ಕೆರೆ ನುಂಗಿ ನಿರ್ಮಿಸಲಾದ ಬಿಡಿಎ ಲೇಔಟ್‌ಗಳಲ್ಲಿ ಸೈಟ್ ಪಡೆದ ರಾಜಕಾರಣಿಗಳ ಲಿಸ್ಟ್ ಇಲ್ಲಿದೆ!
ಬೆಂಗಳೂರು, ಸೆಪ್ಟೆಂಬರ್ 30: ಬೆಂಗಳೂರಿನ 23 ಕೆರೆಗಳನ್ನು ಸಮಾಧಿಯನ್ನು ಮಾಡಿದ್ದ ಬಿಡಿಎ ಅಲ್ಲಿ ಲೇಔಟ್‌ಗಳನ್ನು ನಿರ್ಮಾಣ ಮಾಡಿದೆ. ಇಂತಹ ಲೇಔಟ್‌ಗಳಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಕೆಲ ಶಾಸಕರು, ಸಚಿವರಿಗೆ, ಹಾಲಿ, ಮಾಜಿ ಶಾಸಕರಿಗೆ ನಿವೇಶನ ಹಂಚಿಕೆಯನ್ನು ಮಾಡಲಾಗಿದೆ. ಕೆರೆ ನುಂಗಿದ ಬಿಡಿಎ ಕಡೆಯಿಂದ ಸೈಟು ಬಳುವಳಿಯಾಗಿ ಪಡೆದವರ ಲಿಸ್ಟ್ ಇಲ್ಲಿದೆ.
ಕೆರೆಗಳನ್ನು ನಾಶ ಮಾಡಿ ಬಿಡಿಎ ನಿರ್ಮಿಸಿದ ಲೇಔಟ್‌ಗಳಲ್ಲಿ ಶಾಸಕರಿಗೆ, ಸಚಿವರಿಗೆ, ಲೋಕಸಭಾ ಸದಸ್ಯರಿಗೆ ನಿವೇಶನ ಹಂಚಿಕೆಯನ್ನು ಮಾಡಲಾಗಿದೆ. ಕೆರೆ ಮೇಲೆ ನಿರ್ಮಾಣ ಮಾಡಿರುವ ಲೇಔಟ್ ಗಳಲ್ಲಿ ರಾಜಕೀಯ ನಾಯಕರಿಗೆ ಜಿ ಕೆಟಗರಿ ನಿವೇಶನ ಹಂಚಿಕೆಯನ್ನು ಮಾಡಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಲೇ ಬೆಂಗಳೂರಲ್ಲಿ ನಡೆದಿದೆ ಅಕ್ರಮ ಒತ್ತುವರಿಯಾಗಿರುವ ಮಾಹಿತಿ ಲಭ್ಯವಾಗಿತ್ತು. 2013 - 2014ರಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವುದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ. ಬಿಡಿಎ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿ ಕೋಟಿ ಕೋಟಿ ರೂಪಾಯಿಗೆ ಮಾರಾಟವನ್ನು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ 2015ರಲ್ಲಿ ಒತ್ತುವರಿ ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ( ಬಿಡಿಎ) ಪತ್ರ ಬರೆದಿರುವುದು ತಿಳಿದು ಬಂದಿತ್ತು. ಬಿಡಿಎ ತಾನು ಅಕ್ರಮವನ್ನು ಎಸಗಿ ಆ ಬಳಿಕ ಜನರಿಗೆ ವಂಚನೆಯನ್ನು ಮಾಡಿರುವುದಲ್ಲದೇ ರಾಜಕಾರಣಿಗಳಿಗೆ ಜಿ ಕೆಟಗರಿ ಸೈಟ್‌ಗಳನ್ನು ಇದೇ ಲೇಔಟ್‌ನಲ್ಲಿ ನೀಡಿದೆ.

ಕೆರೆಗಳ ಮುಚ್ಚಿ ನಿರ್ಮಾಣವಾಗಿದ್ದ ಲೇಔಟ್
ಆರ್ ಎಂವಿ 2 ನೇ ಹಂತ ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆ ಮೇಲೆ ನಿರ್ಮಿಸಿರುವ ಲೇಔಟ್‌ಗಳಲ್ಲಿ ಜಿ ಕೆಟಗರಿಯ ಸೈಟು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಎಲ್ಲಾ ಪಕ್ಷದ ರಾಜಕಾರಣಿಗಳು ಪಾಲನ್ನು ಪಡೆದಿದ್ದಾರೆ.
