ಮಂಗಳವಾರದ ಕೆಲವು ವೈವಿಧ್ಯಮಯ ಸುದ್ದಿ ಚಿತ್ರಗಳು
ಬೆಂಗಳೂರು, ಡಿಸೆಂಬರ್, 08: ನಗರದ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹೊಸದಾಗಿ ಆರಂಭವಾದ ಯೋಗಕೇಂದ್ರ ಉದ್ಘಾಟನೆ ಸಮಾರಂಭ ಡಿಸೆಂಬರ್ 07ರ ಸೋಮವಾರ ನಡೆಯಿತು. ಆ ಸಂದರ್ಭದಲ್ಲಿ ಟಿಬೇಟಿಯನ್ ಧರ್ಮಗುರು ದಲೈಲಾಮ ಹಾಗೂ ಹಾಲಿವುಡ್ ನಟ ರಿಚರ್ಡ್ ಗೇರ್ ಸೋಮವಾರ ನಡೆದ ಯೋಗಕೇಂದ್ರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.
ಚೆನ್ನೈ ಪ್ರವಾಹದಿಂದ ಸ್ಮಶಾನ ಮೌನ ಆವರಿಸಿದ ಛಾಯೆ ಇನ್ನೂ ಹಾಗೆಯೇ ಇದೆ. ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಬೊಗಸೆ ನೀರು, ತುತ್ತು ಆಹಾರ ಸಿಗದೆ ಉಪವಾಸದಲ್ಲೇ ಬದುಕು ತಳ್ಳುತ್ತಿದ್ದಾರೆ. ಕುಂಭದ್ರೋಣ ಮಳೆಗೆ ತತ್ತರಗೊಂಡ ಚೆನ್ನೈ ಮಂದಿ ತಮ್ಮ ಸಂಬಂಧಿಕರನ್ನು ಕಳೆದುಕೊಂಡು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಚೆನ್ನೈ, ತಮಿಳುನಾಡು ತನ್ನ ಸಹಜ ಸ್ಥಿತಿಗೆ ಮರಳಲು ಹಲವಾರು ಸಹಾಯ ಹಸ್ತ ಚಾಚಿದ್ದಾರೆ.[ಚೆನ್ನೈನಿಂದ ಬಂದವರಿಗೆ ಉಚಿತ ತಪಾಸಣೆ, ಚಿಕಿತ್ಸೆ]
ಆದರೆ ಇದೀಗ ಸಿನ್ನೆ ಎಂಬ ಚಂಡಮಾರುತ ಸೌತ್ ನಾರ್ವೆ ಪ್ರದೇಶದಲ್ಲಿ ಅಬ್ಬರಿಸಲು ಶುರುವಿಟ್ಟಿದೆ. ಸೌತ್ ನಾರ್ವೆಯಲ್ಲಿ ಸಿನ್ನೆ ಎಂಬ ಚಂಡ ಮಾರುತ ತನ್ನ ರುದ್ರನರ್ತನ ತೋರುತ್ತಿದ್ದು, ಹಲವಾರು ಮನೆ, ಸಂಸ್ಥೆಗಳು ಈಗಾಗಲೇ ಜಲಾವೃತಗೊಂಡಿದೆ. ಈಗಿನ ಜನರ ಜೀವನಶೈಲಿಗೆ ಬೇಸತ್ತ ಪ್ರಕೃತಿ ತನ್ನ ನಿಜವಾದ ಸ್ಚರೂಪ ತೋರುತ್ತಲೇ ಇದೆ. ಹೀಗೆ ಹಲವಾರು ಘಟನೆಗಳು ಮಂಗಳವಾರ ನಡೆದಿದೆ.

