ಗುಂಡು ಹಾರಿಸಿ ಗೌತಮಿ ಕೊಂದ ಮಹೇಶ್ ಪೊಲೀಸರ ವಶಕ್ಕೆ
ಬೆಂಗಳೂರು, ಏ.3 : ಕಾಡುಗೋಡಿಯ ಪ್ರಗತಿ ಕಾಲೇಜಿನ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಮೇಲೆ ಗುಂಡು ಹಾರಿಸಿ ಆಕೆಯನ್ನು ಹತ್ಯೆ ಮಾಡಿದ್ದ ಆರೋಪಿ ಮಹೇಶ್‌ನನ್ನು ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಗುರುವಾರ ರಾತ್ರಿ ಹತ್ಯೆ ಪ್ರಕರಣದ ಆರೋಪಿ ಕೆ.ಮಹೇಶ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸೋಮ ಸಿಂಗ್ ಮತ್ತು ಪ್ರಾಂಶುಪಾಲ ಎಸ್.ಪ್ರಶಾಂತ್ ಅವರನ್ನು ಕಾಡುಗೋಡಿ ಪೊಲೀಸರು ಕೋರಮಂಗಲದಲ್ಲಿರುವ ನ್ಯಾಯಾಧೀಶ ಸಂತೋಷ್ ಕುಮಾರ್ ಅವರ ಮನೆಗೆ ಹಾಜರುಪಡಿಸಿದ್ದರು. [ಪ್ರಗತಿ ಕಾಲೇಜು ಪ್ರಾಂಶುಪಾಲರ ಬಂಧನ]

ಈ ವೇಳೆ ಪೊಲೀಸರು ಆರೋಪಿ ಮಹೇಶ್‌ಗೆ ರಿವಾಲ್ವರ್ ಖರೀದಿ ಮಾಡಿದ್ದು ಎಲ್ಲಿ? ಸೇರಿದಂತೆ ಹಲವು ವಿಚಾರಗಳ ಕುರಿತು ವಿಚಾರಣೆ ನಡೆಸಬೇಕು. ಆದ್ದರಿಂದ, ಆತನನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ನ್ಯಾಯಾಧೀಶರು ಏ.10ರ ತನಕ ಮಹೇಶ್‌ನನ್ನು ಪೊಲೀಸರ ವಶಕ್ಕೆ ನೀಡಿದರು. [ಗೌತಮಿ ಕೊಲೆ ಮಾಡಿದ್ದ ಮಹೇಶ್ ಬಂಧನ]
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದ್ದ ಪ್ರಗತಿ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಮತ್ತು ಪ್ರಗತಿ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೋಮಸಿಂಗ್ ಅವರಿಗೆ ಜಾಮೀನು ಮಂಜೂರು ಮಾಡಿದರು.[ದ್ವಿತೀಯ ಪಿಯು ವಿದ್ಯಾರ್ಥಿನಿ ಗುಂಡಿಗೆ ಬಲಿ]
ಗೌತಮಿ ಅಂತ್ಯಕ್ರಿಯೆ : ಗುಂಡಿನ ದಾಳಿಯಲ್ಲಿ ಮೃತಪಟ್ಟ ಪಾವಗಡ ಮೂಲದ ಗೌತಮಿಯ ಅಂತ್ಯಕ್ರಿಯೆ ಆರ್ಯವೈಶ್ಯ ಸಮುದಾಯದ ವಿಧಿವಿಧಾನಗಳೊಂದಿಗೆ ಗುರುವಾರ ಮಧ್ಯಾಹ್ನ 1 ಗಂಟೆಗೆ ಪಾವಗಡ ಪಟ್ಟಣದ ಚಿತಾಗಾರದಲ್ಲಿ ನಡೆಯಿತು.
ಗೌತಮಿ ತಂದೆ ರಮೇಶ್, ತಾಯಿ ಲಕ್ಷ್ಮೀ, ಬಂಧು-ಬಳಗ ಸೇರಿದಂತೆ ನೂರಾರು ಜನರು ಗೌತಮಿಯ ಸಾವಿಗೆ ಕಂಬನಿ ಮಿಡಿದರು. ಗೌತಮಿ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿ ಚಿತಾಗಾರವಿದ್ದು ರಸ್ತೆಯ ಎರಡೂ ಬದಿ ನಿಂತಿದ್ದ ಸಾವಿರಾರು ಗೌತಮಿಗೆ ಅಂತಿಮ ನಮನ ಸಲ್ಲಿಸಿದರು.












Click it and Unblock the Notifications