ಬೆಂಗಳೂರಿನ ಹೀಟ್‌ಗೆ ತತ್ತರಿಸಿ 'ಓಯೋ' ರೂಮ್‌ಗೆ ಮೊರೆ ಹೋದ ಟೆಕ್ಕಿ: ಪೋಸ್ಟ್‌ಗೆ 'ಓಯೋ' ಪ್ರತಿಕ್ರಿಯೆ

ಬೆಂಗಳೂರು, ಏಪ್ರಿಲ್ 03: ಐಟಿ ಕೇಂದ್ರವಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಕಾದ ಹಂಚಿನಂತಾಗಿದೆ. ಇಲ್ಲಿ ದಿನೇ ದಿನೆ ತಾಪಮಾನ ಏರಿಕೆ ಆಗುತ್ತಿದ್ದು, ಪರಿಸ್ಥಿತಿ ಸುಧಾರಿಸುವಂತೆ ಕಾಣುತ್ತಿಲ್ಲ. ಈ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಟೆಕ್ಕಿಯೊಬ್ಬರು ಓಯೋ ರೋಮ್‌ನಿಂದಲೇ ಕೆಲಸ ಮಾಡಿದ್ದಾರೆ. ಈ ಸುದ್ದಿ ಸಖತ್ ಚರ್ಚೆ ಆಗುತ್ತಿದೆ. ಜೊತೆಗೆ ಬೆಂಗಳೂರಿನ ಸದ್ಯದ ಸ್ಥಿತಿಯನ್ನು ಅನಾವರಣಗೊಳಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ ಬಳಕೆದಾರರು ಆಗಿರುವ ಐಟಿ ಉದ್ಯೋಗ ರಿಷಬ್ ಶ್ರೀವಾಸ್ತವ ಎಂಬುವವರು ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ವಾರಗಳಲ್ಲಿ ಭಾರತದ ಸ್ಟಾರ್ಟ್ಅಪ್ ರಾಜಧಾನಿ ಆಗಿರುವ ಬೆಂಗಳೂರು ಸುಡುವ ಶಾಖ ಮತ್ತು ನೀರಿನ ಕೊರತೆ ಎದುರಿಸುತ್ತಿದೆ. ಇದರೊಂದಿಗೆ ಬೆಂಗಳೂರಿಗೆ ಹಲವಾರು ಸವಾಲುಗಳು ಎದುರಾಗಿವೆ.

Oyo s Response to Techie s Unique Work Setup in Oyo Room Amide Bengaluru Heat

ಎಸಿ ಇಲ್ಲದೇ ಇರಲು ಸಾಧ್ಯವಿಲ್ಲ

ಈ ಮಧ್ಯೆ ಅತ್ಯುತ್ತಮ, ತಂಪು ವಾತಾವರಣಕ್ಕೆ ಹೆಸರಾಗಿದ್ದ ಬೆಂಗಳೂರಿನಲ್ಲಿ ತಾಪಮಾನ ತಾಂಡವವಾಡುತ್ತಿದೆ. ಹೀಗಾಗಿ ಇಲ್ಲಿ ಏರ್‌ಕೂಲರ್ (ಎಸಿ) ಇಲ್ಲದೇ ಇರಲು ಸಾಧ್ಯವಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಾನು ನಿರಾಶ್ರಿತರಂತೆ 'ಓಯೋ' ರೂಮ್ ಸೇರಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಕೆಲಸ ಮಾಡಲು 'ಎಸಿ' ವ್ಯವಸ್ಥೆ ಇರುವ ಓಯೋ ಹೊಟೇಲ್‌ಗೆ ಭೇಟಿ ನೀಡಬೇಕಾಗಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದರಿಂದ ಬೆಂಗಳೂರಿನ ಸ್ಥಿತಿಯನ್ನು ಜಗತ್ತಿಗೆ ಹೇಳಿದಂತಾಗಿದೆ. ಜೊತೆಗೆ ಶಾಖದ ಅಲೆಯಿಂದ ತಪ್ಪಿಸಿಕೊಳ್ಳಲು ಉತ್ತಮ ಮಾರ್ಗವನ್ನು ಅವರು ತಿಳಿಸಿದ್ದಾರೆ.