* ಗೋವಿಂದ ಕಾರಜೋಳ: ಶಾಸಕ ಕೋಟಾದಲ್ಲಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ105, ಆರ್‌ಎಂವಿ 2 ನೇ ಹಂತ 1998 ರಲ್ಲಿ ಹಂಚಿಕೆ.
* ಡಿಕೆ ಶಿವಕುಮಾರ್: ಶಾಸಕರ ಕೋಟಾ 50×80 ನಿವೇಶನ ಸಂಖ್ಯೆ 105 ಆರ್ ಎಂವಿ 2 ನೇ ಹಂತ 2 ನೇ ಬ್ಲಾಕ್ 1992 ರಲ್ಲಿ ನಿವೇಶನ ಹಂಚಿಕೆ
* ಡಿ.ಸುಧಾಕರ್: ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಸಂ.286/c ಆರ್‌ಎಂವಿ 2 ಸ್ಟೇಜ್ 2010. ರಲ್ಲಿ ನಿವೇಶನ ಹಂಚಿಕೆ.
* ಎಸ್ ಸುರೇಶ್ ಕುಮಾರ್: ಸಚಿವರ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ 2, ಆರ್‌ಎಂವಿ 2 ಸ್ಟೇಜ್4 ಬ್ಲಾಕ್, 2009 ರಲ್ಲಿ ಹಂಚಿಕೆ.
* ಶಾಸಕ ನಜಿರ್ ಅಹ್ಮದ್: 50×80 ನಿವೇಶನ ಸಂಖ್ಯೆ 391 ಆರ್ ಎಂವಿ 2 ನೇ ಹಂತ 2 ನೇ ಬ್ಲಾಕ್ 1992 ರಲ್ಲಿ ನಿವೇಶನ ಹಂಚಿಕೆ
* ಆರ್ ವಿ ದೇವರಾಜ್: ಮಾಜಿ ಶಾಸಕರ ಕೋಟಾದಲ್ಲಿ 50×80 ವಿಸ್ತೀರ್ಣದ 108/ಎ ಆರ್ ಎಂವಿ 2 ನೇ ಸ್ಟೇಜ್ 2 ಬ್ಲಾಕ್ 1992 ರಲ್ಲಿ ಹಂಚಿಕೆ
*ಗೂಳಿಹಟ್ಟಿ ಶೇಖರ್: ಮಾಜಿ ಸಚಿವರ ಕೋಟಾ 2009 ರಲ್ಲಿ ಆರ್‌ಎಂವಿ 2 ನೇ ಹಂತದಲ್ಲಿ ನಿವೇಶನ.

ಹೆಣ್ಣೂರು ಕೆರೆಯನ್ನು ಮುಚ್ಚಿಯು ಲೇಔಟ್
ಹೆಣ್ಣೂರು ಕೆರೆಯನ್ನು ಮುಚ್ಚಿಹಾಕಿದ ಬಿಡಿಎ ಪ್ರತಿಷ್ಠಿತ ಲೇಔಟ್ ಅನ್ನು ನಿರ್ಮಾಣವನ್ನು ಮಾಡಿತ್ತು. ಈ ಲೇಔಟ್‌ನಲ್ಲಿ ರಾಜಕಾರಣಿಗಳಿಗೆ ಸೈಟನ್ನು ಹಂಚಿಕೆಯನ್ನು ಮಾಡಲಾಗಿದೆ.
* ಆರ್ ಅಶೋಕ್: ಸಚಿವರ ಕೋಟಾದಡಿ 50×80 ವಿಸ್ತೀರ್ಣದ, ನಿವೇಶನ ಸಂಖ್ಯೆ 195/L HBR1 stage, 5 ಬ್ಲಾಕ್, 2007 ರಲ್ಲಿ ಹಂಚಿಕೆ.
* ಬಿ ವೈ ರಾಘವೇಂದ್ರ: ಎಂಪಿ ಕೋಟಾದಲ್ಲಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ1, ಆರ್ ಎಂವಿ 2 ಸ್ಟೇಜ್, ನಾಗಶೆಟ್ಟಿಹಳ್ಳಿ 2009ರಲ್ಲಿ ಹಂಚಿಕೆ.
