ಹೆತ್ತಮ್ಮನ ಮನಸ್ಸಲ್ಲಿ ಮಗುವನ್ನೇ ಕೊಲ್ಲುವ ಕ್ರೂರ ಆಲೋಚನೆ ಬರೋದ್ಯಾಕೆ? ಮಾನಸಿಕ ತಜ್ಞರು ಹೇಳೋದೇನು?
ಬೆಂಗಳೂರು, ಜನವರಿ, 10: ಸಾಮಾನ್ಯವಾಗಿ ಪೋಷಕರ ಪಾಲಿಗೆ ಪ್ರಪಂಚ, ಆಸ್ತಿ ಎಲ್ಲವೂ ಮಕ್ಕಳೇ ಆಗಿರುತ್ತಾರೆ. ಯಾವುದೇ ಅಹಿತಕರ ಘಟನೆಗಳು ನಡೆಯುವಾಗಲೂ ಸಾಯುವ ಸ್ಥಿತಿಯಲ್ಲಿದ್ದರೂ ತಮ್ಮ ಮಕ್ಕಳನ್ನಾದರೂ ಉಳಿಸಿಕೊಳ್ಳಬೇಕು ಎನ್ನುವ ಮನಸ್ಥಿತಿ ಪೋಷಕರದ್ದಾಗಿರುತ್ತದೆ.
ಆದರೆ ಇತ್ತೀಚೆಗಷ್ಟೇ ಹೆತ್ತ ತಾಯಿಯೇ ತನ್ನ ಮಗುವನ್ನು ಕೊಂದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಇಂತಹ ಘಟನೆಗಳು ಅಪರೂಪವಾಗಿರುತ್ತವೆ. ಆದರೂ ಹೆತ್ತ ತಾಯಂದಿರಿಗೆ ಮಕ್ಕಳ್ಳನ್ನು ಕೊಲ್ಲುವ ಕ್ರೂರ ಮನಸ್ಥಿತಿ ಯಾಕೆ ಬರುತ್ತದೆ ಎಂದು ಇಲ್ಲಿ ವೈದ್ಯರ ಅಧ್ಯಯನವೊಂದು ತಿಳಿಸಿದೆ ನೋಡಿ.

ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾನಿಲಯದ ವೈದ್ಯರೊಬ್ಬರು ಮತ್ತು ಫೋರೆನ್ಸಿಕ್ ಸೈಕಿಯಾಟ್ರಿಯ ಪ್ರೊಫೆಸರ್ ಡಾ.ಸೂಸನ್ ಹ್ಯಾಟರ್ಸ್ ಫ್ರೈಡ್‌ಮನ್ ಪ್ರಕಾರ, ಪೋಷಕರಿಂದ ಮಕ್ಕಳ ಕೊಲೆಯಾದರೆ ಇದನ್ನು ಫಿಲಿಸೈಡ್ ಎಂದು ಕರೆಯಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ (US) ಪ್ರತಿ ವರ್ಷ ಇಂತಹ ನೂರಾರು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಈ ಹತ್ಯೆಗಳು ಒಂದು ರೀತಿಯ ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಹತ್ಯೆಗಳು ಪೋಷಕರ ಆತ್ಮಹತ್ಯೆ ಪ್ರಯತ್ನದೊಂದಿಗೆ ನಡೆಯುವುದು ಸಾಮಾನ್ಯ ಸಂಗತಿಯಲ್ಲ ಎಂದು ಪೊಲೀಸ್ ಮೂಲಗಳು ಹೇಳುತ್ತವೆ. ಅನೇಕ ಪೋಷಕರು ತಮ್ಮ ಮಕ್ಕಳ ಮೇಲೆ ತುಂಬಾ ಪ್ರೀತಿ ತೋರಿಸುತ್ತಾರೆ. ಹೀಗಿದ್ದರೂ ಕೂಡ ಅನೇಕ ಪೋಷಕರು ತಮ್ಮ ಮಗುವಿಗೆ ಹಾನಿ ಮಾಡುವುದನ್ನು ಊಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ ತಜ್ಞರು.
