ಎಚ್ಡಿಕೆ ಸಿಎಂ ಆಗಿ ಮಾಡಿದ ಕೆಲಸ ಬಿಎಸ್‌ವೈ, ಸಿದ್ದರಾಮಯ್ಯ ಮಾಡಿಲ್ಲ- ದೇವೇಗೌಡ
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿದ ಕೆಲಸವನ್ನು ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮಾಡಿದ್ರೆ ಇವತ್ತು ಕುಮಾರಸ್ವಾಮಿಯನ್ನ ಜನ ಮರೆತೇ ಬಿಡುತ್ತಿದ್ದರು. ಆದರೆ ಅವರಿಬ್ಬರು ಆ ರೀತಿ ಕೆಲಸ ಮಾಡಲಿಲ್ಲ ಮಾಡಲಿಲ್ಲ - ದೇವೇಗೌಡ
ಬೆಂಗಳೂರು,
ಮಾರ್ಚ್ 8: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿದ ಕೆಲಸವನ್ನು ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮಾಡಿದ್ರೆ ಇವತ್ತು ಕುಮಾರಸ್ವಾಮಿಯನ್ನ ಜನ ಮರೆತೇ ಬಿಡುತ್ತಿದ್ದರು. ಆದರೆ ಅವರಿಬ್ಬರು ಆ ರೀತಿ ಕೆಲಸ ಮಾಡಲಿಲ್ಲ ಮಾಡಲಿಲ್ಲ. ಇದರಿಂದ ಜನ ಇವತ್ತಿಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎನ್ನುತ್ತಾರೆ," ಎಂದು ದೇವೇಗೌಡರು ಅಭಿಪ್ರಾಯಪಟ್ಟರು. id="toptextpromo"> id='are-slot-1' class='oiad oi-axt oiadv'>ಬೆಂಗಳೂರಿನ
ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದು ಜನತೆಯ ಆಶೀರ್ವಾದದ ಬಲದಿಂದಲ್ಲ. ಅವತ್ತಿನ ಸನ್ನಿವೇಶದಲ್ಲಿ ಕುಮಾರಸ್ವಾಮಿ ಬೇರೆ ಪಕ್ಷದ ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿ ಅವರು ಒಂದಷ್ಟು ಒಳ್ಳೆ ಕೆಲಸ ಮಾಡಿದರು. ಅದನ್ನು ಜನ ಇವತ್ತಿಗೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.[ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ರೆ ಪ್ರಾದೇಶಿಕ ಪಕ್ಷಗಳಿಗೆ ಸಂಕಷ್ಟ- ದೇವೇಗೌಡ] id='are-slot-2' class='oiad oi-axt oiadv'>
ವಂಶ ಪಾರಂಪರ್ಯ ರಾಜಕಾರಣ ಅಲ್ಲ
ಕುಮಾರಸ್ವಾಮಿ ಮೇಲೆ ನಿಮಗೆ ಪುತ್ರ ವ್ಯಾಮೋಹವೋ? ರೇವಣ್ಣ ಹೆಸರನ್ನು ಯಾಕೆ ಎತ್ತುತ್ತಿಲ್ಲ ಎಂಬ ಪ್ರಶ್ನೆ ಪತ್ರಕರ್ತರಿಂದ ಕೇಳಿ ಬಂತು. ಇದಕ್ಕೆ ಉತ್ತರಿಸಿದ ದೇವೇಗೌಡರು ಕುಮಾರಸ್ವಾಮಿ ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕರಾಗಿ ತೊಡಗಿಸಿಕೊಂಡಿದ್ದರು. ಪಿ.ಜಿ ಆರ್ ಸಿಂಧ್ಯಾ ರಾಜೀನಾಮೆ ಬಳಿಕ ಯಾರು ಅನ್ನುವ ಪ್ರಶ್ನೆ ಬಂತು. ಆಗ ಅವರನ್ನು
ರಾಜಕೀಯಕ್ಕೆ ಕರೆತರಲಾಯಿತು. ಅದೇ ರೀತಿ ರೇವಣ್ಣರನ್ನು ಜೆ.ಎಚ್.ಪಟೇಲ್ ಮಂತ್ರಿ ಮಾಡಿದ್ದು ನಾನಲ್ಲ. ನಾನು ಯಾರನ್ನೂ ರಾಜಕೀಯಕ್ಕೆ ತಂದಿಲ್ಲ ಎಂದರು.

