ಸಿದ್ಧಾರ್ಥ ನಾಪತ್ತೆ: ಎಸ್.ಎಂ.ಕೃಷ್ಣ ಮನೆಗೆ ಗಣ್ಯರ ಭೇಟಿ
ಬೆಂಗಳೂರು, ಜುಲೈ 30: ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಹಠಾತ್ ನಾಪತ್ತೆ ಆಗಿದ್ದು. ವಿಷಯ ತಿಳಿಯುತ್ತಿದ್ದಂತೆ ಕೃಷ್ಣ ಅವರ ನಿವಾಸಕ್ಕೆ ರಾಜಕಾರಣಿಗಳ ದಂಡೇ ಆಗಮಿಸಿದೆ.
ಸಿಎಂ ಯಡಿಯೂರಪ್ಪ ಅವರು ಬೆಳಿಗ್ಗೆ 7 ಗಂಟೆಗೆ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಕೃಷ್ಣ ಅವರಿಗೆ ಶೋಧ ಕಾರ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರುಗಳು ಸೇರಿ ಬಿಜೆಪಿಯ ಹಲವು ನಾಯಕರು ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ಡಿಜಿಪಿ ನೀಲಮಣಿರಾಜು ಅವರು ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಶೋಧ ಕಾರ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಗತ್ಯಬಿದ್ದರೆ ನೌಕಾಪಡೆಯ ಸಿಬ್ಬಂದಿಯ ನೆರವು ಪಡೆಯಿರಿ ಎಂದು ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.
ಕೇಂದ್ರದಿಂದ ಎಲ್ಲಾ ಅಗತ್ಯ ನೆರವುಗಳನ್ನು ಪಡೆದುಕೊಳ್ಳಿರೆಂದು ಈಗಾಗಲೇ ಯಡಿಯೂರಪ್ಪ ಅವರು ತಿಳಿಸಿದ್ದು, ಹೆಲಿಕಾಪ್ಟರ್ ಮತ್ತು ಸುಸಜ್ಜಿತ ಹಡಗು ಬಳಸಿ ಶೋಧ ಕಾರ್ಯವನ್ನು ಮುಂದುವರೆಸಲಾಗುವುದು.












Click it and Unblock the Notifications