ಮಗನ ಸಾವಿನ ಕುರಿತ ಹೇಳಿಕೆಗೆ ಸಿದ್ದರಾಮಯ್ಯ ಮಾರ್ಮಿಕ ಪ್ರತಿಕ್ರಿಯೆ

Recommended Video

      ಮಗನ ಸಾವಿನ ಬಗ್ಗೆ ಹೇಳಿಕೆ ಕೊಟ್ಟ ಜನಾರ್ಧನ ರೆಡ್ಡಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ | Oneindia Kannada

      ಬೆಂಗಳೂರು, ಅಕ್ಟೋಬರ್ 30: 'ನನ್ನನ್ನು ನಾಲ್ಕು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಿದ ಸಿದ್ದರಾಮಯ್ಯ ಅವರಿಗೆ ದೇವರು ಹಿರಿಯ ಮಗ ರಾಕೇಶ್ ಸಾವಿನ ಮೂಲಕ ಶಿಕ್ಷೆ ನೀಡಿದ್ದಾನೆ' ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ಸಿದ್ದರಾಮಯ್ಯ ಮಾರ್ಮಿಕ ಪ್ರತಿಕ್ರಿಯೆ ನೀಡಿದ್ದಾರೆ.

      ರೆಡ್ಡಿ ಹೇಳಿಕೆಗೆ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಿಮ್ಮ ಪಾಪಗಳಿಗೆ ನಿಮ್ಮ ಮಕ್ಕಳು ಶಿಕ್ಷೆ ಅನುಭವಿಸುವಂತೆ ಆಗದಿರಲಿ ಎಂದು ಹೇಳಿದ್ದಾರೆ.

      ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಜನಾರ್ದನ ರೆಡ್ಡಿ, 'ಕೆಟ್ಟವರಿಗೆ ದೇವರು ಬುದ್ದಿ ಕಲಿಸುತ್ತಾನೆ. ನನ್ನನ್ನು ಜೈಲಿಗೆ ಕಳುಹಿಸಿ ನಾಲ್ಕು ವರ್ಷ ನನ್ನ ಮಕ್ಕಳಿಂದ ದೂರ ಇರುವಂತೆ ಮಾಡಿದ ಸಿದ್ದರಾಮಯ್ಯಗೆ ದೇವರು ಅದೇ ರೀತಿ ಸರಿಯಾಗಿ ಬುದ್ದಿ ಕಲಿಸಿದ್ದಾನೆ.

      ದಶರಥ ಮಹಾರಾಜ, ಶ್ರವಣ ಕುಮಾರನನ್ನು ಕೊಂದಾಗ ನಿನಗೂ ಮಗನ ಅಗಲಿಕೆ ನೋವು ಗೊತ್ತಾಗಲಿ ಎಂದು ಎಂದು ಆತನ ವೃದ್ಧ ತಂದೆ ತಾಯಿ ಶಾಪ ನೀಡಿದ್ದರು.

      ನಾಲ್ಕು ವರ್ಷ ನನ್ನಿಂದ ದೂರವಿದ್ದ ಮಕ್ಕಳು ಏನೆಲ್ಲ ಕಷ್ಟ ಅನುಭವಿಸಿದರು. ಅದಕ್ಕೆ ಕಾರಣರಾದ ಎಲ್ಲರೂ ಅನುಭವಿಸುತ್ತಾರೆ' ಎಂದು ಹೇಳಿಕೆ ನೀಡಿದ್ದರು.

      ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಏನು ಉತ್ತರ ನೀಡಿದರು, ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಕ್ತಪಡಿಸಿದ ಅಭಿಪ್ರಾಯಗಳೇನು ಮುಂದೆ ಓದಿ...

      ನಿಮ್ಮ ಮಕ್ಕಳಿಗೆ ನೀಡದಿರಲಿ

      'ನನ್ನ ಮಗನ ಸಾವು ನನಗೆ ದೇವರು‌ಕೊಟ್ಟ ಶಿಕ್ಷೆ‌ ಎಂದು ಜನಾರ್ದನ ರೆಡ್ಡಿ ವ್ಯಂಗ್ಯ ಮಾಡಿದ್ದಾರೆ. ನಿಮ್ಮ‌ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

      ಸುದರ್ಶನ ಜಯರಾಮು

      ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಕಾಮೆಂಟ್ ಮಾಡಿರುವ ಸುದರ್ಶನ್ ಜಯರಾಮು ಎಂಬುವವರು ಶಿವರಾಮ ಕಾರಂತರು ಮಗನನ್ನು ಕಳೆದುಕೊಂಡ ಸಂದರ್ಭದಲ್ಲಿ ನೀಡಿದ ಉತ್ತರವನ್ನು ಪ್ರಸ್ತಾಪಿಸಿದ್ದಾರೆ.

