ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ಬೆಂಗಳೂರು, ಡಿಸೆಂಬರ್ 12: ಆತ ಮನೆಯೊಡತಿ ಮನೆಗೆ ಬರುವ ಮೊದಲೇ ಬೆಡ್‌ರೂಂನಲ್ಲಿ ಅಡಗಿ ಕುಳಿತಿದ್ದ, ಆಕೆ ಬಂದ ಬಳಿಕ ಒಡವೆಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.

ಮಹಿಳೆ ಪ್ರತಿಷ್ಠಿತ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ, ಅವರು ಮನೆಗೆ ಬಂದು ಟಿವಿ ನೋಡಿ ಬಳಿಕ ಮಲಗಬೇಕೆಂದು ಬೆಡ್‌ರೂಂಗೆ ಬಂದಾಗ ದುಷ್ಕರ್ಮಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಆಕೆಯ ಮೈಮೇಲಿದ್ದ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರದ ಜೊತೆಗೆ ಬೀರುವಿನಲ್ಲಿದ್ದ ಒಡೆವೆಗಳನ್ನೂ ದೋಚಿ ಪರಾರಿಯಾಗಿದ್ದಾನೆ.

ಆತ ಮುಖಕ್ಕೆ ಬಟ್ಟೆ ಕಟ್ಟಿದ್ದ ಕಾರಣ ಆತ ನೋಡಲು ಹೇಗಿದ್ದಾನೆ ಎಂಬುದು ತಿಳಿಯಲಿಲ್ಲ. ಬನಶಂಕರಿ ಮೂರನೇ ಹಂತದ ಐಟಿಐ ಬಡಾವಣೆಯಲ್ಲಿ ನೆಲಸಿರುವ ಮಹಿಳೆ ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿ ಮಲಗುವಾಗ ಕೋಣೆಗೆ ಹೋಗುತ್ತಿದ್ದಂತೆ ಮನೆಯಲ್ಲೇ ಅವತಿದ್ದ ದುಷ್ಕರ್ಮಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆ ದಿನ ಸಂಜೆ ರ ಸುಮಾರಿಗೆ ಮಹಿಳೆಗೆ ಪತಿ ಕರೆ ಮಾಡಿ ಸ್ನೇಹಿತರ ಮನೆಗೆ ಹೋಗುತ್ತಿದ್ದೇನೆ ಬರುವುದು ತಡವಾಗುತ್ತದೆ ಎಂದು ತಿಳಿಸಿದ್ದರು.

Thief hide in the bedroom and later looted the jwelleries

ಇದರಿಂದ ಮಹಿಳೆ ಕೆಲಸ ಮುಗಿದ ನಂತರ ತ್ಯಾಗರಾಜನಗರದಲ್ಲಿರುವ ತಾಯಿ ಮನೆಗೆ ಹೋಗಿ ರ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದರು. ಬೀರುವಿನಲ್ಲಿದ್ದ ಚಿನ್ನಾಭರಣವನ್ನೂ ದೋಚಿಕೊಂಡು ಪರಾರಿಯಾಗಿದ್ದಾನೆ. ಆತ ಮನೆಯೊಳಗೆ ಹೇಗೆ ಬಂದ ಎನ್ನುವುದೇ ಪ್ರಶ್ನೆಯಾಗಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+