ಆಸ್ತಿ ಕೊಳ್ಳುವುದಿಲ್ಲ ಅಂತ ಶಪಥ ಮಾಡಿದ ರವಿರೆಡ್ಡಿ
ರಾಮನಗರ,
ಮಾ. 22 : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಶನಿವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ರಾಮನಗರದಲ್ಲಿ ಚುನಾವಣಾ ಪ್ರಚಾರ ನಡೆಸಿ ಚುನಾವಣೆಯಲ್ಲಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ. id="toptextpromo"> id='are-slot-1' class='oiad oi-axt oiadv'>ಶನಿವಾರ
ನೂರಾರು ಬೆಂಬಲಿಗರ ಜೊತೆ ರಾಮನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ನಾಮಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿಭಿನ್ನವಾಗಿ ಸಾರ್ವಜನಿಕವಾಗಿ ವಚನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. [ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು] id='are-slot-2' class='oiad oi-axt oiadv'>
ರವಿಕೃಷ್ಣಾ ರೆಡ್ಡಿ ವಚನ
ನಾಮಪತ್ರ ಸಲ್ಲಿಸುವ ವೇಳೆ ಕ್ಷೇತ್ರದ ಜನರಿಗೆ ರವಿಕೃಷ್ಣಾ ರೆಡ್ಡಿ ವಚನ ನೀಡಿದ್ದಾರೆ. ಅದರಲ್ಲಿ ನಾನು ಸಂಸದನಾಗಿ ಆಯ್ಕೆ ಯಾದಲ್ಲಿ
* ನನ್ನ ಅವಧಿಯಲ್ಲಿ ಯಾವುದೇ ಆಸ್ತಿಯನ್ನು ಕೊಳ್ಳುವುದಿಲ್ಲ.
* ಯಾವುದೇ ಲಾಭ ತರುವ ವ್ಯವಹಾರವನ್ನಾಗಲಿ, ಉದ್ದಿಮೆಯನ್ನಾಗಲಿ ನಡೆಸುವುದಿಲ್ಲ.
* ನನ್ನ ಮತ್ತು ನನ್ನ ಕುಟುಂಬದ ಖರ್ಚುವೆಚ್ಚಗಳನ್ನೆಲ್ಲ ಸಂಸದನಾಗಿ ನನಗೆ ಬರುವ ಸಂಬಳ ಮತ್ತು ನನ್ನ ಪತ್ನಿಯ ಸಂಬಳ/ಆದಾಯದಲ್ಲಷ್ಟೆ ನಿಭಾಯಿಸುತ್ತೇನೆ ಎಂದು ವಚನ ನೀಡಿದ್ದಾರೆ.

ಶನಿವಾರ ನಾಮಪತ್ರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ರಾಮನಗರದಲ್ಲಿ ರವಿಕೃಷ್ಣಾ ರೆಡ್ಡಿ ಚುನಾವಣಾ ಪ್ರಚಾರ ನಡೆಸಿದರು.

ಎದುರಾಳಿಗಳು
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ, ಬಿಜೆಪಿಯ ಮುನಿರಾಜು ಗೌಡ, ಕಾಂಗ್ರೆಸ್ ಪಕ್ಷದ ಡಿಕೆ ಸುರೇಶ್, ಜೆಡಿಎಸ್ ಪಕ್ಷದ ಪ್ರಭಾಕರ್ ರೆಡ್ಡಿ ಅವರನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ.

ಬಿರುಸಿನ ಪ್ರಚಾರ
ರವಿಕೃಷ್ಣಾ ರೆಡ್ಡಿ ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಮೂಲಕವೂ ಪ್ರಚಾರ ನಡೆಸುತ್ತಿದ್ದಾರೆ. [ಚಿತ್ರಕೃಪೆ : Ravi4MP - Bangalore Rural, Aam Aadmi Party]












Click it and Unblock the Notifications