಲೆ ಅಪ್ಪರ್ ಸರ್ಕ್ಯೂಟ್‌ಗೆ ತಲುಪಿದೆ. ಶುಕ್ರವಾರ ಕೂಡ ಷೇರು ಬೆಲೆ 5 ಪ್ರತಿಶತ ಅಂದರೆ 45.10 ರೂಪಾಯಿ ಏರಿಕೆ ಕಂಡಿದ್ದು 947 ರೂಪಾಯಿಯಲ್ಲಿ ಟ್ರೇಡ್ ಆಗುತ್ತಿದೆ.
"ಈ ಸ್ವಾಧೀನ ಪ್ರಕ್ರಿಯೆಯು ಮಹತ್ವದ ಪ್ರಗತಿಗೆ ಸಂಕೇತವಾಗಿದೆ. ಜಾಗತಿಕ ಮಟ್ಟದಲ್ಲಿ ಎಲ್ಲಾ ಪಾಲುದಾರರಿಗೆ ಉತ್ತಮ ಲಾಭ ತಂದುಕೊಟ್ಟಿದೆ. ಎಬಿಕ್ಸ್ ಹೊಸ ಯುಗವನ್ನು ಪರಿಚಯಿಸಲು ನಾವು ಉತ್ಸಾಹದಲ್ಲಿದ್ದೇವೆ. ಎರಾಯ ಮತ್ತು ಎಬಿಕ್ಸ್ ಎರಡೂ ಕಂಪನಿಗಳ ಬೆಳವಣಿಗೆಗೆ ವೇದಿಕೆ ನೀಡುತ್ತದೆ" ಎಂದು ಎರಾಯಾ ಲೈಫ್‌ಸ್ಪೇಸ್ ಲಿಮಿಟೆಡ್‌ನಲ್ಲಿ ವೈಸ್ ಚೇರ್ಮನ್ ವಿಕಾಸ್ ಗಾರ್ಗ್ ಹೇಳಿದ್ದಾರೆ.
ಎರಾಯ ಲೈಫ್‌ಸ್ಪೇಸ್ ತನ್ನ ಷೇರುದಾರರಿಗೆ ಭರ್ಜರಿ ಆದಾಯವನ್ನೇ ತಂದುಕೊಟ್ಟಿದೆ. ಕಳೆದ ಒಂದು ವರ್ಷದಲ್ಲಿ ಕೂಡ ಹೂಡಿಕೆದಾರರು ಭರ್ಜರಿ ಲಾಭ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಷೇರು ಬೆಲೆ 731% ರಷ್ಟು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ 12,700% ರಷ್ಟು ಏರಿಕೆಯಾಗಿದೆ. ಈ ಕಂಪನಿಯು ಬಿಎಸ್‌ಇಯಲ್ಲಿ ₹1,659 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದ್ದು, ಸ್ಮಾಲ್ ಕ್ಯಾಪ್ ಕಂಪನಿಯಾಗಿದೆ.
Disclaimer: ಈ ಮೇಲಿನ ವಿವರಣೆಯು ಕೇವಲ ಮಾಹಿತಿ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ನೀಡಲಾಗಿದೆ. ಇದು ಹೂಡಿಕೆ ಮಾಡಲು ಶಿಫಾರಸ್ಸು ಆಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಪ್ರಮಾಣೀಕೃತ ತಜ್ಞರ ಜೊತೆ ಪರಿಶೀಲಿಸಿ, ಹೆಚ್ಚಿನ ಅಧ್ಯಯನ ಮಾಡಿ ನಿರ್ಧಾರ ಮಾಡುವಂತೆ ಕೋರಲಾಗಿದೆ.












Click it and Unblock the Notifications