* ಬಿ ಕೆ ಸಂಗಮೇಶ್: ಶಾಸಕರ ಕೋಟಾ 50×80 ವಿಸ್ತೀರ್ಣದ, ನಿವೇಶನ ಸಂ.31 ಆರ್ ಎಂವಿ 2 ಸ್ಟೇಜ್ 2009.
* ವೀರಣ್ಣ ಚರಂತಿಮಠ: ಶಾಸಕರ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ3, ಆರ್‌ಎಂವಿ 2 ಸ್ಟೇಜ್4 ಬ್ಲಾಕ್, ನಾಗಶೆಟ್ಟಿಹಳ್ಳಿ 2006 ರಲ್ಲಿ ಹಂಚಿಕೆ.

ಜಿ ಕ್ಯಾಟಗರಿಯ ಸೈಟುಗಳ ಹಂಚಿಕೆ
* ಜಿ ಕೃಷ್ಣ ಪಾಲೇಮಾರ್: ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಸಂ.12 ಆರ್ ಎಂವಿ 2 ಸ್ಟೇಜ್ 2009. ರಲ್ಲಿ ನಿವೇಶನ ಹಂಚಿಕೆ.
* ಶಿವರಾಜ್ ತಂಗಡಗಿ: ಮಾಜಿ ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಸಂ.31 ಆರ್ ಎಂವಿ 2 ಸ್ಟೇಜ್ 2009. ರಲ್ಲಿ ನಿವೇಶನ ಹಂಚಿಕೆ.
* ಫಕೀರಪ್ಪ: ಎಂಪಿ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಸಂ.71 ಆರ್ ಎಂವಿ 2 ಸ್ಟೇಜ್ ಭೂಪಸಂಧ್ರ 2009. ರಲ್ಲಿ ನಿವೇಶನ ಹಂಚಿಕೆ.
* ಆರ್‌ಎಂವಿ 2 ನೇ ಹಂತ ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆ ಮೇಲೆ ನಿರ್ಮಿಸಿರುವ ಲೇಔಟ್ ಗಳು.
*ಕೆ.ಜೆ ಜಾರ್ಜ್: ಎಂಎಲ್‌ಎ ಕೋಟಾದಡಿ 76×60 ವಿಸ್ತೀರ್ಣದ ನಿವೇಶನ ಸಂಖ್ಯೆ 4033 ಹೆಚ್ ಎ ಎಲ್ 2 ಸ್ಟೇಜ್ 1992 ರಲ್ಲಿ ಹಂಚಿಕೆ.( ತಿಪ್ಪಸಂದ್ರ ಕೆರೆ ಮೇಲೆ ನಿರ್ಮಾಣ ಆಗಿರುವ ಲೇಔಟ್).
*ಸಿ ಟಿ ರವಿ: ಶಾಸಕರ ಕೋಟಾದಲ್ಲಿ ನಿವೇಶನ ಸಂಖ್ಯೆ 195 ಕೆ, ಹೆಚ್ ಬಿಆರ್ 1 ಸ್ಟೇಜ್ 5 ಬ್ಲಾಕ್ ನಲ್ಲಿ 40×60 ನಿವೇಶನ ಹಂಚಿಕೆ( ಹೆಣ್ಣೂರು ಕೆರೆ ಮೇಲೆ ನಿರ್ಮಾಣ ಆಗಿರುವ ಲೇಔಟ್) ..
* ಎಸ್ ಆರ್ ಪಾಟೀಲ್: ಎಂಎಲ್‌ಸಿ ಕೋಟಾದಡಿ ಹಾಗೂ ಆರ್ ಎಸ್ ಪಾಟೀಲ್ ಎಂಪಿ ಕೋಟಾದಲ್ಲಿ ನಿವೇಶನ ಸಂಖ್ಯೆ 564,5 ಹಂಚಿಕೆ 2002
* ಹಂಪನಗೌಡ ಬಾದರ್ಲಿ: ಶಾಸಕರ ಕೋಟಾದಲ್ಲಿ ನಿವೇಶನ ಸಂಖ್ಯೆ 87 ಆರ್‌ಎಂವಿ ಲೇಔಟ್ 1998 ರಲ್ಲಿ ನಿವೇಶನ ಹಂಚಿಕೆ.
