ಪ್ರೇಯಸಿ ಸಿಗಲಿಲ್ಲ ಎಂದು ಬೈಯಪ್ಪನಹಳ್ಳಿ ಬಳಿ ರೈಲಿಗೆ ತಲೆಕೊಟ್ಟ ಯುವಕ
ಬೆಂಗಳೂರು, ಫೆಬ್ರವರಿ 25: ಪ್ರೀತಿಸಿದವಳು ಸಿಗಲಿಲ್ಲ ಎಂದು ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಪ್ರೀತಿಸಿದ ಯುವತಿಗೆ ಬೇರೊಬ್ಬನ ಜೊತೆ ನಿಶ್ಚಿತಾರ್ಥವಾಗಿದ್ದರಿಂದ ನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೈಯಪ್ಪನಹಳ್ಳಿ ಸಮೀಪವಿರುವ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬೈಯಪ್ಪನಹಳ್ಳಿ ಸಮೀಪದ ಕಾರ್ಮೆಲ್‌ರಾಮ್ ನಿವಾಸಿ ಶಿವಮೂರ್ತಿ(19)ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಸಹೋದರ ನೀಡಿದ ದೂರಿನ ಮೇರೆಗೆ ಶಿವಮೂರ್ತಿ ಹಾಗೂ ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ಸಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಿವಮೂರ್ತಿ ಮತ್ತು ವರ್ತೂರು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೂ ಯುವತಿ ಮನೆಯಲ್ಲಿ ವಿರೋಧವಿತ್ತು.ಇತ್ತೀಚೆಗೆ ಯುವತಿಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥವಾಗಿತ್ತು.
ಇದರಿಂದ ನೊಂದಿದ್ದ ಶಿವಮೂರ್ತಿ ರಾತ್ರಿ 11.30ರ ಸುಮಾರಿಗೆ ಬೈಯಪ್ಪನಹಳ್ಳಿಯ ಕಾರ್ಮಲ್ ರಾಮ್ ಊರಿನ ಸಮೀಪ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅದಕ್ಕೂ ಮುನ್ನ ಡೆತ್‌ನೋಟ್ ಕೂಡ ಬರೆದಿಟ್ಟಿದ್ದ ಎನ್ನುವ ಮಾಹಿತಿ ಪೊಲೀಸರು ನೀಡಿದ್ದಾರೆ.












Click it and Unblock the Notifications