ಮೇರಿ ಮಾತೆ ಉತ್ಸವ, ಶಿವಾಜಿನಗರ ಸುತ್ತಾ ಮುತ್ತಾ ಟ್ರಾಫಿಕ್ ಗೈಡ್

ಬೆಂಗಳೂರು, ಸೆ. 07: ಮೇರಿ ಮಾತೆ ಅಥವಾ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ನಗರ ಕೆಲವೆಡೆ ಬೆಳಗ್ಗೆ 12 ರಿಂದ ರಾತ್ರಿ 10 ಗಂಟೆವರೆಗೂ ಸಂಚಾರವನ್ನು ನಿರ್ಬಂಧಿಸಲಾಗಿದೆ. ಶಿವಾಜಿನಗರದ ಸಂಚಾರ ನಿರ್ಬಂಧ, ನಿಷೇಧ ಹಾಗೂ ವಾಹನ ನಿಲುಗಡೆ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಸಂಚಾರ ನಿಷೇಧಿಸಿರುವ ಸ್ಥಳಗಳು: ಜ್ಯೋತಿ ಕೆಫೆ ವೃತ್ತದಿಂದ ರಸಲ್ ಮಾರ್ಕೆಟ್ ವರೆಗೆ ಮತ್ತು ರಸಲ್ ಮಾರ್ಕೆಟ್ ನಿಂದ ಜ್ಯೋತಿ ಕೆಫೆ ವರೆಗೆ, ಬ್ರಾಡ್‌ವೇ ರಸ್ತೆ, ರಸಲ್ ಮಾರ್ಕೆಟ್, ಧರ್ಮರಾಜ ಕೋಯಿಲ್ ಸ್ಟ್ರೀಟ್ ರಸ್ತೆ ಓ.ಪಿ.ಹೆಚ್ ರಸ್ತೆಯಿಂದ ರಸಲ್ ಮಾರ್ಕೆಟ್ ಕಡೆಗೆ ಬರುವ ವಾಹನ ಸಂಚಾರವನ್ನು ತಾಜ್ ವೃತ್ತದಲ್ಲಿ ನಿಷೇಧಿಸಲಾಗಿದೆ.

ಮಧ್ಯಾಹ್ನ 2 ಗಂಟೆಯ ನಂತರ: ಬಿ.ಆರ್.ವಿ ಜಂಕ್ಷನ್ ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್ ಸಹಿತ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇದಿಸಲಾಗಿದೆಯಲ್ಲದೆ, ಬಾಳೇ ಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಸಹಿತ ಎಲ್ಲಾ ತರದ ವಾಹನಗಳನ್ನು ಮಧ್ಯಾಹ್ನ 2 ಗಂಟೆಯ ನಂತರ ಸಂಚಾರ ನಿಷೇಧಿಸಲಾಗಿದೆ.

Traffic restrictions Shivajinagar

ಅಲ್ಲದೆ, ಯೂನಿಯನ್ ಸ್ಟ್ರೀಟ್, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಲೇಡಿ ಕರ್ಜನ್ ರಸ್ತೆ, ವಿ.ಎಸ್.ಎನ್ ರಸ್ತೆ, ಪ್ಲೇನ್ ಸ್ಟ್ರೀಟ್ , ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನಗಳನ್ನು ನಿಷೇಧಿಸಲಾಗಿದೆ.

ವಾಹನ ನಿಲುಗಡೆ ಒದಗಿಸಿರುವ ಸ್ಥಳಗಳು: ಕಾಮರಾಜ ರಸ್ತೆ ಪಾರ್ಕಿಂಗ್ ಸ್ಥಳದಲ್ಲಿ ( ಸರ್ವೀಸ್ ರಸ್ತೆ ಆರ್ಮಿ ಸ್ಕೂಲ್ ಮುಂಭಾಗ ), ಸಫೀನಾ ಪ್ಞಾಜಾ ಮುಂಭಾಗ ( ಮೈನ್ ಗಾರ್ಡ ರಸ್ತೆ ), ಕಬ್ಬನ್ ಪಾರ್ಕ ಕಿಂಗ್ಸ್ ರಸ್ತೆಯ ಒಳಾಂಗಣದಲ್ಲಿ, ಜೇಸ್ಮಾ ಭವನ ರಸ್ತೆಯಲ್ಲಿ , ಆರ್.ಬಿ.ಎ.ಎನ್.ಎಮ್.ಎಸ್ ಮೈದಾನ ( ಗಂಗಾಧರ ಜೆಟ್ಲಿ ರಸ್ತೆ ), ಮುಸ್ಲಿಂ ಅರಪನೇಜ್ ಡಿಕಸನ್ ರಸ್ತೆ ( ಹಸನತ್ ಕಾಲೇಜ್ ಹತ್ತಿರ ) ಬಳಿ ವಾಹನ ನಿಲುಗಡೆಗೆ ಸ್ಥಳ ಒದಗಿಸಲಾಗಿದೆ.