ದುರುಪಯೋಗ ಅಥವಾ ನಿರ್ಲಕ್ಷ್ಯದ ಕ್ರಿಯೆಯಲ್ಲಿ ತೊಡಗಿಕೊಂಡಾಗ ಪೋಷಕರು ತಮ್ಮ ಮಗುವನ್ನು ಕೊಂದ ಉದಾಹರಣೆಗಳಿವೆ. ಮಗುವನ್ನು ಕೊಲ್ಲಲು ಪೋಷಕರು ಯೋಜಿಸದೇ ಇರಬಹುದು, ಆದರೆ ಇದು ಕೆಟ್ಟಗಳಿಗೆಯಲ್ಲಿ ನಡೆದೇ ಹೋಗಿಬಿಡುತ್ತದೆ. ಪೋಷಕರು ಮಗುವನ್ನು ಒಬ್ಬ ಮನುಷ್ಯನಂತೆ ನೋಡದೆ, ಒಂದು ಅಡಚಣೆಯಾಗಿ ನೋಡಿದಾಗ ಇಂತಹ ಪ್ರಕರಣಗಳು ಸಂಭವಿಸುತ್ತವೆ ಎಂದು ಹೇಳುತ್ತಾರೆ.
ಕೆಲವೊಮ್ಮೆ ದಾಂಪತ್ಯದಲ್ಲಿ ಬಿರುಕು ಮೂಡಿದಾಗ ವಿಚ್ಛೇದನಗಳು ಆಗಿರುವ ಆಗಿದ್ದು, ಈ ವೇಳೆ ಮಕ್ಕಳು ತಾವು ಇಷ್ಟ ಪಟ್ಟವರ ಜೊತೆ ಇರಬಹುದು ಎಂಬುದು ಕಾನೂನಿನ ನಿಯಮವಾಗಿದೆ. ಆದರೆ ತಮ್ಮ ಜೊತೆಯಲ್ಲಿರುವ ಪೋಷಕರು (ತಾಯಿ ಅಥವಾ ತಂದೆ) ಇನ್ನೊಂದು ಮದುವೆಯಾಗಲು ಬಯಸಿದಾಗಲೂ ಮಕ್ಕಳು ಒಪ್ಪದಿದ್ದಾಗಳು ಇಂತಹ ಪ್ರಕರಣಗಳು ನಡೆಯುತ್ತವೆ ಎನ್ನುತ್ತಾರೆ ತಜ್ಞರು.
ಡಾ.ಹ್ಯಾಟರ್ಸ್ ಫ್ರೈಡ್‌ಮನ್ ಹೇಳುವಂತೆ, ತಾಯಿ ತನ್ನ ಮಗುವನ್ನು ಕೊಂದರೆ, ಅವಳು ಮಾನಸಿಕ ಅಸ್ವಸ್ಥಳಾಗಿರುತ್ತಾಳೆ ಎಂದು ಜನರು ಸಾಮಾನ್ಯವಾಗಿ ಊಹಿಸುತ್ತಾರೆ. ಏಕೆಂದರೆ ಯಾವುದೇ ತಾಯಿಯಾಗಿರಲಿ ತನ್ನ ಸ್ವಂತ ಮಕ್ಕಳನ್ನು ಎಂದಿಗೂ ಕೊಲ್ಲಲು ಇಚ್ಚಿಸುವುದಿಲ್ಲ. ಆದರೆ ತಮ್ಮ ಮಕ್ಕಳನ್ನು ಕೊಂದ ಆರೋಪ ಅಥವಾ ಶಿಕ್ಷೆಗೊಳಗಾದ ತಂದೆಯನ್ನು ಸಾಮಾನ್ಯವಾಗಿ ದುಷ್ಟರೆಂದು ನೋಡಲಾಗುತ್ತದೆ. ಆದರೆ ಹೀಗೆ ಹೇಳುವುದು ಅಷ್ಟು ಸರಿಯಲ್ಲ ಎಂದಿದ್ದಾರೆ.
