ಅನರ್ಹ ಶಾಸಕರ ಕುರಿತು ತೀರ್ಪು ಎದುರಿಸು ಸಿದ್ಧ: ಅಶ್ವತ್ಥ ನಾರಾಯಣ
ಬೆಂಗಳೂರು, ನವೆಂಬರ್ 12: ಅನರ್ಹ ಶಾಸಕರ ಕುರಿತು ಹೇಗೆಯೇ ತೀರ್ಪು ಬಂದರೂ ಎದುರಿಸಲು ಸಿದ್ಧರಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನ್ಯಾಯಾಧೀಶರು ಹೇಗೆ ತೀರ್ಪು ನೀಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾವ ನಿರ್ಣಯ ಬರುತ್ತದೆ ಎಂಬುದನ್ನು ನೋಡೋಣ. ನಾವು ಎಲ್ಲವನ್ನೂ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದರು.
ನಮ್ಮ ಜೊತೆಯಲ್ಲಾದರೂ ಬರಬಹುದು, ನಮ್ಮ ಎದುರಾಗಿ ಆದರೂ ಬರಬಹುದು ಎದುರಿಸಲು ನಾವು ಸಿದ್ಧರಾಗಿದ್ದೇವೆ. ನಾವು ತೀರ್ಪಿಗಾಗಿ ಕಾಯುತ್ತಿದ್ದೇವೆ. ತೀರ್ಪು ಬಂದ ಬಳಿಕ ಸರ್ಕಾರ ಮತ್ತು ಪಕ್ಷದಲ್ಲಿ ನಿಲುವು ಸ್ಪಷ್ಟವಾಗಿರುತ್ತದೆ.

ನಿಲುವಿನಲ್ಲಿ ಯಾವುದೇ ಗೊಂದಲವಿಲ್ಲ. ಇದರ ಬಗ್ಗೆ ಸಾಕಷ್ಟು ಮಾರ್ಗಗಳಲ್ಲಿ ಯೋಚನೆ ಮಾಡಲಾಗಿದೆ. ತೀರ್ಪು ಬಂದ ತಕ್ಷಣವೇ ಪಕ್ಷದ ನಿಲುವನ್ನು ತಿಳಿಸಲಾಗಿದೆ.












Click it and Unblock the Notifications