Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೋಮವಾರ, ಮಂಗಳವಾರ ಕರೆಂಟ್‌ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಡಿಸೆಂಬರ್ 23 ಮತ್ತು 24ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಎಲ್ಲಲ್ಲಿ ಕರೆಂಟ್‌ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವ ಹಿನ್ನೆಲೆ 66/11ಕೆವಿ ಇಸ್ರೊ ಉಪಕೇಂದ್ರದಲ್ಲಿನ ನಗರದ ಹಲವು ಭಾಗಗಳಲ್ಲಿ ಡಿಸೆಂಬರ್ 23ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

Power Cut in Bengaluru s These Areas on December 23 and 24 Know details

ಡಿಸೆಂಬರ್ 23ರಂದು ಎಲ್ಲೆಲ್ಲಿ ಕರೆಂಟ್ ಕಟ್‌?: ಇಸ್ರೊ ಲೇಔಟ್ ಇಂಡಸ್ಟ್ರಿಯಲ್ ಏರಿಯಾ, ಕುಮಾರಸ್ವಾಮಿ ಲೇಔಟ್, ಯಲಚೇನಹಳ್ಳಿ ಇಲಿಯಾಸ್ ನಗರ, ಗಂಗಾಧರನಗರ, ವಿವೇಕಾನಂದ ಕಾಲೋನಿ, ಪ್ರಗತಿಪುರ, ಸರಬಂಡೆಪಾಳ್ಯ, ಪ್ರತಿಭಾ ಇಂಡಸ್ಟ್ರಿಯಲ್ ಏರಿಯಾ, ಸುಪ್ರಿಮ್ ಲೇದರ್ ಗಾರ್ಮೆಂಟ್ಸ್, ಚಂದ್ರ ನಗರ, ಕಾಶಿ ನಗರ, ವಿಕ್ರಮ್ ನಗರ, ನಂಜಪ್ಪ ಲೇಔಟ್, ಬಿಕಾಸಿಪುರ, ಟೀಚರ್ಸ್ ಕಾಲೋನಿ, ಜೆ.ಹೆಚ್.ಬಿ.ಸಿ.ಎಸ್. ಲೇಔಟ್, ಬೇಂದ್ರೇನಗರ, ಈಶ್ವರನಗರ, ಮಿನಾಜ್ ನಗರ, ಕನಕ ಲೇಔಟ್, ಕನಕನಗರ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಡಿಸೆಂಬರ್ 24ರಂದು ಎಲ್ಲೆಲ್ಲಿ ಕರೆಂಟ್‌ ಕಟ್‌?: 66/11 ಕೆವಿ ಬ್ಯಾಟರಾಯನಪುರ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಹೆಬ್ಬಾಳ ವಿಭಾಗದ ಸಿ-8 ಉಪ ವಿಭಾಗದಲ್ಲಿ ಡಿಸೆಂಬರ್ 24ರ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

L&T ಅಪಾರ್ಟ್‌ಮೆಂಟ್, ಯಶೋಧನಗರ, ಜಕ್ಕೂರು ಪ್ಲಾಂಟೇಶನ್, L&T ಅಪಾರ್ಟ್‌ಮೆಂಟ್, ಸೆಂಚುರಿ ಅಪಾರ್ಟ್‌ಮೆಂಟ್ ಬ್ಯಾಟರಾಯನಪುರ, ಸ್ಪಾರ್ಕಲ್ ಒನ್ ಮಾಲ್, ಅಮೃತಹಳ್ಳಿ, ಸಹಕಾರನಗರ ಜಿ ಬ್ಲಾಕ್, ಶಬರಿನಗರ, ಕೆನರಾ ಬ್ಯಾಂಕ್ ಲೇಔಟ್, ಧನಲಕ್ಷ್ಮಿ ಲೇಔಟ್, ತಿಂಡ್ಲು ಮುಖ್ಯರಸ್ತೆ, ಸರ್ ಎಂವಿ ಲೇಔಟ್, ಪಾರ್ಕ್, ತೀಂಡ್ಲು ಗ್ರಾಮ ಬಡಾವಣೆ ಸಪ್ತಗಿರಿ ಲೇಔಟ್, ಜ್ಞಾನೇಶ್ವರಿ ಲೇಔಟ್, ಗುರುದರ್ಶನ ಲೇಔಟ್, ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ವೃತ್ತ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಇರುವುದಿಲ್ಲ.

ಇಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಕುದೂರು ಬೆಸ್ಕಾಂ ಶಾಖಾ ವ್ಯಾಪ್ತಿಯ ಗುಡೇಮಾರ ನಹಳ್ಳಿ ವ್ಯಾಪ್ತಿಯ 66/11ಕೆ.ವಿ, ಟಿ.ಜಿ ಹಳ್ಳಿ 66/11ಕೆ.ವಿ ಹೊಸಪಾಳ್ಯ ಸರ್ಕಲ್‌ 66/11ಕೆ.ವಿ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆ ಸೋಲೂರು ತಿಪ್ಪಸಂದ್ರ ಹೋಬಳಿಯ ಗ್ರಾಮಗಳಿಗಲ್ಲಿ ಇಂದು ಭಾನುವಾರ ಸಂಜೆ 6 ಗಂಟೆವರೆಗೂ ಭಾಗಶಃ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿತಿ ಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+