ಬೆಂಗಳೂರಿನಿಂದ ಶಿರಡಿಗೆ ವಾರದ 6 ದಿನ ವಿಮಾನ

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನಿಂದ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುವವರಿಗೆ ಸ್ಪೈಸ್ ಜೆಟ್ ವಿಮಾನ ಸೌಲಭ್ಯ ಒದಗಿಸುತ್ತಿದೆ. ಮಂಗಳವಾರ ಹೊರತುಪಡಿಸಿ ವಾರದ 6 ದಿನಗಳ ವಿಮಾನಯಾನ ಲಭ್ಯವಿರಲಿದೆ.

2019ರ ಜನವರಿ 6 ರಿಂದ ಈ ಸೇವೆ ಆರಂಭವಾಗಲಿದ್ದು, ಒಂದು ಗಂಟೆ ನಲವತ್ತೈದು ನಿಮಿಷದ ಪ್ರಯಾಣದ ಅವಧಿಗೆ ಆರಂಭಿಕ ಟಿಕೆಟ್ ದರ ಸುಮಾರು 4,367 ರೂಪಾಯಿಗಳಾಗಿದೆ.

ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಮಧ್ಯಾಹ್ನ 2.25 ಕ್ಕೆ ಹೊರಡುವ ವಿಮಾನ ಸಂಜೆ 4.10 ಕ್ಕೆ ತಲುಪುತ್ತದೆ. ಸ್ಪೈಸ್ ಜೆಟ್ ನ 90ಸೀಟುಗಳ ಎರಡು ಏರ್ ಕ್ರಾಫ್ಟ್ ವಿಮಾನಗಳು(ಎಸ್ ಜಿ 1268) ಕಾರ್ಯ ನಿರ್ವಹಿಸಲಿವೆ. ಶಿರಡಿಯಿಂದ ವಿಮಾನಗಳು 12.10PM ಗೆ ಹೊರಟು 1.55pmಗೆ ತಲುಪಲಿವೆ.

ಹೈದರಾಬಾದ್ ಮೂಲಕ ಸಂಪರ್ಕ ವಿಮಾನಯಾನ

ಹೈದರಾಬಾದ್ ಮೂಲಕ ಸಂಪರ್ಕ ವಿಮಾನಯಾನ

ಎಸ್ ಜಿ 3577 ಇದಕ್ಕೆ ಸಂಪರ್ಕ ವಿಮಾನವಾಗಿದ್ದು, 11.20amಗೆ ಶಿರಡಿ ಬಿಟ್ಟು ಹೈದರಾಬಾದಿಗೆ 12.40PM ಗೆ ತಲುಪಲಿವೆ. ನಂತರ ಹೈದರಾಬಾದ್ 4.45pm ಬಿಟ್ಟು 5.20pm ಗೆ ಬೆಂಗಳೂರು ತಲುಪಲಿವೆ.

ಹನ್ನೆರೆಡು ದೇಶೀಯ ವಿಮಾನಯಾನ ಸಂಸ್ಥೆಗಳು ಅನುಮೋದನೆ ಪಡೆದಿದೆ. ಈಗಾಗಲೇ ದೇಶದ ವಿವಿಧ ನಗರಗಳಿಗೆ ಹಾರಾಟ ನಡೆಸಲು ಸ್ಪೈಸ್ ಜೆಟ್, ಜೆಟ್ ಏರ್, ಟ್ರು ಏರ್ ಸಂಸ್ಥೆಗಳು ಸಿದ್ಧವಾಗಿವೆ.

ವಾರಪೂರ್ತಿ ನೇರ ವಿಮಾನ ಶೀಘ್ರದಲ್ಲೇ

ವಾರಪೂರ್ತಿ ನೇರ ವಿಮಾನ ಶೀಘ್ರದಲ್ಲೇ

ಏರ್ ಕ್ರಾಫ್ಟ್ ಎಸ್ ಜಿ 1268 ಮಂಗಳವಾರ ಒಂದು ದಿನ ಹೊರತುಪಡಿಸಿ ಉಳಿದೆಲ್ಲ ದಿನ ಸಂಚರಿಸಲಿದೆ. ಮಂಗಳವಾರ ಸಂಚಾರಕ್ಕೆ ಎಸ್ ಜಿ 3577 ಬಳಕೆಯಾಗುತ್ತಿದ್ದು, ಸದ್ಯದಲ್ಲೇ ವಾರಪೂರ್ತಿ ಬೆಂಗಳೂರಿನಿಂದ ಶಿರಡಿಗೆ ನೇರ ವಿಮಾನ ಸೇವೆ ಒದಗಿಸಲಾಗುವುದು ಎಂದು ಸ್ಪೈಸ್ ಜೆಟ್ ಹೇಳಿದೆ.

ನೇರ ಬೋಯಿಂಗ್ ವಿಮಾನ ಸೇವೆ

ನೇರ ಬೋಯಿಂಗ್ ವಿಮಾನ ಸೇವೆ

ಬೆಂಗಳೂರು ಅಷ್ಟೇ ಅಲ್ಲದೆ ಮುಂಬೈ, ಹೈದರಾಬಾದ್ ಇತರೆ ಪ್ರದೇಶಗಳಿಗೂ ವಿಮಾನಯಾನ ಸಂಸ್ಥೆಗಳು ಸೇವೆ ಒದಗಿಸಲು ಮುಂದಾಗಿದೆ. ಹೈದರಾಬಾದ್ ಹಾಗೂ ಮುಂಬೈ ನಿಂದ ಶಿರಡಿಗೆ ತೆರಳುವ ವಿಮಾನಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. 189 ಆಸನ ಸಾಮರ್ಥ್ಯ ಗಳನ್ನು ಒಳಗೊಂಡಿರುವ ದೆಹಲಿ-ಶಿರಡಿ ನೇರ ಬೋಯಿಂಗ್ ವಿಮಾನ ಸೇವೆಯನ್ನು ಆರಂಭಿಸಲಾಗುತ್ತಿದೆ.

ವಿವಿಧ ನಗರಗಳಿಂದ ವಿಮಾನ ಸಂಪರ್ಕ

ವಿವಿಧ ನಗರಗಳಿಂದ ವಿಮಾನ ಸಂಪರ್ಕ

ಚೆನ್ನೈನಿಂದಲೂ ಶಿರಡಿಗೆ ವಾರಣಸಿಗೆ ವಿಮಾನಯಾನ ಆರಂಭವಾಗಲಿದೆ. ಜನವರಿ 10, 2019ರ ನಂತರ ಎಲ್ಲಾ ವಾಣಿಜ್ಯ ವಿಮಾನ ಹಾರಾಟ ಆರಂಭವಾಗಲಿದೆ, ಫೆಬ್ರವರಿ 11ರ ವೇಳೆಗೆ ದೇಶದ ವಿವಿಧ ನಗರಗಳಿಂದ ಶಿರಡಿಗೆ ವಿಮಾನ ಸಂಪರ್ಕ ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+