ಕೆಂಗೇರಿ ಬಳಿ ವೃದ್ಧೆಯ ಕತ್ತು ಸೀಳಿ ಬರ್ಭರವಾಗಿ ಹತ್ಯೆಗೈದ ಪಾಪಿಗಳು
ಬೆಂಗಳೂರು, ಆಗಸ್ಟ್ 11: ವೃದ್ಧೆಯ ಕತ್ತುಸೀಳಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು ನಗರದ ಕೆಂಗೇರಿ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.
ವೃದ್ಧೆ ಗೌರಮ್ಮ(65) ಕೊಲೆಯಾದವರು, ರಾತ್ರೋರಾತ್ರಿ ಬಂದ ದುಷ್ಕರ್ಮಿಗಳು ವೃದ್ಧೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ, ವೃದ್ಧೆಯ ಕತ್ತುಸೀಳಿ ಕೊಲೆ ಮಾಡಿದ್ದು ಹತ್ಯೆ ಬಳಿಕ ಶೆಟ್ಟನಲ್ಲಿ ಮೃತದೇಹವನ್ನು ಇಟ್ಟು ಬೀಗ ಹಾಕಿ ಹೋಗಿದ್ದರು.

ಕೆಂಗೇರಿ ರಾಜಕಾಲುವೆ ಬಳಿಕ ತೆಂಗಿನ ತೋಟವೊಂದರಲ್ಲಿ ಈ ಘಟನೆ ನಡೆದಿದೆ. 16 ವರ್ಷಗಳ ಹಿಂದೆ ಗೌರಮ್ಮಳ ಪತಿ ತೀರಿಹೋಗಿದ್ದರು. ಮಕ್ಕಳಿಲ್ಲದ ಗೌರಮ್ಮ ವ್ಯಕ್ತಿಯೊಬ್ಬರ ತೆಂಗಿನ ತೋಟದಲ್ಲಿ ಶೆಡ್‌ನಲ್ಲಿ ವಾಸವಿದ್ದಳು. ಕುಟುಂಬದವರೇ ಈ ಕೆಲಸ ಮಾಡಿದ್ದಾರೆಯೇ ಅಥವಾ ದರೋಡೆ ಮಾಡಲು ಬಂದಿದ್ದವರ ಕೃತ್ಯವೇ ಎನ್ನುವುದರ ಕುರಿತು ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications