• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸತು: OCTAVEZ APP ಸಂಗೀತ ಕಲಿಕೆ, ದಿಗ್ಗಜರಿಂದ ಪಾಠ

|

ಬೆಂಗಳೂರು, ಅಕ್ಟೋಬರ್ 28: ನಿಮ್ಮ ಫೇವರಿಟ್ ಸಂಗೀತ ವಾದ್ಯ ಕಲಿಯಬೇಕೆಂಬ ನಿಮ್ಮ ಅಭಿಲಾಷೆಯನ್ನು ಈಡೇರಿಸಿಕೊಳ್ಳಲು, ಅದು ಎಷ್ಟು ದುಬಾರಿಯೋ ಅಥವಾ ಸೂಕ್ತ ಮಾರ್ಗದರ್ಶಕರು ಸಿಗುತ್ತಾರೆಯೋ ಇಲ್ಲವೋ ಎಂಬ ಆತಂಕದಿಂದ ಮುಕ್ತವಾದ ಜಗತ್ತನ್ನು ಕಲ್ಪಿಸಿಕೊಳ್ಳಿ. ಅದು ಪಾಶ್ಚಿಮಾತ್ಯ ಸಂಗೀತ ಇರಲಿ ಅಥವಾ ಭಾರತೀಯ ಶಾಸ್ತ್ರೀಯ ಸಂಗೀತವಿರಲಿ, ನೀವು ಯಾವುದೇ ಬಗೆಯ ಸಂಗೀತವನ್ನು ಬೆಂಗಳೂರು ಮೂಲದ ಗ್ಲೋಬಲ್ ಪರ್ಫಾಮಿಂಗ್ ಆರ್ಟ್ಸ್ ಅಕಾಡೆಮಿ (ಜಿಪಿಎಎ) ಅಭಿವೃದ್ಧಿಪಡಿಸಿದ ಆಕ್ಟಾವೆಝ್ ಎಂಬ ವಿನೂತನ ಆ್ಯಪ್ ಮೂಲಕ ಕಲಿಯಬಹುದಾಗಿದೆ. ಪ್ರತಿಯೊಬ್ಬರಿಗೂ ಸಂಗೀತ ಲಭ್ಯವಾಗುವುದು ಮಾತ್ರವಲ್ಲ ಕೈಗೆಟುಕುವಂತಾಗಬೇಕು ಎಂಬ ಉದ್ದೇಶದಿಂದ ಅಭಿವೃದ್ಧಿಪಡಿಸಿರುವ ಈ ಆ್ಯಪ್, ಕೆಲ ತಿಂಗಳ ಹಿಂದೆ ಬಿಡುಗಡೆಯಾದಾಗಿನಿಂದ ನಿಧಾನವಾಗಿ ಜನಪ್ರಿಯವಾಗುತ್ತಿದೆ.

ಆರಂಭಿಕವಾಗಿ ಸಂಗೀತ ಕಲಿಯುವವರು, ಗಂಭೀರವಾಗಿ ಸಂಗೀತದ ಬಗ್ಗೆ ಪ್ರೀತಿ ಇರುವವರು ಮತ್ತು ಅರೆ ತರಬೇತಿ ಪಡೆದ ವೃತ್ತಿಪರರಿಗೆ ಕೂಡಾ ಆಕ್ಟಾವೆಝ್ ವರ್ಚುವಲ್ ವೇದಿಕೆಯಾಗಿದ್ದು, ಇದು ವಿಶ್ವದ ಯಾವುದೇ ಭಾಗಗಳ ತರಬೇತಿ ಪಡೆದ ಸಂಗೀತಜ್ಞರು ಮತ್ತು ಆಸಕ್ತ ವಿದ್ಯಾರ್ಥಿಗಳ ನಡುವಿನ ಸಂಬಂಧಸೇತುವಾಗಿದೆ. ವೈವಿಧ್ಯಮಯ ಮಾರ್ಗದರ್ಶಕರನ್ನು ಹೊಂದಿದ ಇದು, ಭಾರತೀಯ ಹಾಗೂ ಪಾಶ್ಚಮಾತ್ಯ ಶೈಲಿಯ ಸಂಗೀತ ಗಾಯನ ಮತ್ತು ವಾದ್ಯ ಸಂಗೀತ ಕೋರ್ಸ್‍ಗಳನ್ನು ಕೂಡಾ ಆಯೋಜಿಸುತ್ತಿದೆ.

