ಇ - ಖಾತಾ ಸೇರಿ ಈ ಸಮಸ್ಯೆಗಳ ಪರಿಹಾರಕ್ಕೆ ಫೋನ್ ಇನ್ ಕಾರ್ಯಕ್ರಮ!
ಬೆಂಗಳೂರಿನಲ್ಲಿ ಆಸ್ತಿದಾರರು ಇ ಖಾತಾ ಪಡೆದುಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಈ ನಡುವೆ ಆಸ್ತಿದಾರರಿಗೆ ಇ ಖಾತಾ ಸಮಸ್ಯೆ ಸೇರಿದಂತೆ ಕೆಲವೊಂದು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಬೆಂಗಳೂರು ಪಾಲಿಕೆಯು ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ - ಉತ್ತರ ನಗರ ಪಾಲಿಕೆ ಆಯುಕ್ತರಿಂದ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಪ್ರತಿ ಶುಕ್ರವಾರ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಈ ವಾರದ ಫೋನ್-ಇನ್ ಕಾರ್ಯಕ್ರಮವು ಅಕ್ಟೋಬರ್ 10 (ಶುಕ್ರವಾರ) ಬೆಳಿಗ್ಗೆ 7.00 ರಿಂದ 9.00 ಗಂಟೆಯವರೆಗೆ ನಡೆಯಲಿದ್ದು, ನಾಗರಿಕರ ಅಹವಾಲುಗಳಿಗೆ ಸಂಪೂರ್ಣವಾಗಿ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ. ಇದರಲ್ಲಿ ಇ - ಖಾತಾ ಸಮಸ್ಯೆಯೂ ಸೇರಿದೆ.
ಸಾರ್ವಜನಿಕರು ಈ ಸಮಯದಲ್ಲಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಹಂಚಿಕೊಳ್ಳಬಹುದು
1. ರಸ್ತೆ ಗುಂಡಿಗಳು ಮತ್ತು ದುರಸ್ತಿ ಕಾರ್ಯಗಳು
2. ಬೀದಿ ದೀಪದ ದೋಷಗಳು
3. ಕಸ ವಿಲೇವಾರಿ ಸಮಸ್ಯೆಗಳು
4. ಅಪಾಯಕರ ಮರ/ಕೊಂಬೆಗಳ ಕತ್ತರಿಸುವಿಕೆ
5. ಸೊಳ್ಳೆ ನಿಯಂತ್ರಣ
6. ಬೀದಿ ನಾಯಿಗಳ ಹಾವಳಿ
7. ಉದ್ಯಾನವನಗಳ ನಿರ್ವಹಣೆ
8. ಅನಧಿಕೃತ ಬ್ಯಾನರ್/ಪೋಸ್ಟರ್‌ಗಳ ತೆರವು
9. ಪಾದಚಾರಿ ಮಾರ್ಗದ ಒತ್ತುವರಿ
10. ಇ-ಖಾತಾ ಸಂಬಂಧಿತ ವಿಷಯಗಳು
11. ಚರಂಡಿ ಶುದ್ಧೀಕರಣ ಸಂಬಂಧಿತ ಅಹವಾಲುಗಳು
ಪ್ರತಿ ಅಹವಾಲು 'ಸಹಾಯ 2.0' ಪೋರ್ಟಲ್‌ನಲ್ಲಿ ದಾಖಲಾಗುವುದು ಹಾಗೂ ಸಂಬಂಧಿಸಿದ ಅಧಿಕಾರಿಗೆ ತಕ್ಷಣ ನಿಯೋಜಿಸಲಾಗುತ್ತದೆ. ನಾಗರಿಕರಿಗೆ SMS ಮೂಲಕ ದೂರು ಸ್ವೀಕೃತಿಯ ಮಾಹಿತಿ ಮತ್ತು ಅಧಿಕಾರಿಯ ವಿವರಗಳನ್ನು ಕಳುಹಿಸಲಾಗುತ್ತದೆ. ನಿಯಂತ್ರಣ ಕೊಠಡಿ ಸಂಪರ್ಕ: ಮೊಬೈಲ್ & ವಾಟ್ಸಪ್: 9480685705
ಲ್ಯಾಂಡ್‌ಲೈನ್: 080-22975936 / 080-23636671 ಸಂಖ್ಯೆಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು 'ಸಹಾಯ ಆಪ್' ಮುಖಾಂತರವೂ ದಾಖಲಿಸಬಹುದು ಎಂದು ಹೇಳಲಾಗಿದೆ.












Click it and Unblock the Notifications