ಸಿಎಂ ಆಗಿದ್ದರಲ್ಲೂ ನನ್ನ ಕೈವಾಡವಿಲ್ಲ
ನನ್ನ ಕುಮ್ಮಕ್ಕಿನಿಂದ ಕುಮಾರಸ್ವಾಮಿ ಸಿಎಂ ಆದರು ಅನ್ನುವುದೂ ತಪ್ಪು. ಅವತ್ತಿನ ಸನ್ನಿವೇಶದಲ್ಲಿ ಕುಮಾರಸ್ವಾಮಿ ಬೇರೆ ಪಕ್ಷದ ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾದರು. ತಮ್ಮ ಆಡಳಿತ ಅವಧಿಯಲ್ಲಿ ಒಳ್ಳೇ ಕೆಲಸ ಮಾಡಿದ್ದರಿಂದ ಇವತ್ತು ಜನ ಅವರನ್ನು ಮುಖ್ಯಮಂತ್ರಿಯಾಗಿ ಬಿಂಬಿಸುತ್ತಿದ್ದಾರೆ, ನಾನು ಬಂಬಿಸುತ್ತಿಲ್ಲ. ನಾನು ಹೋದಲ್ಲೆಲ್ಲಾ ಕೇಳಿಸಿಕೊಂಡಿದ್ದೇನೆ, ಕುಮಾರಸ್ವಾಮಿಯವರಿಗೆ ಒಂದು ಅವಕಾಶ ಕೊಡಿ ಎನ್ನುತ್ತಿದ್ದಾರೆ.[ಮೋದಿಜೀ, ಫಾರ್ಮರ್ಸ್ ಇಂಡಿಯಾ ಯೋಜನೆ ತನ್ನಿ: ದೇವೇಗೌಡ]

ಪ್ರಾದೇಶಿಕ ಪಕ್ಷ ಉಳಿಯಬೇಕೆಂಬ ಮಹದಾಸೆ
ಕುಟುಂಬದಲ್ಲೂ ಈ ವಿಚಾರ ಚರ್ಚೆಗೆ ಬಂದಾಗ ಸ್ವತಃ ರೇವಣ್ಣ, ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಲಿ. ನಾನು ಪಕ್ಷ ಕಟ್ಟುತ್ತೇನೆ ಎಂದಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ. ಹಿಂದಿನ ಬಿಜೆಪಿ ಸರ್ಕಾರ ಹಾಗೂ ಇಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ಎಡವಟ್ಟುಗಳಿಂದ ಜನತೆ ರೋಸಿ ಹೋಗಿದ್ದು, ಕುಮಾರಸ್ವಾಮಿಗೆ ಒಂದು ಅವಕಾಶ ಕೊಟ್ಟು ನೋಡೋಣ ಅಂತಿದ್ದಾರೆ. ಪ್ರಾದೇಶಿಕ ಪಕ್ಷ ಉಳಿಯಬೇಕೆಂಬ ಮಹಾದಾಸೆ ರಾಜ್ಯದ ಜನತೆಯದ್ದಾಗಿದೆ ಎಂದರು.

ಇಬ್ಬರೇ ಸ್ಪರ್ಧೆ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬದಿಂದ ಎಚ್.ಡಿ ಕುಮಾರಸ್ವಾಮಿ ಮತ್ತು ಎಸ್.ಡಿ ರೇವಣ್ಣ ಇಬ್ಬರೇ ಸ್ಪರ್ಧೆ ಮಾಡಲಿದ್ದಾರೆ. ಹೆಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು. ದೇವೇಗೌಡರ ಹೇಳಿಕೆ ಪ್ರಕಾರ ಅನಿತಾ ಕುಮಾರಸ್ವಾಮಿಯೂ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.[ಸಿದ್ದು ಮನೆ ಮುಂದೆ ದೇವೇಗೌಡ ಆಮರಣಾಂತ ಉಪವಾಸ]

