Get Updates
Get notified of breaking news, exclusive insights, and must-see stories!

ರಂಗಶಂಕರಕ್ಕೆ ಹತ್ತು, ವಿವಿಧ ನಾಟಕಗಳ ಗಮ್ಮತ್ತು

ಬೆಂಗಳೂರು, ಅ. 27: ರಂಗಭೂಮಿಗೆ ವಿಶೇಷ ಕೊಡುಗೆ ನೀಡುತ್ತಿರುವ 'ರಂಗಶಂಕರ' ದಶಮಾನೋತ್ಸವ ಹಿನ್ನೆಲೆಯಲ್ಲಿ ವಿವಿಧ ನಾಟಕ ಪ್ರದರ್ಶನಗಳು ಅಕ್ಟೋಬರ್ 28 ರಿಂದ ಆರಂಭವಾಗಲಿದ್ದು ದಿವಂಗತ ಶಂಕರ್ ನಾಗ್ ಜನ್ಮದಿನ ನವೆಂಬರ್ 9ರ ತನಕ ನಡೆಯಲಿವೆ.

ದಶಮಾನೋತ್ಸವ ಆಚರಣೆಗಳ ಮಾಹಿತಿಯನ್ನು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ನೀಡಿದ್ದಾರೆ. ರಂಗಶಂಕರ ಆರಂಭದ ವೇಳೆ ದೇಣಿಗೆ ನೀಡಿದ್ದ ದಾನಿಗಳ ಹೆಸರನ್ನು ತಾಮ್ರದ ಹಾಳೆಯ ಕಲಾಕೃತಿಯ ಮೇಲೆ ಛಾಪಿಸಿ ಗೌರವ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.[ಭಾನುವಾರ ರಂಗಶಂಕರದಲ್ಲಿ 'ತುಘಲಕ್' ಪ್ರದರ್ಶನ]

rangashankara

ಯಾವ ಯಾವ ನಾಟಕಗಳು ಪ್ರದರ್ಶನವಾಗಲಿವೆ?
ಶೇಕ್ಸ್ ಪಿಯರ್, ಗಿರೀಶ್ ಕಾರ್ನಾಡ್ ನಾಟಕಗಳು ಸೇರಿ ಒಟ್ಟು 9 ಭಾಷೆಯ 13 ನಾಟಕಗಳ 20 ಪ್ರದರ್ಶನ ನಡೆಯಲಿದೆ. 28 ರಂದು ಸಂಜೆ 'ಪಿಯಾ ಬೆಹರೂಪಿಯ' (ಶೇಕ್ಸ್ ಪಿಯರ್, ಹಿಂದಿ) ನಾಟಕ ಪ್ರದರ್ಶನವಾಗಲಿದೆ.

ಉಳಿದಂತೆ ಮಾಯಾಬಜಾರ್(ಆರ್, ನಾಗೇಶ್ವರರಾವ್, ತೆಲಗು), ನೀನಾನಾದ್ರೆ ನಾನೀನೇನಾ(ಎಸ್, ಸುರೇಂದ್ರನಾಥ್, ಕನ್ನಡ), ಬಾಯ್ ವಿತ್ ಅ ಸೂಟ್ ಕೇಸ್ (ಆಂದ್ರಿಯಾ ಗ್ರೋನೆಮೇಯರ್, ಇಂಗ್ಲಿಷ್), ನಾಗಮಂಡಲ(ನಿಲಂ ಮಾನ್ ಸಿಂಗ್, ಪಂಜಾಬಿ) ನಾಟಕಗಳು ಪ್ರದರ್ಶನವಾಲಿವೆ. ಇದಲ್ಲದೇ ಇನ್ನು 13 ನಾಟಕಗಳು ರಂಗದ ಮೇಲೆ ಮೂಡಿ ಬರಲಿವೆ.

ಪ್ರಸಿದ್ಧ ನಾಟಕಕಾರರಾದ ನಾಸೀರುದ್ದೀನ್ ಶಾ, ನೀಲಂ ಮಾನ್ ಸಿಂಗ್, ವೀರಪಾಣಿ ಚಾವ್ಲಾ, ಸದಾಬಂದ ಮೆನನ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+