Majestic: ಮೆಜೆಸ್ಟಿಕ್ ಹೋಗುವವರಿಗೆ ಮುಂದಿನ ನಾಲ್ಕು ತಿಂಗಳು ಸಂಕಷ್ಟ!
ಬೆಂಗಳೂರಿನ ಹೃದಯಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣವು (ಮೆಜೆಸ್ಟಿಕ್) ಹೆಚ್ಚು ಪ್ರತಿನಿತ್ಯ ದಟ್ಟಣೆ ಇರುವ ಹೆಚ್ಚಾಗಿರುವ ಪ್ರದೇಶ. ಬೆಳಿಗ್ಗೆ ಹಾಗೂ ಸಂಜೆ ಇಲ್ಲಿ ಬಸ್‌ಗಳ ಸಂಚಾರದಿಂದ ದಟ್ಟಣೆಯೂ ಅಧಿಕವಾಗಿರುತ್ತದೆ. ಇದೀಗ ಮೆಜೆಸ್ಟಿಕ್ ಬಳಿ ಮುಂದಿನ ನಾಲ್ಕು ತಿಂಗಳು ಟ್ರಾಫಿಕ್ ಜಾಮ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೌದು, ಮೆಜೆಸ್ಟಿಕ್ ಬಳಿಯ ಪ್ರಮುಖ ರಸ್ತೆಗಳು ಈ ಸರಿಯಾಗಿಲ್ಲ ಎಂದು ಹಲವು ವರ್ಷಗಳಿಂದ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆ ಇಲ್ಲಿ ವೈಟ್‌ಟಾಪಿಂಗ್ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಒಂದೆಡೆ ರಸ್ತೆ ಸರಿಹೋಗುತ್ತದೆ ಎಂಬ ಖುಷಿ ವಿಚಾರವೇ ಆದರೂ, ಕಾಮಗಾರಿಯಿಂದ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಲ್ಲಾ? ಅನ್ನೋ ಆತಂಕ ಕೂಡ ಶುರುವಾಗಿದೆ.

ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಇರುವ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಅಧಿಕವಾಗಿವೆ. ಇದರಿಂದ ಪ್ರಯಾಣಿಕರು ರಸ್ತೆ ದಾಟಲು ಹಾಗೂ ಬಸ್‌ಗಳ ಸಂಚಾರಕ್ಕೂ ಭಾರಿ ಸಮಸ್ಯೆ ಆಗುತ್ತಿತ್ತು. ಮುಖ್ಯರಸ್ತೆಯಲ್ಲೇ ದೊಡ್ಡ ಗುಂಡಿಗಳು ಬಿದ್ದಿದ್ದರಿಂದ ಇಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಹಲವರು ಆಗ್ರಹಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ, ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಶುರು ಮಾಡಲು ಮುಂದಾಗಿದೆಯಂತೆ. ಮೂಲಗಳ ಪ್ರಕಾರ ನವೆಂಬರ್ ಮೊದಲ ವಾರದಿಂದ ವೈಟ್ ಟಾಪಿಂಗ್ ಕಾಮಗಾರಿ ಶುರುವಾಗಲಿದೆ ಎನ್ನಲಾಗಿದೆ.

ಇನ್ನು ಪ್ರಯಾಣಿಕರು ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಮೊದಲಿಗೆ ರಸ್ತೆಯ ಒಂದು ಭಾಗವನ್ನು ಮಾತ್ರ ಮುಚ್ಚಿ, ವೈಟ್‌ಟಾಪಿಂಗ್ ಮಾಡಲಾಗುತ್ತದೆ. ಇದು ಪೂರ್ಣಗೊಂಡ ನಂತರ ಪಕ್ಕದ ಮಾರ್ಗದಲ್ಲಿ ಕಾಮಗಾರಿ ಆರಂಭವಾಗಲಿದೆ. ಹಾಗಾಗಿ ಬಸ್ ಸಂಚಾರಕ್ಕೆ ತುಸು ಸಮಸ್ಯೆಯಾದರೂ, ರಸ್ತೆ ಬಂದ್ ಮಾಡುವುದಿಲ್ಲ ಎಂದು ಹೇಳಲಾಗಿದೆ.
ಇನ್ನು ವೈಟ್‌ಟಾಪಿಂಗ್ ಕೆಲಸ ಶುರುವಾದರೆ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಅಧಿಕವಾಗಲಿದೆ. ಇದರಿಂದ ಜನ ಪರದಾಡಬೇಕಾಗುತ್ತದೆ. ಮುಖ್ಯವಾಗಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ತುಸು ಸಮಸ್ಯೆ ಎದುರಾಗಲಿದೆ.
ಆನಂದ್ ರಾವ್ ಸರ್ಕಲ್, ಚಿಕ್ಕಪೇಟೆ, ಉಪ್ಪಾರಪೇಟೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗೋದು ಪಕ್ಕಾ. ಇನ್ನು ಈ ಕಾಮಗಾರಿಯೂ ಬರೋಬ್ಬರು ನಾಲ್ಕು ತಿಂಗಳವರೆಗೆ ನಡೆಯಲಿರುವುದರಿಂದ ಅಲ್ಲಿವರೆಗೆ ಈ ಸಮಸ್ಯೆ ಉದ್ಭವಿಸಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಬೆಂಗಳೂರಿನ ಜನ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..












Click it and Unblock the Notifications