ಬೆಂಗಳೂರಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಬಂದ್

ಬೆಂಗಳೂರು, ನವೆಂಬರ್ 9: ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ತೀರ್ಪು ಸುಪ್ರೀಂಕೋರ್ಟ್‌ನಿಂದ ಇಂದು ಹೊರಬೀಳಲಿರುವ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.

ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈ ಸಮಯಕ್ಕೆ ಗೋರಿಪಾಳ್ಯದಲ್ಲಿ ಎಂದಿನಂತೆ ಅಂಗಡಿಗಳು ಓಪನ್ ಮಾಡಲಾಗುತ್ತೆ. ಆದರೆ ಇಂದು ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಚಾಮರಾಮಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂಖ್ಯೆ ವಿರಳವಾಗಿದೆ.ವ್ಯಾಪಾರಿಗಳು ಮಾರ್ಕೆಟ್ ಏರಿಯಾಗಳಲ್ಲಿ ಎಂದಿನಂತೆ ಅಂಗಡಿ ತೆರೆದಿದ್ದಾರೆ.

ಗೋರಿಪಾಳ್ಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಇನ್ನೂ ಓಪನ್ ಆಗಿಲ್ಲ. ಮತ್ತೆ ಕೆಲವು ಮಂದಿ ಹತ್ತು ಗಂಟೆಯ ನಂತರ ಪರಿಸ್ಥಿತಿ ನೋಡಿಕೊಂಡು ಅಂಗಡಿ ತೆರೆಯಲು ನಿರ್ಧರಿಸಿದ್ದಾರೆ. ಇಡೀ ಬೆಂಗಳೂರಿನಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

Some Shops-Stalls Closed In Bengaluru

ಬೆಂಗಳೂರಿನಾದ್ಯಂತ ನಾಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿ 8 ಸಾವಿರ ಮಂದಿಯನ್ನು ನಿಯೋಜಿಸಲಾಗಿದ್ದು, 50 ಕೆಎಸ್ ಆರ್ ಪಿ, 30 ಸಿಎಆರ್ ಒಂದು ಸಿಆರ್ ಪಿಎಫ್ ತುಕಡಿಯನ್ನು ನಿಯೋಜಿಸಲಾಗಿದೆ.

ನಗರದಾದ್ಯಂತ ಶನಿವಾರ ಬೆಳಿಗ್ಗೆ 6 ರಿಂದ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಸೆಕ್ಷನ್ 144 ಸಹ ಬೆಳಿಗ್ಗೆ 7 ರಿಂದ ಜಾರಿಗೆ ಬರಲಿದೆ. ರಾತ್ರಿ 12 ರವರೆಗೆ ಮುಂದುವರಿಯಲಿದೆ. ಈಗಾಗಲೇ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ತೀರ್ಪಿನ ನಂತರ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೂ ನಿಷೇಧ ಹೇರಲಾಗಿದೆ. ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+