Bengaluru: ಜಯನಗರದಲ್ಲಿ ಬೀದಿ ನಾಯಿ ಮೇಲೆ ಅತ್ಯಾಚಾರ
ಬೆಂಗಳೂರು, ಮಾರ್ಚ್ 15: ಕಾಲ ಎಷ್ಟರ ಮಟ್ಟಿಗೆ ಕೆಟ್ಟು ಹೋಗಿದೆ ಅಂದರೆ ಹೆಣ್ಣು ಮಕ್ಕಳು, ಚಿಕ್ಕ ಮಕ್ಕಳು ಮಾತ್ರವಲ್ಲದೇ ಕೆಲವು ನೀಚ ಕಾಮಾಂಧರಿಂದ ಮೂಕ ಪ್ರಾಣಿಗಳಿಗೂ ರಕ್ಷಣೆ ಇಲ್ಲದಂತಾಗಿದೆ. ಬೀದಿ ಬದಿಯಲ್ಲಿ ಮಲಗುವ ಶ್ವಾನಗಳನ್ನು ಕೂಡ ಬಿಡದೇ ಅವುಗಳಿಗೆ ಸಹ ಲೈಂಗಿಕ ಕಿರುಕುಳ ನೀಡುವ ವಿಕೃತ ಮನಸ್ಥಿತಿಯವರು ನಮ್ಮ ನಡುವೆಯೇ ಇದ್ದಾರೆ ಎನ್ನುವುದು ನಿಜಕ್ಕೂ ಆತಂಕದ ವಿಷಯವಾಗಿದೆ.
ಮೂಕ ಪ್ರಾಣಿ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿ, ರಕ್ತ ಬರುವಂತೆ ಗಾಯಗೊಳಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಈ ಘಟನೆ ನಡೆದಿರುವುದು ತಿಳಿದು ಬಂದಿದೆ.

ಜಯನಗರದ ಸುತ್ತ ಮುತ್ತ ವಿದ್ಯಾ ಎನ್ನುವ ಮಹಿಳೆಯೊಬ್ಬರು ಪ್ರತಿ ದಿನ ಬೀದಿ ನಾಯಿಗಳಿಗೆ ಊಟ ಹಾಕುತ್ತಾರೆ. ತಮ್ಮ ಮನೆಯಲ್ಲೇ ಊಟ ತಯಾರಿಸಿ ಜಯನಗರದ ಸುತ್ತಲೂ ಒಂದು ಸುತ್ತು ಬಂದು ಸಿಕ್ಕ ಸಿಕ್ಕ ಬೀದಿ ನಾಯಿಗಳಿಗೆ ಊಟ ಹಾಕಿ ಅವುಗಳೊಂದಿಗೆ ಸಮಯ ಕಳೆದು ಬರುವುದು ವಿದ್ಯಾ ಅವರ ದಿನಚರಿ ಆಗಿದೆ. ಆದರೆ ಮಾರ್ಚ್ 13 ಗುರುವಾರ ರಾತ್ರಿ ನಡೆದ ಘಟನೆ ನೋಡಿ ವಿದ್ಯಾ ಶಾಕ್ ಆಗಿದ್ದಾರೆ.
ಎಂದಿನಂತೆ ಗುರುವಾರ ರಾತ್ರಿಯೂ ಸಹ ವಿದ್ಯಾ ಬೀದಿ ನಾಯಿಗಳಿಗೆ ಊಟ ತಯಾರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಶಾಲಿನಿ ಗ್ರೌಂಡ್ ಬಳಿಯಲ್ಲಿ ವ್ಯಕ್ತಿಯೋರ್ವ ಶ್ವಾನದ ಜೊತೆ ಸಂಭೋಗ ಮಾಡುತ್ತಿರುವುದನ್ನು ನೋಡಿದ್ದಾರೆ. ವಿದ್ಯಾ ಅವರನ್ನು ಕಂಡ ಕೂಡಲೇ ಕಿಡಿಗೇಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ವಿದ್ಯಾ ಗಾಯಗೊಂಡಿದ್ದ ಶ್ವಾನವನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ಈ ವಿಚಾರವನ್ನು ವಿದ್ಯಾ ಜಯನಗರದ ಶ್ವಾನ ಪ್ರಿಯರಿಗೆ ತಿಳಿಸಿದ್ದು, ಗಾಯಗೊಂಡು ನರಳಾಡುತ್ತಿದ್ದ ಶ್ವಾನದ ವಿಡಿಯೋವನ್ನು ಶೇರ್ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಅಂದರೆ ಮಾರ್ಚ್ 14 ಶುಕ್ರವಾರ ಸಂಜೆ ಮತ್ತೆ ಶಾಲಿನಿ ಮೈದಾನದ ಬಳಿ ಶ್ವಾನ ಪ್ರಿಯರು ಎಲ್ಲರೂ ಜೊತೆಯಲ್ಲಿ ತೆರಳಿದ್ದಾರೆ. ಈ ವೇಳೆ ಅದೇ ವ್ಯಕ್ತಿ ಅಲ್ಲಿಯೇ ಓಡಾಡಿಕೊಂಡಿರುವುದನ್ನು ಕಂಡು, ಕೂಡಲೇ ಶ್ವಾನ ಪ್ರಿಯರು ಆತನನ್ನು ಹಿಡಿದು ಥಳಿಸಿ ಬಳಿಕ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಪುರುಷರು ಶ್ವಾನಗಳ ಮರ್ಮಾಂಗವನ್ನು ಕೊಯ್ದು ಸಂಭೋಗ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ.












Click it and Unblock the Notifications