      ಮಗನನ್ನು ಕಳೆದುಕೊಂಡಿದ್ದ ಶಿವರಾಮ ಕಾರಂತರಿಗೆ ಸ್ವಾಂತನ ಹೇಳಲಿಕ್ಕೆಹಿತೈಷಿಯೊಬ್ಬ ಪತ್ರವನ್ನು ಬರೆದಾಗ, ಅದಕ್ಕೆ ಕಾರಂತರು ಮರುತ್ತರ ನೀಡಿದ್ದು ಹೀಗೆ "ಈ ಜಗತ್ತಿನಲ್ಲಿ ಮಗನನ್ನು ಕಳೆದುಕೊಂಡ ತಂದೆ ನಾನೊಬ್ಬನೇ ಅಲ್ಲ,ಹಿಂದೆಯೂ ಹಲವಾರು ಜನ ಕಳೆದುಕೊಂಡಿದ್ದಾರೆ,ಮುಂದೆಯೂ ಇಂಥ ಘಟನೆಗಳು ನಡೆಯುತ್ತವೆ."ಮಕ್ಕಳನ್ನು ಕಳೆದುಕೊಂಡವರೆಲ್ಲಾ ಪಾಪಾತ್ಮರೇ?

      ನಿಮ್ಮ ಕಾಲ ದೂಳಿನ ಸಮರಿಲ್ಲ

      ಅಯ್ಯ.. ರಾಜ್ಯದ ಜನರ ಹೊಟ್ಟೆ ತುಂಬಿಸಿದ ಮಹಾತ್ಮ ನೀವು, ನಿಮ್ಮ ಆಡಳಿತ ನಿಮ್ಮ ರಾಜಕೀಯದ ಕ್ಷಣಗಳನ್ನು ‌ಸುವರ್ಣ ಅಕ್ಷದಲ್ಲಿ ಬರೆದಿಡ ಬೇಕು.. ನಿಮ್ಮ ಕಾಲಿನ ದೂಳಿನ ಸಮ ಇಲ್ಲ ರೆಡ್ಡಿಗಳು.. ನೀವೆಲ್ಲಿ ಅವರೆಲ್ಲಿ.. ಎಂದು ಯಾಸಿನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

      ಜೀವ ವಿರೋಧಿಗಳು

      ರೆಡ್ಡಿ ಅವರು ನಿಮ್ಮಷ್ಟು ಸೂಕ್ಷ್ಮಮತಿ ಅಲ್ಲ ಸಿದ್ಧರಾಮಯ್ಯನವರೆ. ಅವು ಪ್ರತಿನಿಧಿಸುವ ಸಿದ್ಧಾಂತˌಪಕ್ಷˌಅವುಗಳ ವೈಯಕ್ತಿಕ ಜೀವನ ಎಲ್ಲವೂ ಜೀವವಿರೋಧಿ ಹಿನ್ನೆಲೆಯವೇ. ಅವು ಮೃಗಗಳು ಎಂದು ಜಗದೀಶ್ ಎಸ್ ಪಾಟೀಲ್ ಫೇಸ್‌ಬುಕ್ ಕಾಮೆಂಟ್ ಮಾಡಿದ್ದಾರೆ.