ಘಟನೆ ಹಿನ್ನೆಲೆ: ಗೋವಾದ ಹೋಟೆಲ್‌ವೊಂದರಲ್ಲಿ ತನ್ನ ಮಗುವನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವ ಕೊಂಡೊಯ್ಯುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ ಸಿಇಓ ಸೂಚನಾ ಸೇಠ್ ಅವರನ್ನು ಐಮಂಗಲ ಪೊಲೀಸರು ವಶಕ್ಕೆ ಪಡೆದು, ಬಳಿಕ ಗೋವಾ ಪೊಲೀಸರಿಗೆ ಒಪ್ಪಿಸಿದ್ದರು.
ಮೃತ ಮಗುವನ್ನು ಚಿನ್ಮಯ್ ರಾಮಣನ್ ಸೇಠ್ (4) ಎಂದು ಗುರುತಿಸಲಾಗಿದೆ. ಸುಚಾನಾ ಸೇಠ್ ಗೋವಾದ ಹೋಟೆಲ್‌ನಲ್ಲಿ ನಾಲ್ಕು ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿ, ಸೂಟ್ ಕೇಸ್‌ನಲ್ಲಿ ಮಗುವಿನ ಶವದೊಂದಿಗೆ ಗೋವಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಆಕೆಯನ್ನು ಬಂಧಿಸಿದ್ದರು.
ರೋಪಿಯು ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದಾಳು. ಈ ವೇಳೆ ಗೋವಾದಲ್ಲಿ ತಂಗಿದ್ದ ಹೋಟೆಲ್‌ನವರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ ರೂಮಿನಲ್ಲಿ ರಕ್ತದ ಕಲೆಗಳು ಪತ್ತೆ ಹಿನ್ನೆಲೆ ಅನುಮಾನ ಬಂದಿತ್ತು. ರೂಮಿಗೆ ಕರೆದೊಯ್ದಿದ್ದ ಮಗು ವಾಪಸ್ ಹೋಗುವಾಗ ಇರಲಿಲ್ಲ. ಇದನ್ನು ಪ್ರಶ್ನಿಸಿದಾಗ ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆ ಎಂದು ಸುಳ್ಳು ಹೇಳಿದ್ದರು ಸುಚನಾ ಸೇಠ್.
ಬಳಿಕ ಗೋವಾ ಪೊಲೀಸ್‌ಗೆ ಮಾಹಿತಿ ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿ ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಡ್ರೈವರ್ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿದ್ದಾನೆ. ಇದಾದ ನಂತರ ಚಾಲಕ ಆರೋಪಿಯನ್ನು ಐಮಂಗಲ ಪೊಲೀಸರಿಗೆ ಒಪ್ಪಿಸಿದ್ದರು.
ಪೊಲೀಸರು ಪರಿಶೀಲನೆ ನಡೆಸುವಾಗ ಕಾರ್‌ನ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಶವ ಮಾರ್ಚರಿಗೆ ಶಿಫ್ಟ್ ಮಾಡಿ ಆರೋಪಿ ಸುಚನಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಬಳಿಕ ಗೋವಾ ಪೊಲೀಸರಿಗೆ ಆರೋಪಿಯನ್ನು ಐಮಂಗಲ ಪೊಲೀಸರು ಒಪ್ಪಿಸಿದ್ದರು. ಇದೀಗ ಗೋವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಕೊಲ್ಕತ್ತಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಪಿಎಚ್‌ಡಿ ವಿದ್ಯಾಬ್ಯಾಸ ಮಾಡುತಿದ್ದಾಳೆ. ಈಕೆ ಗಂಡನೊಂದಿಗೆ ವಿವಾಹ ವಿಚ್ಛೇದನ ಪಡೆದುಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದಳು. ಈಕೆಯ ಪತಿ ಇಂಡೋನೇಷ್ಯಾದಲ್ಲಿ ಇದ್ದಾರಂತೆ ಎಂಬ ಮಾಹಿತಿ ಲಭ್ಯವಾಗಿತ್ತು. ಆರೋಪಿಯು ಗೋವಾ ಪ್ರವಾಸ ಕೈಗೊಂಡಾಗ ಈ ಘಟನೆ ನಡೆದಿತ್ತು ಎನ್ನಲಾಗಿತ್ತು.












Click it and Unblock the Notifications