ಬೆಂಗಳೂರಿನ ಕಾರ್ಯಕ್ರಮದಲ್ಲಿ ದಲೈಲಾಮ
ನಗರದ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹೊಸದಾಗಿ ಒಂದು ಯೋಗಕೇಂದ್ರ ಸ್ಥಾಪಿಸಲಾಯಿತು. ಆ ಸಂದರ್ಭದಲ್ಲಿ ಟಿಬೇಟಿಯನ್ ಧರ್ಮಗುರು ದಲೈಲಾಮ ಹಾಗೂ ಹಾಲಿವುಡ್ ನಟ ರಿಚರ್ಡ್ ಜೆರೆ ಸೋಮವಾರ ನಡೆದ ಯೋಗಕೇಂದ್ರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

ಸೌತ್ ನಾರ್ವೆಯಲ್ಲಿ ಸಿನ್ನೆ ಚಂಡಮಾರುತ
ಸೌತ್ ನಾರ್ವೆಯಲ್ಲಿ ಚಂಡ ಮಾರುತದಿಂದ ಹಲವಾರು, ಮನೆ, ಕಟ್ಟಡಗಳು ಜಲಾವೃತಗೊಂಡಿದೆ. ತಮಿಳುನಾಡು ಇನ್ನಿತರ ಪ್ರದೇಶಗಳಲ್ಲಿ ರೋನು ಚಂಡಮಾರುತ ಅಬ್ಬರಿಸಿದರೆ, ಸೌತ್ ನಾರ್ವೆಯಲ್ಲಿ ಸಿನ್ನೆ ಚಂಡಮಾರುತ ತನ್ನ ರುದ್ರ ನರ್ತನ ತೋರುತ್ತಿದೆ. ಸಿನ್ನೆ ಚಂಡಮಾರುತಕ್ಕೆ ಫೆದಾ ಜಿಲ್ಲೆಯ ಮನೆ ಮುಳುಗಿರುವುದು

ಮಾಂಸ ಹಬ್ಬದ ಆಚರಣೆಯ ಅನುಮತಿಗಾಗಿ ಓಟ
ಹೈದರಾಬಾದಿನ ಒಸಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾಂಸ ಹಬ್ಬ ದಿನಾಚರಣೆ ಆಚರಿಸಲು ಪೊಲೀಸರಿಂದ ಅನುಮತಿ ಪಡೆಯಲು ಸೋತು ಎರಡು ಕಿಮೀ ಓಡುವ ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಡಿಸೆಂಬರ್ ೧೦ಕ್ಕೆ ಹಬ್ಬ ಆಚರಿಸಲು ಯಾವುದೇ ಅನುಮತಿ ನೀಡಿಲ್ಲ.

ಅಯ್ಯೋ ನನ್ನ ಮನೆ
ಬದುಕಲು ಆಶ್ರಯವಾಗಿದ್ದ ತನ್ನ ಗುಡಿಸಲು ಕಳೆದುಕೊಂಡ ಮಹಿಳೆ ಬೀದಿಗೆ ಬಂದಿದ್ದಾಳೆ, ಬಾಳಿ ಬದುಕಿದ, ಸಂತೋಷ ಕಷ್ಟಗಳನ್ನು ಸಮಾನವಾಗಿ ಹಂಚಿದ ತನ್ನ ಮನೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವುದನ್ನು ಕಂಡ ಮುಂಬೈ ಮಹಿಳೆ ಬಿಕ್ಕಿ ಬಿಕ್ಕಿ ಅತ್ತದ್ದು ಹೀಗೆ

ಹೇಗಿದೆ ಯೂಸುಫ್ ಫ್ಯಾಮಿಲಿ ಫೋಟೋ?
ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್ ತನ್ನ ಕುಟುಂಬದವರೊಂದಿಗೆ ಜಗದ್ವಿಖ್ಯಾತ ಪ್ರೇಮಸೌಧ ತಾಜ್ ಮಹಲ್ ಎದುರು ತಮ್ಮಕುಟುಂಬ ಸಮೇತ ಫೋಟೋ ತೆಗೆಸಿಕೊಂಡರು

ಗಂಡನನ್ನು ಕಳೆದುಕೊಂಡ ಪತ್ನಿಯ ದುಃಖ
ಮದ್ಯ ಸೇವಿಸಿ ಸಾವನ್ನಪ್ಪಿದ ತನ್ನ ಗಂಡನನ್ನು ಕಳೆದುಕೊಂಡ ವಿಜಯವಾಡದ ಮಹಿಳೆ ಮುಂದಿನ ದಾರಿ ಕಾಣದೆ ಮೆಟ್ಟಿಲ ಮೇಲೆಯೇ ಮಲಗಿ ಕಣ್ಣೀರುಗರೆಯುತ್ತಿರುವ ದೃಶ್ಯ












Click it and Unblock the Notifications