      ತುಂಬಿದ ಕೊಡ ತುಳುಕದು

      ನಿಮ್ಮ ದೊಡ್ಡತನಕ್ಕೆ ಶರಣು ಸಿದ್ದರಾಮಯ್ಯನವರೆ (ನಾನು ಕೇಳಿದ ನಿಮ್ಮ ಎಲ್ಲ ಮಾತಿಗಿಂತ ಈ ಮಾತು ತುಂಬಾ ದೊಡ್ಡದೆನಿಸಿದೆ). ನಿಮ್ಮ ಮಾತಿನಿಂದ ತಿಳಿದುಕೊಳ್ಳುವಷ್ಟು ಸೂಕ್ಷ್ಮಮತಿ ಕರ್ನಾಟಕದ ಗಣಿ ಸಂಪತ್ತನ್ನ ಕೊಳ್ಳೆಹೂಡೆದು ಜೈಲಲ್ಲಿ ಮುದ್ದೆ ಮುರಿದ ಜನಾರ್ದನ ರೆಡ್ಡಿಯವರಿಗಿಲ್ಲ. ತುಂಬಿದ ಕೊಡ ತುಳುಕುವುದಿಲ್ಲ. ಅದಕ್ಕೆ ನೀವೇ ಸಾಕ್ಷಿ. ಮನಸ್ಸಿನಲ್ಲಿ ತುಂಬಿದ ಅಜ್ಞಾನ, ಮಾತಿನ ಮುಖಾಂತರ ರೆಡ್ಡಿಯವರ ಬಾಯಲ್ಲಿ ಬಂದಿದೆ ಎಂದು ಬುದಪ್ಪ ವಾಲೀಕಾರ್ ಕಾಮೆಂಟ್ ಮಾಡಿದ್ದಾರೆ.

      ಮುಟ್ಟಿ ನೋಡಿಕೊಳ್ಳುವ ಉತ್ತರ

      ಕೇವಲ ಸಂತೋಷವನ್ನು ಹಂಚಿಕೊಳ್ಳೊ ಮಂದಮತಿಗಳಿಗೆ ದುರಹಂಕಾರಿಗಳಿಗೆ ಬಡತನ ಏನೆಂದರೆನೆಂದೇ ಗೊತ್ತಿಲ್ಲದ ಡಂಬಾಚಾರಿಗಳಿಗೆ ಮುಟ್ಟಿ ನೊಡಿಕೊಳ್ಳುವ ಹಾಗೆ ಹೇಳಿಕೆ ಕೊಟ್ಟಿದ್ದಿರಾ ಸಾರ್. ಒಂದು ವೇಳೆ ಅವರ ಆಜುಬಾಜು ಏನಾದರೂ ಮನುಷ್ಯತ್ವದ ಗಾಳಿ ಬೀಸಿದರೆ ಇನ್ನೆಂದೂ ಯಾರ ವಿಷಯದಲ್ಲಿಯೂ ಈ ರೀತಿ ಮಾತಾಡಲಾರರು. ಆದರೆ ಆ ದುಃಖ ನಿಮ್ಮನ್ನ ಬಾಧಿಸದಿರಲಿ ಎಂಬುದೆ ನಮ್ಮ ಬಯಕೆ ಎಂದು ವಿರೂಪಾಕ್ಷ ಧೂಪದ ಹೇಳಿದ್ದಾರೆ.

      ಒಳ್ಳೆಯದನ್ನು ಬಯಸುವುದೇ ಧರ್ಮ

      ಕೆಟ್ಟವರಿಗೂ ಒಳ್ಳೆಯದನ್ನು ಬಯಸುವುದೇ ಧರ್ಮ. ನಿಮ್ಮ ಹೃದಯ ವೈಶಾಲ್ಯತೆಗೆ ನಾವೆಲ್ಲರೂ ಯಾವಾಗಲೋ ತಲೆಬಾಗಿದ್ದೇವೆ. ಶತ್ರುಗಳಿಗೂ ದೇವನಲ್ಲಿ ಪ್ರಾರ್ಥಿಸಬೇಕು, ಜಗದೊಡೆಯನ ಆಜ್ಞೆ ಇದು.

      ಖಂಡಿತವಾಗಿಯೂ ಅವನಿಗೆ ಭಯಪಟ್ಟರೆ ನಮಗೆ ಬೇರೆ ಯಾರ ಸಹಾಯವು ಅಗತ್ಯವಿಲ್ಲ. ಹುಲಿ ಹುಲಿಯಾಗುತ್ತದೆಯೇ ಹೊರತು ಇಂತಹ ಕಪಟ ಮಾತುಗಳಿಗೆ ಹೆದರಿ ಇಲಿಯಾಗುವುದಿಲ್ಲ ಎಂದು ಖಾದರ್ ಜೀವನ್ ಜ್ಯೋತಿ ಎಂಬುವವರು ಕಾಮೆಂಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+