ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ ಪ್ರತಿಮೆಗೆ ಸಲ್ಲುವ ಗೌರವ ತೀನಂಶ್ರೀ ಪ್ರತಿಮೆಗೇಕಿಲ್ಲ?

By ಬಾಲರಾಜ್ ತಂತ್ರಿ
|
Google Oneindia Kannada News

ನಗರದ ಹೃದಯ ಭಾಗದಲ್ಲಿರುವ ಸೌತ್ ಎಂಡ್ ಸರ್ಕಲಿಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕೃತವಾಗಿ ನಾಮಕರಣ ಮಾಡಿರುವ ಹೆಸರು ಪ್ರೊಫೆಸರ್ ತೀ.ನಂ.ಶ್ರೀ ವೃತ್ತ.

ಈ ವೃತ್ತದ ಆಸುಪಾಸಿನಲ್ಲಿ ನಾಡಿನ ಎರಡು ಕಣ್ಮಣಿಗಳ ಪ್ರತಿಮೆಗಳು. ಸರ್ಕಲಿನ ಒಂದು ಭಾಗದಲ್ಲಿ ಸಾಹಿತ್ಯ ಲೋಕದ ದಿಗ್ಗಜ ಪ್ರೊ. ತೀ.ನಂ. ಶ್ರೀಕಂಠಯ್ಯ ಅವರದ್ದು ಇನ್ನೊಂದು ಕಲಾಜಗತ್ತಿನ ಮೇರು ಪುರುಷ ಡಾ. ರಾಜಕುಮಾರ್ ಅವರದ್ದು.

ತೀನಂಶ್ರೀ ಅವರ ಪ್ರತಿಮೆಯನ್ನು ದಶಕಗಳ ಕೆಳಗೆ ಸ್ಥಾಪಿಸಲಾಗಿದ್ದರೆ, ರಾಜ್ ಅವರ ಪ್ರತಿಮೆಯನ್ನು ವರ್ಷದ ಕೆಳಗೆ ಅದ್ದೂರಿಯಾಗಿ ಸ್ಥಾಪಿಸಲಾಗಿತ್ತು. (ರಾಜ್ ಪ್ರತಿಮೆಗೆ ಬೆಂಕಿ: ಸ್ಥಳೀಯರು ಹೇಳುವುದೇನು)

ಆದರೆ ಈ ಎರಡು ಪ್ರತಿಮೆಗಳ ನಿರ್ವಹಣೆ ವಿಚಾರದಲ್ಲಿ ಮಾತ್ರ ಬಿಬಿಎಂಪಿ ಅಜಗಜಾಂತರ ತಾರತಮ್ಯ ಮಾಡುತ್ತಿದೆ ಅನ್ನುವುದು ಮಾತ್ರ ಯಾವುದೇ ಗೊಂದಲವಿಲ್ಲದ ವಸ್ತುನಿಷ್ಟ ಅಭಿಪ್ರಾಯ.

ಕರುನಾಡು ಕಂಡ ಹೆಮ್ಮೆಯ ಕಲಾರತ್ನ, ವರನಟ ಡಾ. ರಾಜಕುಮಾರ್ ಅವರ ಬೃಹತ್ 15 ಅಡಿ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಬಿಬಿಎಂಪಿ ವರ್ಷಗಳ ಕೆಳಗೆ ಅದ್ದೂರಿಯಾಗಿ ಆಯೋಜಿಸಿತ್ತು.

ಪ್ರತಿಮೆ ಇರುವ ಆವರಣದಲ್ಲೇ 'ಅಂಬರ ಚುಂಬನ' ಎನ್ನುವ ಹೆಸರಿನ ಕ್ಲಾಕ್ ಟವರ್ ಜೊತೆಗೆ ಸಣ್ಣ ಉದ್ಯಾನವನ್ನೂ ನಿರ್ಮಿಸಿತ್ತು. ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಎನ್ ಆರ್ ರಮೇಶ್ ಅವರ ವಿಶೇಷ ಒತ್ತಾಸೆಯ ಮೇರೆಗೆ ರಾಜ್ ಪ್ರತಿಮೆ ಸ್ಥಾಪಿಸುವ ಯೋಗ ಇವರ ವಾರ್ಡಿಗೆ ಕೂಡಿ ಬಂದಿತ್ತು.

