Get Updates
Get notified of breaking news, exclusive insights, and must-see stories!

ನಿಷ್ಕ್ರಿಯವಾಯ್ತು ಕಲಾಂರ ಸಾಮಾಜಿಕ ಜಾಲತಾಣ ಖಾತೆಗಳು

ಬೆಂಗಳೂರು, ಆಗಸ್ಟ್, 07 : ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಅಧಿಕೃತ ಸಾಮಾಜಿಕ ಜಾಲತಾಣ ನಿಭಾಯಿಸುತ್ತಿದ್ದ ಆಪ್ತ ಸಹಾಯಕ ಶ್ರೀಜನ್ ಸಿಂಗ್‌ ಅವರು ಕಲಾಂ ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಕಲಾಂ ಅವರೊಂದಿಗೆ ಕೊನೆ ಗಳಿಗೆಯಲ್ಲಿ ಕಳೆದ ದಿನಗಳು. ಅವರೊಂದಿಗೆ ಮಾತನಾಡಿದ ವಿಚಾರಗಳು ಶ್ರೀಜನ್ ಪಾಲ್ ಸಿಂಗ್ ಅವರ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡಿತು. ಇದಕ್ಕೆ ಕಲಾಂ ಅವರ ಕಚೇರಿ ನಿರ್ವಾಹಕರು ವಿರೋಧ ವ್ಯಕ್ತಪಡಿಸಿದ ಕಾರಣ ಶ್ರೀಜನ್ ಈ ನಿರ್ಧಾರಕ್ಕೆ ಬಂದಿದ್ದಾರೆ.[ಕಲಾಂ ಆಡಿದ ಕೊನೆ ಘಳಿಗೆಯ ಮಾತುಗಳೇನು?]

Wish we all worked together for Guru Kalam, says Srijan Pal Singh

ಕಲಾಂ ಅವರು ಇಹಲೋಕ ತ್ಯಜಿಸಿ ಕೆಲವು ದಿನಗಳು ಸಂದಿವೆ ಅಷ್ಟೇ. ಅವರ ಅಗಲಿಕೆಯ ಬೇಸರದಿಂದ ಹೊರಬರುವ ಮುನ್ನವೇ ಅವರ ಆಸ್ತಿ ಬಗ್ಗೆ ಹಲವು ಗೊಂದಲಗಳು ತಲೆದೋರಿದ್ದವು. ಅದರ ಬೆನ್ನಲ್ಲೇ ಇದೀಗ ಅವರ ಆಪ್ತ ಸಹಾಯಕ ಶ್ರೀಜನ್ ಸಿಂಗ್ ಅವರನ್ನು ಕಲಾಂ ಅವರ ನೆನಪಿಗಾಗಿ ತೆರೆಯಲಾಗಿದ್ದ ಸಾಮಾಜಿಕ ಜಾಲತಾಣದ ಖಾತೆ ನಿರ್ವಹಣೆಯನ್ನು ಕೈ ಬಿಟ್ಟಿದ್ದಾರೆ.

ನಾನು ನನ್ನ ಗುರುವನ್ನು ಕಳೆದುಕೊಂಡ ನೋವಿನಿಂದ ಇನ್ನು ಹೊರಬರಲು ಸಾಧ್ಯವಾಗಿಲ್ಲ. ಅವರೊಂದಿಗೆ ಕಳೆದ ದಿನಗಳ, ಮಾತುಗಳ ನೆನಪಿನಲ್ಲಿಯೇ ದಿನಗಳನ್ನು ಕಳೆಯುತ್ತಿದ್ದೇನೆ. ಅಷ್ಟರಲ್ಲೇ ಕಲಾಂ ಅವರ ಕಛೇರಿಯಿಂದ ಗುರುವಾರ ಬಂದ ಇ-ಮೇಲ್ ಕಂಡು ಇನ್ನಷ್ಟು ದುಃಖವಾಗಿದೆ ಎಂದು ಶ್ರೀಜನ್ ಸಿಂಗ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಶ್ರೀಜನ್ ಸಿಂಗ್‌ 'ನಾನು ಕಲಾಂ ಅವರ ಸೂಚನೆಯಂತೆ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಯನ್ನು ನೋಡಿಕೊಳ್ಳುತ್ತಿದೆ. ಅವರ ನಿಧನದ ಬಳಿಕ ಅದನ್ನು ಅವರ ನೆನಪುಗಳ ತಾಣವಾಗಿ ಮಾಡಲು ಯೋಚಿಸಿದೆ. ಇದರಂತೆ ಅವರ ಅನುಯಾಯಿಗಳು ಅದನ್ನು ಒಪ್ಪಿಕೊಂಡರು. ಬಳಿಕ ಇದರಲ್ಲಿ ಯಾವುದೇ ಹೇಳಿಕೆಗಳನ್ನು ಹಾಕುವ ಮೊದಲು ತನ್ನ ಗಮನಕ್ಕೆ ತರಬೇಕೆಂದು ತಿಳಿಸಿದ್ದರು. ಯಾವುದೇ ಭಾರತೀಯರು ಕಲಾಂ ಅವರ ವಿಷನ್ ನ್ನು ಪ್ರಸಾರ ಮಾಡಬಹುದು ಎಂದು ತಿಳಿಸಿದ್ದೆ. ಆದರೆ ನಾನು ಇದೀಗ ಕಲಾಂ ಅವರ ಫೇಸ್ ಬುಕ್ ಮತ್ತು ಟ್ವಿಟರ್ ಪುಟವನ್ನು ನಿಶಕ್ತಗೊಳಿಸಲು ನಿರ್ಧರಿಸಿದ್ದೇನೆ.

ಶ್ರೀಜನ್ ಸಿಂಗ್ ಫೇಸ್ ಬುಕ್‌ ನಲ್ಲಿ ಹೇಳಿದ್ದೇನು?

ನಾನು ಕಲಾಂ ಅವರ ನೆನಪುಗಳ ನಿಮಿತ್ತ ತೆರೆದ ಸಾಮಾಜಿಕ ಜಾಲತಾಣದ ಖಾತೆಯನ್ನು ನಿಷ್ಕ್ರೀಯಗೊಳಿಸುತ್ತಿದ್ದೇನೆ. ಅವರ ಖಾತೆಗಳನ್ನು ಬಹಳ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು, ಅವರ ಎಲ್ಲಾ ವೈಯಕ್ತಿಕ ಹಾಗೂ ಸೂಕ್ಷ್ಮ ವಿಚಾರಗಳನ್ನು ನ್ಯಾಯಯುತವಾಗಿಯೆ ನಿಭಾಯಿಸಿದ್ದೇನೆಂಬ ನಂಬಿಕೆ ನನ್ನಲ್ಲಿದೆ.

ಅವರ ನಿರ್ಗಮನ ನನ್ನಲ್ಲಿ ಬಹಳ ದುಃಖವನ್ನು ತಂದಿದ್ದು, ಅವರ ಕುರಿತಾಗಿ ನಾನು ಏನನ್ನು ಮಾತಾನಾಡಲು ಇಚ್ಚಿಸುವುದಿಲ್ಲ. ಅವರ ನೆನಪುಗಳು ನನ್ನನ್ನು ಗಾಢವಾಗಿ ಕಾಡುತ್ತಿದೆ. ಅವರೊಂದಿಗೆ ಕಳೆದ ದಿನಗಳು, ನಡೆದ ಹೆಜ್ಜೆಗಳು, ಮಾಡಿದ ಕಾರ್ಯಗಳು ನನ್ನ ಬದುಕಿನಲ್ಲಿ ಮಹಾನ್ ಗುರಿಯನ್ನು ತಲುಪಿದ ಭಾವ ಮೂಡಿಸಿದೆ.

ಗುರುವಾರ ಕಲಾಂ ಅವರ ಸಾಮಾಜಿಕ ಖಾತೆಯನ್ನು ನಿಶಕ್ತಗೊಳಿಸಿದ್ದೇನೆ. ಈ ವಿಚಾರವನ್ನು ಇಲ್ಲಿಗೆ ಕೈಬಿಟ್ಟು ಕಲಾಂ ಅವರ ವಿಚಾರಗಳ, ಆದರ್ಶಗಳ ಮೇಲೆ ಬೆಳಕು ಚೆಲ್ಲುತ್ತೀರಾ, ಅವರ ಬದುಕಿನ ಮಜಲುಗಳನ್ನು ಆದರ್ಶವಾಗಿ ಇರಿಸಿಕೊಂಡು ಮುನ್ನಡೆಯುತ್ತೀರಾ ಎಂಬ ನಂಬಿಕೆ ನನಗಿದೆ.

ಕಲಾಂ ಅವರ ಖಾತೆಯನ್ನು ಇಷ್ಟು ದಿನಗಳ ಕಾಲ ನಿರ್ವಹಿಸಲು ಸಹಕರಿಸದ ನಿಮಗೆಲ್ಲಾ ನನ್ನ ವಂದನೆಗಳು.

As per advise of former staff members, have deactivated the memorial social media accounts of Dr. Kalam sir. He...

Posted by Srijan Pal Singh onThursday, August 6, 2015

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+