HDK vs DKS: ಸರ್ಕಾರದ ಟ್ರ್ಯಾಪ್‌ಗಳಿವು: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದಿರಲು ಇದೇ ಕಾರಣ..!
ಬೆಂಗಳೂರು, ಏಪ್ರಿಲ್ 13: ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಏಕೆ ಸ್ಥಳೀಯ ಚುನಾವಣೆಗಳನ್ನು ನಡೆದೇ ತಡೆ ನೀಡುತ್ತಿದೆ ಎಂಬುದು ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರ ಹನಿಟ್ರ್ಯಾಪ್ ಒಂದೇ ಅಲ್ಲ ಎಲ್ಲ ವಿಧದ ಟ್ರ್ಯಾಪ್ ಮಾಡಿದೆ. ಭ್ರಷ್ಟಾತೀ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಮಾಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದರು.
ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಸಮರ ಸಾರಿದೆ. ಭ್ರಷ್ಟಾತೀ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ದುರಾಡಳಿತ ವಿರುದ್ಧ ಕೇಂದ್ರ ಸಚಿವರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಂಡಂ ಪಾರ್ಕ್‌ನಲ್ಲಿ ವಿಧಾನಸೌಧ ಚಲೋ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು,

ಸರ್ಕಾರದ ಭ್ರಷ್ಟಾಚಾರ ಟನ್ ಗಟ್ಟಲೇ ದಾಖಲೆ ಇವೆ. ಅದು ಸುಳ್ಳಲ್ಲ ನಿಜ ಎಂದು ಪುನರುಚ್ಚಿಸಿರುವ ಕೇಂದ್ರ ಸಚಿವ ಎಚ್‌ಡಿ.ಕುಮಾರಸ್ವಾಮಿ ಅವರು, ಜೆಡಿಎಸ್ ಕಚೇರಿಗೆ ಲಾರಿ ಕಳುಹಿಸುವ ಬದಲು ಕಸ ಎತ್ತಲು ಲಾರಿ ಕಳುಹಿಸಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪ್ರತಿಭಟನೆಯಲ್ಲಿ ತಿರುಗೇಟು ನೀಡಿದರು.
ಸರ್ಕಾರದಿಂದ ಟ್ರ್ಯಾಪ್, ಟ್ರ್ಯಾಪ್, ಟ್ರ್ಯಾಪ್...
ಕಾಂಗ್ರೆಸ್ ವಿರುದ್ಧ ತಂದೆ ಗುಡುಗಿದ ಬೆನ್ನಲ್ಲೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ರಾಜ್ಯವನ್ನು ಈ ಸರ್ಕಾರ ಟ್ರ್ಯಾಪ್ ಮಾಡಿದೆ. 'ಸಚಿವರುಗಳಿಗೆ ಹನಿಟ್ರ್ಯಾಪ್, ಹೈಕಮಾಂಡ್‌ಗೆ ಮನಿಟ್ರ್ಯಾಪ್, ರಾಜ್ಯದ ಜನರಿಗೆ ತೆರಿಗೆ ಟ್ರ್ಯಾಪ್, ಗುತ್ತಿಗೆದಾರರಿಗೆ ಕಮೀಷನ್ ಟ್ರ್ಯಾಪ್. ಹೀಗೆ ಸಂಪೂರ್ಣವಾಗಿ ನಮ್ಮ ರಾಜ್ಯವನ್ನು ಟ್ರ್ಯಾಪ್ ಮಾಡಲಾಗಿದೆ' ಎಂದು ದೂರಿದರು.

ಸ್ಥಳೀಯ ಚುನಾವಣೆ ನಡೆಸದಿರಲು ಇದೇ ಕಾರಣ!
ಇದು ಪ್ರಜಾಪ್ರಭುತ್ವ. ಕಾಂಗ್ರೆಸ್‌ಗೆ ಜನರ ಮೇಲೆ ನಂಬಿಕೆ ಇದ್ದಿದ್ರೆ, ನಿಮ್ಮ ಸರ್ಕಾರದಿಂದ ಜಾರಿಯಾದ ಪಂಚ ಗ್ಯಾರಂಟಿ ಯೋಜನೆಗಳು ನೀವು ಅಂದುಕೊಂಡ ಮಟ್ಟಕ್ಕೆ ಜನರಿಗೆ ಯಶಸ್ವಿಯಾಗಿ ಮುಟ್ಟಿದೆ ಎಂಬುದಾದಲ್ಲಿ ಸ್ಥಳೀಯ ಚುನಾವಣೆ ನಡೆಸಿಬೇಕಿತ್ತು. ನೀವು ಯಾಕೆ ಕಾರ್ಪೋರೇಷನ್, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದೇ ತಡೆ ಹಿಡಿದಿದ್ದೀರಿ. ಯಾಕೆ ಚುನಾವಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಸ್ಥಳೀಯ ಚುನಾವಣೆಯಲ್ಲಿ ಚುನಾವಣೆ ಮಾಡಿದಲ್ಲಿ, ಇಲ್ಲಿ ನೀವು ಸೋತರೆ. ಅದರ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆ ಫಲಿತಾಂಶದ ಮೇಲೆ ಬೀಳಲಿದೆ. ಈ ಸೋಲಿನ ಸತ್ಯ ನಿಮಗೆ ಗೊತ್ತಾಗಿಯೇ ನೀವು ಸ್ಥಳೀಯ ಚುನಾವಣೆ ಮಾಡುತ್ತಿಲ್ಲ. ಇದಕ್ಕೆಲ್ಲ ಜನ ಉತ್ತರ ಕೊಡುವ ಕಾಲ ದೂರವಿಲ್ಲ ಎಂದು ಅವರು ಎಚ್ಚರಿಸಿದರು.
ಜನರಿಗೆ ಸರ್ಕಾರದ ಉಚಿತ ಯೋಜನೆಗಳು ಸಮಾಧಾನ ತಂದಿಲ್ಲ. ಅಭಿವೃದ್ಧಿ ಆಗದೇ ಸಾಲ ಹೆಚ್ಚಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ಜನ ಬೇಸತ್ತಿದ್ದಾರೆ. ಸರ್ಕಾರ ಬದಲಿಸಲು ಪಣ ತೊಟ್ಟಿದ್ದಾರೆ. ಅದರ ಫಲಿತಾಂಶವನ್ನು ಸ್ಥಳೀಯ ಚುನಾವಣೆಗಳಲ್ಲಿ ನೋಡಬೇಕಾಗುತ್ತದೆ. ಆದ್ದರಿಂದ ನಗರಸಭೆ, ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮಾಡುತ್ತಿಲ್ಲ ಎಂದು ಅವರು ಪರೋಕ್ಷವಾಗಿ ಟಾಂಟ್ ಕೊಟ್ಟರು.
ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸಾಕಪ್ಪಾ ಈ ಕಾಂಗ್ರೆಸ್ ಸರ್ಕಾರ, ಬೆಲೆ ಏರಿಕೆ ಸರ್ಕಾರ ಎಂಬ ಘೋಷಣೆ ಕೂಗಿದರು. ಜನ ವಿರೋಧಿ ಸರ್ಕಾರ ಎಂದು ದೂರಿದರು.












Click it and Unblock the Notifications