ಖುದ್ದು ರಾಜ್ ಅಭಿಮಾನಿಯೂ ಆಗಿರುವ ರಮೇಶ್, ಪ್ರತಿಮೆಯನ್ನು ಮತ್ತು ಇಲ್ಲಿರುವ ಉದ್ಯಾನವನ ಮತ್ತದರ ಲೈಟಿಂಗ್ ವ್ಯವಸ್ಥೆ ಮತ್ತು ಕ್ಲಾಕ್ ಟವರಿನ ಗಡಿಯಾರ ಸರಿಯಾಗಿ ಗಂಟೆ ಹೊಡೆಯುವುದನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎನ್ನುವುದು ಮೆಚ್ಚಬೇಕಾದ ಅಂಶ.

ರಾಜ್ ಪ್ರತಿಮೆಯಿಂದ ಅಲ್ಲೇ ಸುಮಾರು ಇಪ್ಪತ್ತು ಮೀಟರ್ ದೂರದಲ್ಲಿರುವ ತೀನಂಶ್ರೀ ಅವರ ಕಪ್ಪುಶಿಲೆಯ ಪ್ರತಿಮೆ ಮಾತ್ರ ನಿರ್ಗತಿಕ ಸ್ಥಿತಿಯಲ್ಲಿರುವುದು ಮಾತ್ರ ಅತ್ಯಂತ ನೋವಿನ ವಿಚಾರ, ಖಂಡನೀಯ, ಸಾರಸ್ವತ ಲೋಕಕ್ಕೆ ಅವಮಾನ.

ಲಕ್ಷಣ ರಾವ್ ಪಾರ್ಕಿಗೆ ಹೊಂದಿಕೊಂಡಂತಿರುವ ತೀನಂಶ್ರೀ ಪ್ರತಿಮೆಯ ನಿರ್ವಹಣೆಯ ಬಗ್ಗೆ ಬಿಬಿಎಂಪಿ ಮನಸ್ಸು ಮಾಡದೇ ಇರುವುದು ಉದಾಸೀನತೆಯ ಪರಮಾವಧಿ. ಧೂಳು, ಹಕ್ಕಪಿಕ್ಕಿ ತುಂಬಿಕೊಂಡಿರುವ ಈ ಪ್ರತಿಮೆ ಸ್ವಚ್ಚವಾಗ ಬೇಕಾದರೆ ವರುಣನನ್ನೇ ನಂಬಿಕೊಂಡಿರುವ ದುರ್ಗತಿ ಬಂದಿರುವುದಂತೂ ನಿಜ.

ಪ್ರೊ. ತೀನಂಶ್ರೀ ಬಗ್ಗೆ (ಮಾಹಿತಿ ವಿಕಿಪೀಡಿಯಾ ಕನ್ನಡ)
ಪ್ರೊಫೆಸರ್ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ನಾವು ಕಾಣಬಹುದಾಗಿತ್ತು.

Poor maintenance of Thi Nam Srikantaiah statue in South End circle, Begnaluru

ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಕೂಡಾ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು.

ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ, ಒಲುಮೆ (ಕವನ ಸಂಕಲನ), ನಂಟರು (ಪ್ರಬಂಧ ಸಂಕಲನ), ಭಾರತೀಯ ಕಾವ್ಯಮೀಮಾಂಸೆ, ಕನ್ನಡ ಮಧ್ಯಮ ವ್ಯಾಕರಣ, ರಾಕ್ಷಸನ ಮುದ್ರಿಕೆ ಇತ್ಯಾದಿ.

ಸ್ಥಳೀಯ ಕಾರ್ಪೋರೇಟರ್ ಎನ್ ಆರ್ ರಮೇಶ್ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ, ಪ್ರತಿಮೆಯನ್ನು ಸೂಕ್ತ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನಿರ್ವಹಣೆ ಮಾಡಲಾಗುಗುವುದು ಎನ್ನುವ ಭರವಸೆ ನೀಡಿದ್ದಾರೆ.

ಪ್ರಚಾರಕ್ಕಾಗಿ ಸ್ಥಾಪನೆ ಪ್ರತಿಷ್ಟಾಪಿಸಿ, ನಂತರ ಅದರ ನಿರ್ವಹಣೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅಗೌರವ ತೋರುವುದಕ್ಕಿಂದ ಪ್ರತಿಮೆ ಅನಾವರಣ ಮಾಡದೇ ಇರುವುದೇ ಲೇಸು. ಅಲ್ವೇ?

English summary
Poor maintenance of Thi Nam Srikantaiah statue in South End circle, Begnaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X