Get Updates
Get notified of breaking news, exclusive insights, and must-see stories!

ವೈದ್ಯೆ ತನ್ನ ತಪ್ಪಿಗೆ ಪ್ರಾಯಶ್ಚಿತವನ್ನು ಮಾಡಿಕೊಳ್ಳಲು ಮುಂದಾಗಿದ್ದು ಹೀಗೆ..

ಬೆಂಗಳೂರು ಸೆ 30: ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಹೈಕೋರ್ಟ್‌ಗೆ ಬೇಷರತ್‌ ಕ್ಷಮೆ ಕೋರಿರುವ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರು, ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆ ಮೂಲಕ ಆಕೆ ತನ್ನ ತಪ್ಪಿಗೆ ಪ್ರಾಯಶ್ಚಿತವನ್ನು ಮಾಡಿಕೊಳ್ಳಲು ಮುಂದಾಗಿದ್ದರೆ.

ಅವರು ಪತಿಯ ಸುಪರ್ದಿಗೆ ಅಪ್ರಾಪ್ತ ಪುತ್ರಿಯನ್ನು ಒಪ್ಪಿಸಲು ನ್ಯಾಯಾಲಯ ಹೊರಡಿಸಿದ್ದ ಆದೇಶ ಪಾಲಿಸದೆ ಉಲ್ಲಂಘನೆ ಮಾಡಿದ್ದರು. ಪ್ರಕರಣ ಸಂಬಂಧ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 33 ವರ್ಷದ ಆರೋಪಿ ವೈದ್ಯೆ ವಿರುದ್ಧ ಹೈಕೋರ್ಟ್‌ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

Violation Of High Court order ; Private Doctor Signed Cover Letter To Serve In Government Hospital

ಆ ವೈದ್ಯರು ವಿಚಾರಣೆಗೆ ಖುದ್ದು ಹಾಜರಾಗಿ, ತಮ್ಮ ತಪ್ಪಿಗೆ ಬೇಷರತ್‌ ಕ್ಷಮೆ ಕೋರಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದರು. ಆರು ತಿಂಗಳ ಕಳೆದ ನಂತರ ಆರೋಪಿ ವೈದ್ಯೆ, ತನ್ನ ಮುಚ್ಚಳಿಕೆಯನ್ನು ಪಾಲನೆ ಮಾಡಿದ ಸಂಬಂಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನಲರ್‌ ಅವರಿಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ನ್ಯಾಯಾಂಗ ನಿಂದನೆ ಕೈಬಿಟ್ಟ ಕೋರ್ಟ್:

ಅಲ್ಲದೆ, ಭವಿಷ್ಯದಲ್ಲಿ ತಮ್ಮ ವಿರುದ್ಧ ನ್ಯಾಯಾಲಯವು ಯಾವುದೇ ಕ್ರಮ ತೆಗೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗದಂತೆ ನಡೆದುಕೊಳ್ಳಲಾಗುವುದು. ಆ ಮಾತನ್ನು ಸಾಬೀತುಪಡಿಸಲು ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಂಬಂಧಪಟ್ಟ ಮುಖ್ಯಸ್ಥರು, ಸಿವಿಲ್‌ ಸರ್ಜನ್‌ ಅಥವಾ ನಿರ್ದೇಶಕರ ಪೂರ್ವಾನುಮತಿ ಪಡೆದು ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಸಹ ಬರೆದುಕೊಟ್ಟರು.

ಆ ಮುಚ್ಚಳಿಕೆ ಮತ್ತು ಬೇಷರತ್‌ ಕ್ಷಮಾಪಣೆ ಪ್ರಮಾಣ ಪತ್ರವನ್ನು ಒಪ್ಪಿಕೊಂಡ ವಿಭಾಗೀಯ ಪೀಠ, ವೈದ್ಯೆ ಮೇಲಿನ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈ ಬಿಟ್ಟಿತು.

ಅಲ್ಲದೆ, ಸಮುದಾಯ ಸೇವೆ ಸಲ್ಲಿಸುವ ಸಂಬಂಧ ಆರೋಪಿ ವೈದ್ಯೆಯು ನಗರದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಮನವಿ ಮಾಡಿದರೆ, ಆ ಮನವಿಯನ್ನು ಆಸ್ಪತ್ರೆಯ ಮುಖ್ಯಸ್ಥರು ಪರಿಗಣಿಸಬೇಕು. ಆಕೆಯ ಮನವಿಯಂತೆ ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆರೋಪಿ ವೈದ್ಯೆಯು ಪತಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ದಂಪತಿಗೆ 8 ವರ್ಷದ ಪುತ್ರಿ ಇದ್ದಾರೆ. ವೈದ್ಯೆ ತನ್ನ ಸುಪರ್ದಿಯಲ್ಲಿ ಪುತ್ರಿಯನ್ನು ಇಟ್ಟುಕೊಂಡಿದ್ದರು.

ಈ ನಡುವೆ ತಾತ್ಕಾಲಿಕವಾಗಿ ಮಗುವನ್ನು ತಂದೆಯ ಸುಪರ್ದಿಗೆ ನೀಡುವಂತೆ ವೈದ್ಯೆಗೆ ಹೈಕೋರ್ಟ್‌ 2023ರ ಜುಲೈನಲ್ಲಿ ನಿರ್ದೇಶಿಸಿತ್ತು. ಈ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ವೈದ್ಯೆ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+