Annual Feast and procession of St. Mary’s Basilica

ಬಿ.ಎಂ.ಟಿ.ಸಿ ಬಸ್ ನಿಲ್ದಾಣಗಳ ವಿವರ:
ಸಾರ್ವಜನಿಕರ ಹಿತದೃಷ್ಟಿ ಯಿಂದ ಹಲಸೂರು, ಓ.ಎಂ ರಸ್ತೆ, ದೋಮ್ಮಲೂರು, ಕೆ.ಆರ್ ಪುರ, ಮಾರತ್ ಹಳ್ಳಿ, ವರ್ತೂರು, ವೈಟ್ ಫೀಲ್ಡ್, ನೀಲಸಂದ್ರ, ವಿವೇಕನಗರ. ( ಬೆಂಗಳೂರು ಪೂರ್ವ ) ಕಬ್ಬನ್ ರಸ್ತೆ, ಸಿ.ಟಿ.ಓ ಜಂಕ್ಷನ್ ನಿಂದ ಬಿ.ಆರ್.ವಿ ಜಂಕ್ಷನ್ ವರೆಗೆ ರಸ್ತೆಯ ಉತ್ತರ ಬಾಗಕ್ಕೆ, ಜಯನಗರ, ಜೆ.ಪಿ ನಗರ, ಶ್ರೀನಗರ, ಶಾಂತಿನಗರ, ಕೆ.ಹೆಚ್ ರಸ್ತೆ, ಹೊಸೂರು ರಸ್ತೆ, ಕೋರ ಮಂಗಲ ಮತ್ತು ಬನ್ನೇರುಘಟ್ಟ ಕಡೆಗೆ ( ಬೆಂಗಳೂರು ದಕ್ಷಿಣ ) ಕಬ್ಬನ್ ರಸ್ತೆ, ಬಿ.ಅರ್.ವಿ ಜಂಕ್ಷನ್ ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ

ರಸ್ತೆಯ ದಕ್ಷಿಣದ ಭಾಗಕ್ಕೆ, ಕೆಂಪೇಗೌಡ ಬಸ್ ನಿಲ್ದಾಣ, ವಿಜಯನಗರ, ಮಲೇಶ್ವರಂ, ರಾಜಾಜಿನಗರ, ಸಿಟಿ ಮಾರ್ಕೆಟ್ ಮತ್ತು ಮೈಸೂರು ರಸ್ತೆ ಕಡೆಗೆ ( ಬೆಂಗಳೂರು ಪಶ್ಚಿಮ ) ಕ್ವೀನ್ಸ್ ಸರ್ಕಲ್ ಕಿಂಗ್ಸ್ ರಸ್ತೆ. ಜೆ.ಸಿ ನಗರ, ಆರ್, ಟಿ ನಗರ ಯಶವಂತಪುರ, ಪೀಣ್ಯ, ಮೇಖ್ರಿ ವೃತ್ತ, ಹೆಬ್ಬಾಳ,ಯಲಹಂಕ, ಜಾಲಹಳ್ಳಿ, ಟ್ಯಾನರಿ ರಸ್ತೆ, ನಾಗವಾರ, ಬಾಣಸವಾಡಿ, ಲಿಂಗರಾಜಪುರ, ರಾಮಮೂರ್ತಿನಗರ. ( ಬೆಂಗಳೂರು ಉತ್ತರ)ಕ್ವೀನ್ಸ್ ರಸ್ತೆ ಬಾಳೆ ಕುಂದ್ರಿ ಸರ್ಕಲ್ ಟ್ರಾಪಿಕ್ ಹೆಡ್ ಕ್ವಾರ್ಟ್ರರ್ ಜಂಕ್ಷನ್ (ಪಾರ್ಸಿ ಟೆಂಪಲ್) ಬಳಿ ಬದಲಾದ ಬಸ್ ನಿಲುಗಡೆಯಲ್ಲಿ ಬಸ್ ಹತ್ತಬಹುದು. (ಮಾಹಿತಿ ಕೃಪೆ: ಬೆಂಗಳೂರು ಟ್ರಾಫಿಕ್ ಪೊಲೀಸ್ ಫೇಸ್ ಬುಕ್ ಪುಟ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+