* ರಮೇಶ್ ಕತ್ತಿ: ಎಂಪಿ ಕೋಟಾ, ಕೆ. ಶಿವನಗೌಡ ನಾಯಕ್, ಪಿಎಂ ನರೇಂದ್ರ ಸ್ವಾಮಿ, ಜೆ.ಶಾಂತ, ಸುನೀಲ್ ವಲ್ಯಾಪುರ, ಸಿ.ರಮೇಶ್, mlc ಜಲಜಾ ನಾಯ್ಕ್, ಎಂಪಿ ಜನಾರ್ಧನ ಸ್ವಾಮಿ, ಹಾಲಪ್ಪ ಅವರಿಗೆ ಆರ್‌ಎಂಪಿ 2 ಮೇ ಹಂತದಲ್ಲಿ ನಿವೇಶನ..
* ಸಿ.ಸಿ. ಪಾಟೀಲ್: ಎಂಎಲ್ ಎ ಕೋಟಾದಡಿ 40×60 ವಿಸ್ತೀರ್ಣದ ನಿವೇಶನ ಸಂಖ್ಯೆ 3CC-907 HRBR1 ಬ್ಲಾಕ್ ನಲ್ಲಿ 2005 ರಲ್ಲಿ ಹಂಚಿಕೆ.
* ಬಿ.ಸಿ. ಪಾಟೀಲ್: ಎಂಎಲ್ ಎ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ4M-407 HRBR3 ಬ್ಲಾಕ್ ಡಾಲರ್ಸ್ ಕಾಲೋನಿಯಲ್ಲಿ 2006 ರಲ್ಲಿ ಹಂಚಿಕೆ.
* ಪರಮೇಶ್ವರ್ ನಾಯ್ಕ್: ಎಂಎಲ್ ಎ ಕೋಟಾದಡಿ 40×60 ವಿಸ್ತೀರ್ಣದ ನಿವೇಶನ ಸಂಖ್ಯೆ4M-415 HRBR ಲೇಔಟ್ ನ 3 ಬ್ಲಾಕ್ ನಲ್ಲಿ 2001 ರಲ್ಲಿ ಹಂಚಿಕೆ.
* ಪ್ರಕಾಶ್ ಖಂಡ್ರೆ: ಎಂಎಲ್ ಎ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ 5C-319 HRBR1 ಬ್ಲಾಕ್ ನಲ್ಲಿ 2005 ರಲ್ಲಿ ಹಂಚಿಕೆ.

ಬಾಣಸವಾಡಿ ಚನ್ನಸಂದ್ರ ಕೆರೆ ಮುಚ್ಚಿ ಲೇಔಟ್
ಹೆಚ್‌ಆರ್ಬಿಆರ್ 2ನೇ ಹಂತ ಚಳ್ಳಕೆರೆ ಮೇಲೆ ನಿರ್ಮಾಣ ಆಗಿರುವ ಬಿಡಿಎ ಲೇಔಟ್ನಲ್ಲಿ ಮಲ್ಲಿಕಾರ್ಜುನ ಅಕ್ಕಿ ಶಾಸಕರ ಕೋಟಾ ಹಾಗೂ ಎನ್ ಎಸ್ ಬೋಸರಾಜು ಗೆ, ಸುರೇಶ್ ಅಂಗಡಿ ಎಂಪಿ ಕೋಟಾದಡಿ ಹೆಚ್ ಬಿಆರ್ 1 ಸ್ಟೇಜ್5 ಬ್ಲಾಕ್ ನಲ್ಲಿ 2007 ರಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಇವರಿಗೆಲ್ಲಾ ಕೆರೆ ಮೇಲೆ ನಿರ್ಮಾಣ ಮಾಡಲಾದ ಲೇಔಟ್‌ನಲ್ಲಿ ಬಿಡಿಎ ನಿವೇಶನವನ್ನು ಹಂಚಿದೆ. ಮನೆಗಳು ನಿರ್ಮಾಣವಾಗಿದೆ. ಇವರಿಗೆಲ್ಲಾ ಬಿಡಿಎ ಮಾಡಿರುವ ಅನಾಹುತಕ್ಕೆ ಯಾವಾಗ ತೊಂದರೆಯಾಗಲಿದೆಯೋ ತಿಳಿಯುವುದಿಲ್ಲ.












Click it and Unblock the Notifications