ವಿಜಯ್ ಮಲ್ಯ ಜತೆಗೆ 5,600 ಮಂದಿ ಸುಸ್ತಿದಾರರು

Posted By:
Subscribe to Oneindia Kannada

ಬೆಂಗಳೂರು, ಜುಲೈ 19 : ಉದ್ಯಮಿ ವಿಜಯ್ ಮಲ್ಯ, ಅದಾನಿ ಸೇರಿದಂತೆ ದೇಶದ ಎಲ್ಲಾ ಸ್ತರದ ವ್ಯಕ್ತಿಗಳಿಂದ ಬ್ಯಾಂಕುಗಳಿಗೆ ಸುಸ್ತಿದಾರರಿಂದ ಸರಿ ಸುಮಾರು 58,790 ಕೋಟಿ ರು ಬಾಕಿ ಮೊತ್ತ ಬರಬೇಕಿದೆ ಎಂದು ಎಐಬಿಇಎ ಪ್ರಕಟಿಸಿದೆ.

ಮಾರ್ಚ್ 2016 ಲೆಕ್ಕಾಚಾರದಂತೆ ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳಿಗೆ 58,790 ಕೋಟಿ ರು ಬಾಕಿ ಮೊತ್ತ ಬರಬೇಕಿದ್ದು, 5,600 ಉದ್ದೇಶಪೂರ್ವಕ ಸುಸ್ತಿದಾರರನ್ನು ಗುರುತಿಸಲಾಗಿದೆ. [ಬ್ಯಾಂಕ್‌ಗಳಿಗೆ ಕೇಂದ್ರದಿಂದ 22 ಸಾವಿರ ಕೋಟಿ ರು]

AIBEA names 5,600 defaulters

ಈ ಪೈಕಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 1,030 ಸುಸ್ತಿದಾರರು 12, 931 ಕೋಟಿ ರು ಸಾಲ ಪಡೆದಿದ್ದಾರೆ ಎಂದು ಆಲ್ ಇಂಡಿಯಾ ಬ್ಯಾಂಕ್ ಎಪ್ಲಾಯೀಸ್ ಅಸೋಸಿಯೇಷನ್ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್ ವೆಂಕಟಾಚಲ ಅವರು ದಿ ಹಿಂದೂ ಪತ್ರಿಕೆಗೆ ಹೇಳಿದ್ದಾರೆ.

ಈ ಪಟ್ಟಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎರಡನೇ ಸ್ಥಾನದಲ್ಲಿದ್ದು, 698 ಸುಸ್ತಿದಾರರಿಂದ 9,445 ಕೋಟಿ ರು ನಿರೀಕ್ಷೆಯಲ್ಲಿದೆ. ಉಳಿದಂತೆ ಪಟ್ಟಿ ಹೀಗಿದೆ:
* ಸೆಂಟ್ರಲ್ ಬ್ಯಾಂಕ್ : 639 ಸಂಸ್ಥೆ, 3,574 ಕೋಟಿ ರು
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ : 611 ಸುಸ್ತಿದಾರರು-2,990 ಕೋಟಿ ರು.
* ಐಒಬಿ- ಇಂಡಿಯನ್ ಟೆಕ್ನೋಮ್ಯಾಕ್ ಕಂಪನಿಯಿಂದ 1,380 ಕೋಟಿ ರು

ಟಾಪ್ ಸುಸ್ತಿದಾರ ಸಂಸ್ಥೆಗಳು:

* ವಿನ್ ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ - 2,266 ಕೋಟಿ ರು.
* ಜೂಮ್ ಡೆವಲಪರ್ಸ್ : 1,710 ಕೋಟಿ ರು
* ಕಿಂಗ್ ಫಿಷರ್ ಏರ್ ಲೈನ್ಸ್ : 1,201 ಕೋಟಿ ರು-ಎಸ್ ಬಿಐಗೆ ಮಾತ್ರ
* ಫಾರೇವರ್ ಪ್ರೆಷಿಯಸ್ ಜ್ಯುವೆಲ್ಲರಿ ಅಂಡ್ ಡೈಮಂಡ್ಸ್ : 1,002 ಕೋಟಿ ರು
* ಬೆಟಾ ನಾಪ್ಥೋಲ್ : 958 ಕೋಟಿ ರು
* ಡೆಕ್ಕನ್ ಕ್ರಾನಿಕಲ್ : 884 ಕೋಟಿ ರು
* ಎಸ್ ಕುಮಾರ್ಸ್ : 600 ಕೋಟಿ ರು
(ಏಜೆನ್ಸೀಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All India Bank Employees’ Association (AIBEA) has announced the names of 5,600 wilful defaulters, who have collectively owe public and private sector banks over Rs.58,790 crore as of March 2016.
Please Wait while comments are loading...