ಷೇರುಪೇಟೆ: ಸೆನ್ಸೆಕ್ಸ್ 800ಕ್ಕೂ ಹೆಚ್ಚು ಪಾಯಿಂಟ್ಸ್ ಜಿಗಿತ
ನವದೆಹಲಿ, ಜನವರಿ 19: ಭಾರತೀಯ ಷೇರುಪೇಟೆಯ ನಾಗಾಲೋಟ ಮುಂದುವರಿದಿದ್ದು, ಮಂಗಳವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 834 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 14,500ರ ಗಡಿದಾಟಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 834.02 ಪಾಯಿಂಟ್ಸ್ ಅಥವಾ ಶೇಕಡಾ 1.72ರಷ್ಟು ಏರಿಕೆಗೊಂಡು 49,398 ಪಾಯಿಂಟ್ಸ್ ದಾಖಲಿಸಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 239.85 ಪಾಯಿಂಟ್ಸ್ ಅಥವಾ ಶೇಕಡಾ 1.68ರಷ್ಟು ಏರಿಕೆಗೊಂಡು 14,521.15 ಪಾಯಿಂಟ್ಸ್ ತಲುಪಿದೆ.
ಇಂದಿನ ವಹಿವಾಟಿನಲ್ಲಿ 2,077 ಷೇರುಗಳು ಏರಿಕೆ ಸಾಧಿಸಿದರೆ, 861 ಷೇರುಗಳು ಕುಸಿದಿವೆ ಮತ್ತು 139 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಬಜಾಜ್ ಫಿನ್‌ಸರ್ವ್, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿ ಷೇರುಗಳಾಗಿದ್ದು, ಟೆಕ್ ಮಹೀಂದ್ರಾ, ಐಟಿಸಿ, ವಿಪ್ರೋ, ಎಂ ಆಂಡ್ ಎಂ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿವೆ.
ಏಷ್ಯಾದ ಮಾರುಕಟ್ಟೆಗಳು ಪ್ರತಿಬಿಂಬವಾಗಿ ಭಾರತೀಯ ಷೇರುಪೇಟೆಯು ಇಂದು ಏರಿಕೆ ದಾಖಲಿಸಿದೆ. 2020 ರಲ್ಲಿ ಚೀನಾದ ಆರ್ಥಿಕತೆಯು ಬೆಳೆಯುತ್ತಿರುವ ಕೆಲವೇ ರಾಷ್ಟ್ರಗಳಲ್ಲಿ ಒಂದು ಎಂದು ಡೇಟಾ ತೋರಿಸಿದ ನಂತರ ಏಷ್ಯಾದ ಷೇರುಗಳು ಏರಿಕೆಯಾಗಿದೆ.
2020 ರಲ್ಲಿ ಚೀನಾದ ಆರ್ಥಿಕತೆಯು ಶೇಕಡಾ 2.3 ರಷ್ಟು ಏರಿಕೆಯಾದರೆ, ಅಮೆರಿಕಾ, ಯುರೋಪ್ ಮತ್ತು ಜಪಾನ್ ಕೊರೊನಾವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಹೆಣಗಾಡಿದವು. ಇದರ ಹೊರತಾಗಿಯು ಚೀನಾ ಶೇಕಡಾ 2.3 ರಷ್ಟು ಏರಿಕೆಯಾಗಿದೆ ಎಂದು ಅಂಕಿ-ಅಂಶಗಳು ತೋರಿಸಿವೆ.
ಈ ಅಂಶಗಳು ನಿರಂತರ ಬಂಡವಾಳದ ಒಳಹರಿವು ಭಾರತೀಯ ಮಾರುಕಟ್ಟೆಗೆ ಆಧಾರವಾಗಿದೆ. ಶೀಘ್ರದಲ್ಲೇ ಬಂಡವಾಳದ ಒಳಹರಿವಿನ ಪ್ರವೃತ್ತಿಯಲ್ಲಿನ ಬದಲಾವಣೆಯನ್ನು ಮಾರುಕಟ್ಟೆಯು ನೋಡುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications