ಮಾನ್ಯತಾ ಟೆಕ್ ಪಾರ್ಕ್ ಟ್ರಾಫಿಕ್ ಗೆ ಹೈರಾಣಾದ ಶಿವಣ್ಣ ಮಾಡಿದ್ದೇನು?
ಬೆಂಗಳೂರು, ನವೆಂಬರ್ 9 : "ಹೆಬ್ಬಾಳದ ಬಳಿಯ ಮಾನ್ಯತಾ ಟೆಕ್ ಪಾರ್ಕ್ ಬಳಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಇದಕ್ಕೊಂದು ಶಾಶ್ವತವಾದ ಪರಿಹಾರ ಆಗಬೇಕು" ಎಂದು ನಟ ಶಿವರಾಜ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಲ್ಲಿ ಮನವಿ ಮಾಡಿದ್ದಾರೆ.
ಅಂದಹಾಗೆ, ಶಿವರಾಜ್ ಕುಮಾರ್ ಅವರ ಮನೆ ಇರುವುದು ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್ ಬಳಿ. ಈ ಭೇಟಿಯ ವೇಳೆ ಅವರ ಜತೆಯಲ್ಲಿ ಪತ್ನಿ ಗೀತಾ ಕೂಡ ಇದ್ದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಮತ್ತು ತಮ್ಮ ವೈಯಕ್ತಿಕ ಜೀವನಕ್ಕೂ ಸುಲಭ ಆಗಬೇಕು. ಈ ಟ್ರಾಫಿಕ್ ಜಾಮ್ ಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಶಿವರಾಜ್ ಕುಮಾರ್ ಅವರು ವಿಧಾನಸೌಧದಲ್ಲಿ ಮುಖ್ಯಮಂತ್ರಿ, ಗೃಹ ಸಚಿವರ ಭೇಟಿ ಮಾಡಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಬಳಿಯ ಸಂಚಾರ ದಟ್ಟಣೆ ವಿರುದ್ಧ ಅಲ್ಲಿನ ಸ್ಥಳೀಯರ ಜತೆ ಸೇರಿ ಶಿವರಾಜ್ ಕುಮಾರ್ ಪ್ರತಿಭಟನೆ ನಡೆಸಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲವಾದ್ದರಿಂದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲು ಸ್ವತಃ ತೆರಳಿದ್ದರು.












Click it and Unblock the Notifications