Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಭಾನುವಾರ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಆಗಸ್ಟ್ 3ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಆಗಸ್ಟ್ 3ರಂದು ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ.

ಸರ್ಜಾಪುರ ಮತ್ತು ಅತ್ತಿಬೆಲೆ 66 ಕೆವಿ ವ್ಯಾಪ್ತಿಯಲ್ಲಿ ಹೆಚ್‌ಟಿಎಲ್‌ಎಸ್ ಕಂಡಕ್ಟರ್‌ಗಳ ತಂತಿ ಜೋಡಣೆ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಆಗಸ್ಟ್ 3ರ ಬೆಳಗ್ಗೆ 6ರಿಂದ ರಾತ್ರಿ 8ರ ವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಿ ಕರೆಂಟ್ ಕಟ್?: ಯಡವನಹಳ್ಳಿ, ಇಚ್ಚಂಗೂರು, ವಡ್ಡರಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಟೌನ್, ಮಾಯಸಂದ್ರ, ದಾಸನಾಪುರ, ಬಲ್ಲೂರು, ಕಂಬಳಿಪುರ, ಚಿಕ್ಕ ಕಾನಹಳ್ಳಿ, ಇಂಡ್ಲಬೆಲೆ, ಹಾರೋಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
66/11 ಕೆವಿ ಆನೇಕಲ್ ವ್ಯಾಪ್ತಿಯಲ್ಲಿನ ಆನೇಕಲ್ ಟೌನ್, ಕಾವಲಹೊಸಹಳ್ಳಿ, ಗೌರೇನಹಳ್ಳಿ, ಹಾಲ್ದೇನಹಳ್ಳಿ, ಹೊಂಪಲಘಟ್ಟ, ಚೂಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾದ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿದೆ.
66/11 ಕೆವಿ ಸಮಂದೂರು ವ್ಯಾಪ್ತಿಯಲ್ಲಿನ ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗಾರ ಹಳ್ಳಿ, ವನಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂತಿ ಮನವಿ ಮಾಡಿದೆ.
ಗ್ರಾಹಕರಿಗೆ ಪ್ರಮುಖ ಸಲಹೆಗಳು
* ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆ ಇರುವುದರಿಂದ, ನಿವಾಸಿಗಳು ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ತುರ್ತು ದೀಪಗಳನ್ನು ಮುಂಚಿತವಾಗಿ ಸಂಪೂರ್ಣವಾಗಿ ಚಾರ್ಜ್ ಮಾಡಿ.
* ಕುಡಿಯಲು, ಅಡುಗೆ ಮಾಡಲು ಮತ್ತು ಇತರ ಮನೆಯ ಅಗತ್ಯಗಳಿಗಾಗಿ ಸಾಕಷ್ಟು ನೀರನ್ನು ಸಂಗ್ರಹಿಸಿ.
* ಸುರಕ್ಷತಾ ಕಾರಣಗಳಿಂದಾಗಿ ವಿದ್ಯುತ್ ಕಡಿತದ ಸಮಯದಲ್ಲಿ ಲಿಫ್ಟ್‌ಗಳನ್ನು ಬಳಸಬೇಡಿ ಎಂದು ಸೂಚನೆ ನಿಡಿದೆ.
ಇನ್ನು ಬೆಸ್ಕಾಂ ವಿದ್ಯುತ್ ಬಿಲ್ ಪಾವತಿಯ ಎಟಿಸಿ ಸೇವೆಯನ್ನು ಆಗಸ್ಟ್ 1 ರಿಂದಲೇ ಸ್ಥಗಿತಗೊಳಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಎಟಿಪಿ ಪಾವತಿ ಯಂತ್ರ ಸೇವಾ ಪೂರೈಕೆದಾರರ ಗುತ್ತಿಗೆ ಅವಧಿ ಮುಕ್ತಾ ಆಗಿದ್ದು, ಜೊತೆಗೆ ವಿದ್ಯುತ್ ಬಿಲ್ ಪಾವತಿಗೆ ತುಂಬಾ ಆಯ್ಕೆಗಳು ಇವೆ. ಈ ಹಿನ್ನೆಲೆ ಎಟಿಪಿ ಸೇವೆ ಸ್ಥಗಿತ ಮಾಡಿದೆ.
ಗ್ರಾಹಕರು ಇದರ ಬದಲಾಗಿ ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿ ಇರುವ ನಗದು ಪಾವತಿ ಕೇಂದ್ರಗಳಾದ ಬೆಂಗಳೂರು ಒನ್, ಬೆಸ್ಕಾಂ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಪಾವತಿ ಮಾಡಬಹುದಾಗಿದೆ. ಅಷ್ಟೆ ಅಲ್ಲದೇ ಯುಪಿಐ ಮೂಲಕವೂ ವಿದ್ಯುತ್ ಬಿಲ್ಗಳನ್ನು ಪಾವತಿ ಮಾಡಬಹುದು ಎಂದು ತಿಳಿಸಿದೆ.
ಎಲ್ಲೆಲ್ಲಿ ವಿದ್ಯುತ್ ಪಾವತಿ ಮಾಡಬಹುದು?
* ಬೆಂಗಳೂರು ಒನ್ ಕೇಂದ್ರ
* ಕರ್ನಾಟಕ ಒನ್ ಕೇಂದ್ರ
* ಯುಪಿಐನಲ್ಲಿ ಪಾವತಿ ಮಾಡಬಹುದು












Click it and Unblock the Notifications