ಸಿಂಗಾಪುರದಿಂದ ಬೆಂಗಳೂರಿಗೆ ಸ್ಥಳಾಂತರವಾದ ಉದ್ಯಮಿ; ಕಾರಣವೇ ವಿಚಿತ್ರ!
ಭಾರತವಲ್ಲದೆ ವಿಶ್ವದ ಅನೇಕರಿಗೆ ಬೆಂಗಳೂರು ಎಂದರೆ ಅಚ್ಚುಮೆಚ್ಚು, ಭಾರತದ ಐಟಿ ರಾಜಧಾನಿ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎನ್ನುವ ಅನೇಕ ಹೆಸರುಗಳನ್ನು ಬೆಂಗಳೂರು ಪ್ರಸಿದ್ಧವಾಗಿದೆ.
ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ವಲಸಿಗರಿಗೆ ಏನೂ ಕಡಿಮೆ ಇಲ್ಲ. ದೇಶದ ಮೂಲೆ ಮೂಲೆಯಿಂದ ಇಲ್ಲಿಗೆ ಕೆಲಸ ಹುಡುಕಿ ಬರುತ್ತಾರೆ. ಇನ್ನೂ ಕೆಲವರು ಸ್ವಂತ ಉದ್ಯಮ ಸ್ಥಾಪಿಸಲು ಬೆಂಗಳೂರಿಗೆ ಸ್ಥಳಾಂತರವಾಗುತ್ತಾರೆ. ಆದರೆ ಇಲ್ಲೊಬ್ಬರು ಉದ್ಯಮಿ ತಾವು ಬೆಂಗಳೂರಿಗೆ ಬಂದಿದ್ದೇಕೆ ಎನ್ನುವುದಕ್ಕೆ ವಿಚಿತ್ರ ಕಾರಣ ನೀಡಿದ್ದಾರೆ.

ಸಿಂಗಾಪುರ ಮೂಲದ ಭಾರತೀಯ ವ್ಯಕ್ತಿ, ರಿಯಲ್‌ಫಾಸ್ಟ್ ಹೆಸರಿನ ಕಂಪನಿಯ ಸಹ-ಸಂಸ್ಥಾಪಕ ಆಕಾಶ್ ಧರ್ಮಾಧಿಕಾರಿ ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ನಿರ್ಧಾರದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದು ಎಕ್ಸ್‌ನಲ್ಲಿ ವೈರಲ್ ಆಗಿದೆ.
"ಸಿಂಗಪುರವು ತುಂಬಾ ಪರಿಪೂರ್ಣವಾಗಿದೆ" ಎಂದು ರಿಯಲ್‌ಫಾಸ್ಟ್ ಹೆಸರಿನ ಕಂಪನಿಯ ಸಹ-ಸಂಸ್ಥಾಪಕ ಆಕಾಶ್ ಧರ್ಮಾಧಿಕಾರಿ ಹೇಳಿದ್ದಾರೆ. ತನ್ನ ಮಗಳು "ಜೀವನದ ಅನಿಶ್ಚಿತತೆಗಳಿಗೆ" ಒಗ್ಗಿಕೊಳ್ಳಬೇಕೆಂದು ಬಯಸಿದ್ದರಿಂದ ಬೆಂಗಳೂರಿನಲ್ಲಿ ನೆಲೆಸಲು ನಿರ್ಧರಿಸಿದ್ದೇನೆ ಎಂದು ಆಕಾಶ್ ಹೇಳಿದರು.
ತಮ್ಮ ಮಗಳು ತುಂಬಾ ಮೃದು ಎಂದಿರುವ ಅವರು, ಭಾರತೀಯ ಅವ್ಯವಸ್ಥೆಯನ್ನು ಅನುಭವಿಸಬೇಕು ಎಂದು ಬಯಸುತ್ತಾರೆ. ಭಾರತದಲ್ಲಿ ಎಲ್ಲಾ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುವಂತೆ ಮಾಡುತ್ತದೆ ಎಂದು ಅವರು ನಂಬಿದ್ದಾರೆ.
Partly we are shifting to Bangalore to get my daughter used to uncertainties of life. Singapore is just way too perfect, and we thought it’s making her soft. Unfortunately we also had forgotten what the Indian chaos feels like.. turns out we have also become soft 😂
— aakash dharmadhikari (@aakashd) June 20, 2024
ವೈರಲ್ ಆದ ಪೋಸ್ಟ್
ಅವರ ಪೋಸ್ಟ್ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗುತ್ತಿದ್ದಂತೆ, ಆಕಾಶ್ ಸ್ಪಷ್ಟನೆ ನಿಡಿದ್ದು, ನಾನು ಬೆಂಗಳೂರಿನಲ್ಲಿ ವಾಡಿಕೆಯಂತೆ ಮಾಡುವ ವಿಲಕ್ಷಣ ಮತ್ತು ಭಾವೋದ್ರಿಕ್ತ ಸಂಭಾಷಣೆಗಳನ್ನು ಕಳೆದುಕೊಂಡಿದ್ದೇನೆ, ಕಳೆದ ದಶಕದಲ್ಲಿ ನಾನು ಇಲ್ಲಿ ಕೆಲಸ ಮಾಡಿದ ಜನರೊಂದಿಗೆ ಕೆಲಸ ಮಾಡಲು ಬಯಸಿದ್ದೆ, ಸಿಂಗಾಪುರದಲ್ಲಿ ನಾನು ಅದನ್ನು ಕಳೆದುಕೊಂಡೆ ಎಂದು ಹೇಳಿದ್ದಾರೆ.
ಆಕಾಶ್ ಧರ್ಮಾಧಿಕಾರಿಯವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ರಿಯಲ್‌ಫಾಸ್ಟ್ ಕಂಪನಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ, ರಿಯಲ್‌ಫಾಸ್ಟ್‌ನಲ್ಲಿ, ನಾವು ಸೇಲ್ಸ್‌ಫೋರ್ಸ್ ಪಾಲುದಾರರಿಗಾಗಿ ಎಐ ಟ್ರಾನ್ಸ್‌ಫರ್ಮೇಷನ್ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ.
ಆಕಾಶ್ ಧರ್ಮಾಧಿಕಾರಿ 2017 ರಲ್ಲಿ ಸಿಂಗಾಪುರಕ್ಕೆ ತೆರಳುವ ಮೊದಲು ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವಾರು ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ.












Click it and Unblock the Notifications