ಎಲ್ಲ ಶಾಸಕರಿಗೂ ಟಿಕೆಟ್
ಮುಂದಿನ ವಿಧಾನಸಭಾ ಚುನಾವಣೆಗೆ ಎಲ್ಲ ಶಾಸಕರಿಗೂ ಟಿಕೆಟ್ ನೀಡಲಾಗುವುದು ಎಂದು ದೇವೇಗೌಡರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಪಕ್ಷದ ಹಾಲಿ 33 ಶಾಸಕರಿಗೂ ಟಿಕೆಟ್ ಕೊಡ್ತೇವೆ. ವೈ.ಎಸ್.ವಿ.ದತ್ತಾರಿಗೂ ಟಿಕೆಟ್ ನೀಡ್ತೇವೆ. ಆದರೆ ಅಮಾನತು ಮಾಡಿದ ಶಾಸಕರಿಗೆ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ. ಈ ಬಾರಿ ಕೊನೆಯ ಕ್ಷಣದಲ್ಲಿ ಟಿಕೆಟ್ ಹಂಚಿಕೆ ಮಾಡುವುದಿಲ್ಲ. ತುಂಬಾ ಬೇಗ ಟಿಕೆಟ್ ಹಂಚಬೇಕು ಎಂಬುದು ಕುಮಾರಸ್ವಾಮಿಯವರ ಒತ್ತಾಸೆಯೂ ಆಗಿದೆ. ಪಕ್ಷದ ಮುಖಂಡರೆಲ್ಲ ಕುಳಿತು ತೀರ್ಮಾನ ಮಾಡಿ, ಎಲ್ಲ ಸಮಾಜವನ್ನೂ ಪರಿಗಣಿಸಿ ಟಿಕೆಟ್ ಹಂಚಿಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.[ಬಿಜೆಪಿ, ಕಾಂಗ್ರೆಸ್ ನಿಂದ ರಾಜ್ಯ ಹಾಳಾಗಿದೆ ಎಂದ ದೇವೇಗೌಡರು]

ಹೆಬ್ಬಾಗಿಲು ತೆಗೆಯುವುದು ಬಿಜೆಪಿಗೆ ಸುಲಭವಲ್ಲ
ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಬಿಜೆಪಿಯವರು ಏನೇನೋ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮತ್ತೆ ಬಿಜೆಪಿಯ ಹೆಬ್ಬಾಗಿಲು ತೆರೆಯುವುದು ಅಷ್ಟು ಸುಲಭವಲ್ಲ ಎಂದು ದೇವೇಗೌಡರು ಹೇಳಿದರು.[ಸಭ್ಯತೆಯ ಎಲ್ಲೆ ಮೀರಲಾರೆ: ಹೆಚ್.ಡಿ.ದೇವೇಗೌಡ ಸ್ಪಷ್ಟನೆ]

ಪ್ರಾದೇಶೀಕ ಪಕ್ಷ ಬೇಕು
ಕಾವೇರಿ ವಿಚಾರವೇ ಇರಬಹುದು, ಮಹದಾಯಿ ವಿವಾದವೇ ಇರಬಹುದು, ಕನಿಷ್ಟ ರೈಲ್ವೇ ಲೈನ್ ವಿದ್ಯುದೀಕರಣ ಮಾಡುವುದರಲ್ಲೇ ಇರಬಹುದು ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಹುತ್ತಿದೆ. ಆದ್ದರಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಅನ್ನುವುದು ರಾಜ್ಯದ ಜನತೆಯ ಆಶಯವಾಗಿದೆ ಎಂದು ಅವರು ಹೇಳಿದರು.

ಎಸ್ಎಂ ಕೃಷ್ಣ ಬಗ್ಗೆ ಕಮೆಂಟ್ ಮಾಡಲ್ಲ
ಎಸ್ಎಂ ಕೃಷ್ಣ ಬಿಜೆಪಿ ಸೇರುವ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಯಾಕೆ ಈ ನಿರ್ಣಯ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಅವರು ಹಿರಿಯರು, ಅವರ ರಾಜಕೀಯ ನಡೆಯ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ.
ಇನ್ನು ಜಾತಿ ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಜಾತಿ ರಾಜಕಾರಣ ಆಗಿದ್ದಿದ್ದರೆ ನಾನು 150 ಸ್ಥಾನ ಗೆಲ್ಲುತ್ತಿರಲಿಲ್ಲ. ನನ್ನನ್ನು ರಾಮಕೃಷ್ಣ ಹೆಗಡೆ ಅವರೆಲ್ಲಾ ಸೇರಿಕೊಂಡು ಪಕ್ಷದಿಂದ ಹೊರಗೆ ಹಾಕಿದರು. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.












Click it and Unblock the Notifications