ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಸಾಕು ಮಗನ ಬಂಧನ

ಬೆಂಗಳೂರು, ಡಿಸೆಂಬರ್ 13: ಮದ್ಯ ಸೇವನೆ ಮತ್ತಿತರೆ ದುಶ್ಚಟಗಳಿಗೆ ತಾಯಿ ಹಣ ಕೊಟ್ಟಿಲ್ಲ ಹಾಗೂ ಬುದ್ಧಿವಾದ ಹೇಳಿದ್ದಾಳೆ ಎನ್ನುವ ಕಾರಣಕ್ಕೆ ಬೈಕ್‌ನಲ್ಲಿದ್ದ ಪೆಟ್ರೋಲ್ ತಂದು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಅಶ್ವತ್ಥ ನಗರ ನಿವಾಸಿ ಉತ್ತಮ್ ಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತಮ್ ತಾಯಿ ಭಾರತಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಪಿಯುಸಿ ವ್ಯಾಸಂಗವನ್ನು ಅರ್ಧಕ್ಕೇ ಕೈಬಿಟ್ಟಿದ್ದ ಉತ್ತಮ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ, ಬದಲಾಗಿ ದುಶ್ಚಟಗಳಿಗೆ ದಾಸನಾಗಿದ್ದ, ಡಿ.6ರಂದು ರಾತ್ರಿ 9.30ರ ಸುಮಾರಿಗೆ ಭಾರತಿ ಹಾಗ ಪತಿ ಮಂಜುನಾಥ್ ಅವರು ಮನೆಯಲ್ಲಿದ್ದಾಗ ಬಂದ ಉತ್ತಮ್ ಮದ್ಯಪಾನ ಮಾಡಲು ಹಣ ಕೇಳಿದ್ದ, ಹಣ ಇಲ್ಲ ಎಂದಿದ್ದಷ್ಟೇ ಅಲ್ಲದೆ ಇದರಿಂದ ಆರೋಗ್ಯ ಹಾಳಾಗುತ್ತದೆ ಉತ್ತಮ ಅಭ್ಯಾಸ ಅಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ.

Son arrested who blazed his own mother

ಅಷ್ಟಕ್ಕೆ ಕೋಪಗೊಂಡ ಉತ್ತಮ್ ಮನೆಯ ಹೊರಗಡೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ತಂದು ತಾಯಿಯ ಮೇಲೆ ಎರಚಿ ಬೆಂಕಿ ಹಚ್ಚಿದ್ದ, ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈತುಂಬ ಸುಟ್ಟ ಗಾಯಗಳಾಗಿವೆ. ಬಳಿಕ ಆತ ತಲೆಮರೆಸಿಕೊಂಡಿದ್ದ ಇದೀಗ ಸದಾಶಿವನಗರ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ ಸಾಕು ಮಗ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+