ಟೆಕ್ಕಿ ಪೋಸ್ಟ್‌ ಬೆಂಬಲಿಸಿದ 'ಓಯೋ ರೂಮ್ಸ್'

'ಬೆಂಗಳೂರಿನ ಹವಾಮಾನವು ಚಿಲ್‌ನಿಂದ ಗ್ರಿಲ್‌ಗೆ ಜಿಗಿಯಲು ನಿರ್ಧರಿಸಿದೆ ಎಂಬಂತೆ ಕಾಣುತ್ತಿದೆ' ಎಂದು ರಿಷಬ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ನಗರದಲ್ಲಿ 'ಎಸಿ' ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ ಎಂದು ಹೇಳಿಕೊಂಡಿದ್ದಾರೆ. ಅವರ ಈ ಪೋಸ್ಟ್‌ಗೆ ಭಾರತೀಯ 'ಓಯೋ ರೂಮ್ಸ್' ಪ್ರತಿಕ್ರಿಯಿಸಿದೆ. ಜೊತೆಗೆ ಆ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದೆ.

ಬೆಂಗಳೂರಲ್ಲಿ ನಿಮಗೊಂದು ಕೆಲಸ ಇದೆ, ಆ ಕೆಲಸವನ್ನು 'ಓಯೋ'ಗೆ ಬಂದು ಮಾಡುತ್ತಿದ್ದೀರಿ ಎಂದು ಓಯೋ ರೂಮ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ರಿತೇಶ್ ಅಗರ್ವಾಲ್ ತಿಳಿಸಿದ್ದಾರೆ. ಟೆಕ್ಕಿ ಪೋಸ್ಟ್ ಅನ್ನು ಬೆಂಬಲಿಸಿದ್ದಾರೆ.

ಪೊಲೀಸ್‌ಗೆ ನೀರಿನ ಬಾಟಲಿ ಕೊಟ್ಟ ವಿಡಿಯೋ ವೈರಲ್

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಶಾಖದ ಅಲೇ ವಾತಾವರಣ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ನೀರಿನ ಬಾಟಲಿ ನೀಡಿದ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ವಿಡಿಯೋವನ್ನು ಬೆಂಗಳೂರು ನಗರ ಪೊಲೀಸ್ ಟ್ರಾಫಿಕ್ ವಾರ್ಡನ್ ಶ್ರೀ ರಾಮ್ ಬಿಷ್ಣೋಯ್ ಅವರು ಹಂಚಿಕೊಂಡಿದ್ದರು.

ನಗರದ ಹೆಬ್ಬಾಳದಲ್ಲಿ ಹೆಚ್ಚು ಟ್ರಾಫಿಕ್ ನಿಂದ ಕೂಡಿರುತ್ತದೆ. ಇಲ್ಲಿನ ಟ್ರಾಫಿಕ್ ನಿರ್ವಹಣೆಗೆ ಸತತವಾಗಿ ಪೊಲೀಸರು ಕೆಲಸ ಮಾಡಬೇಕಾಗಿರುತ್ತದೆ. ಹೀಗಾಗಿ ಸಂಚಾರಿ ಪೋಸ್ಟ್ ಪೇದೆಗಳು ಬಿಸಿಲಿನ ನಡುವೆ ಕೆಸಲ ಮಾಡುವಾಗ ನೀರಿನ ಬಾಟಲಿ ನೀಡಲಾಗಿತ್ತು. ಈ ಮೂಲಕ ಬೆಂಗಳೂರಿನ ತಾಪಮಾನದ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ಆಗುತ್ತಿದೆ.

ಹೆಚ್ಚುತ್ತಿರುವ ತಾಪಮಾನ

ರಾಜ್ಯದ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಗೂ ಹೆಚ್ಚು ದಾಖಲಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿ ಉಷ್ಣಾಂಶ ದಾಖಲಾಗಿದೆ. ಶಾಖದ ಅಲೆಯ ವಾತಾವರಣ ಮುಂದುವರಿದಿದೆ. ಎಲ್ಲಡೆ ಒಣಹವೆ ಇದ್ದು, ನೀರಿಗೂ ಹಾಹಾಕಾರ ಶುರುವಾಗಿದೆ. ಜನ ಉರಿಬಿಸಿಲಿಗೆ ತತ್ತರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಅತೀ ಉಷ್ಣಾಂಶದ ಸ್ಥಿತಿ ಸದ್ಯಕ್ಕೆ ಇಳಿಕೆ ಆಗುವ ಲಕ್ಷಣಗಳು ಇಲ್ಲ. ಈ ಮಧ್ಯೆ ಮಳೆ ನಿರೀಕ್ಷೆಯಲ್ಲಿರುವ ಜನರಿಗೆ ನಿರಾಸೆಯಾಗಿದೆ. ಏಕೆಂದರೆ ಬೆಂಗಳೂರಿಗೆ ಸದ್ಯಕ್ಕೆ ತುಂತುರು, ಜೋರು, ಹಗುರ ಮಳೆಯ ಲಕ್ಷಣಗಳು ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+