ಆಕ್ಟಾವೆಝ್ ವಿಶಿಷ್ಟವಾಗಲು ಮುಖ್ಯ ಕಾರಣವೆಂದರೆ ಸಂಗೀತದ ಬಗ್ಗೆ ಇರುವ ಸಮಗ್ರತೆ ಮತ್ತು ಪರಿಪೂರ್ಣ ದೃಷ್ಟಿಕೋನ, ಅದು ಸಂಗೀತ ಕಲಿಕಾರ್ಥಿಗಳಿಗೆ ಒದಗಿಸಿಕೊಡುವ ವೈವಿಧ್ಯಮಯ ಲಭ್ಯತೆ, ಕಲಿಕಾ ಅನುಕೂಲತೆ ಮತ್ತು ಕೈಗೆಟುಕುವಂತಿರುವುದು. ಮೃದಂಗ, ಗಿಟಾರ್, ಲ್ಯಾಟಿನ್ ಪಕ್ರ್ಯೂಶನ್, ಕೀಬೋಡ್, ಕೊಳಲು ಮತ್ತು ತಬಲಾದಂಥ ವೈವಿಧ್ಯಮಯ ಶ್ರೇಣಿಯ ಸಂಗೀತ ವಾದ್ಯಗಳ ಕಲಿಕೆಗೆ ಈ ಆ್ಯಪ್ ನೆರವಾಗುತ್ತದೆ.

ಸಂಗೀತ ದಿಗ್ಗಜರಿಂದ ಆಪ್ ಮೂಲಕ ಪಾಠ

ಸಂಗೀತ ದಿಗ್ಗಜರಿಂದ ಆಪ್ ಮೂಲಕ ಪಾಠ

ಈ ಆ್ಯಪ್‍ನಲ್ಲಿ ಲಭ್ಯರಿರುವ ಸಂಗೀತ ದಿಗ್ಗಜರೆಂದರೆ, ಅನೂರ್ ಅನಂತಕೃಷ್ಣ ಶರ್ಮ, ಪ್ರವೀಣ್ ಡಿ.ರಾವ್, ಶ್ರೀನಿವಾಸಾಚಾರ್, ದಮ್ಮೂರ್, ಎಸ್.ಎಸ್.ಪ್ರಸಾದ್, ಅರುಣ್ ಕುಮಾರ್, ಶದ್ರಚ್ ಸೊಲೊಮನ್, ಶ್ರೀನಿವಾಸ ಪ್ರಸಾದ್, ಮಧುಸೂಧನ, ಪ್ರಮಥ್ ಕಿರಣ್, ಸಂದೀಪ್ ವಸಿಷ್ಠ, ಮಂಗಳಾ ರವಿ, ವಾರಿಜಾಶ್ರೀ ವೇಣುಗೋಪಾಲ್ ಮತ್ತು ಎಂ.ಕೆ.ಓಹಿಲೇಶ್ವರಿ. ಕೇವಲ ಕೆಲವೇ ಕ್ಲಿಕ್‍ಗಳಲ್ಲಿ ಇವರ ಮಾರ್ಗದರ್ಶನ ಪಡೆಯಬಹುದಾಗಿದೆ. ಇಷ್ಟು ಮಾತ್ರವಲ್ಲದೇ, ಸಂಗೀತ ಪರಿಕರಗಳು ಲಭ್ಯವಾಗುವುದರಿಂದ ಹಿಡಿದು, ಅವುಗಳಿಗೆ ವಿಮೆ ಮಾಡಿಸುವುದು, ಅವುಗಳ ನಿರ್ವಹಣೆಗೆ ವೇಳಾಪಟ್ಟಿ ನಿರ್ಧರಿಸುವುದುಸಂಗೀತಜ್ಞರು ಮತ್ತು ಸಂಗೀತ ತಂಡಗಳಿಗೆ , ಸಂಗೀತ ಪರಿಕರಗಳನ್ನು ಬಾಡಿಗೆಗೆ ನೀಡುವುದು, ಉತ್ಸಾಹಿ ಕಲಿಕಾರ್ಥಿಗಳಿಗೆ ಅಗ್ರಗಣ್ಯ ಸಂಗೀತಜ್ಞರನ್ನು ಸಂಪರ್ಕಿಸುವುದು ಹೀಗೆ ಆಕ್ಟಾವೆಝ್ ಪ್ರತಿಯೊಬ್ಬರ ಅಗತ್ಯತೆಗಳಿಗೂ ಎಂಡ್ ಟೂ ಎಂಡ್ ಸೊಲ್ಯೂಶನ್ ನೀಡುತ್ತದೆ.

ಸುಗಮ ಸಮಗೀತ ಮತ್ತು ಶಾಸ್ತ್ರೀಯ ಸಂಗೀತ ಕಲಿಕೆ

ಸುಗಮ ಸಮಗೀತ ಮತ್ತು ಶಾಸ್ತ್ರೀಯ ಸಂಗೀತ ಕಲಿಕೆ

ಇದರ ಜತೆಗೆ ಸಂಗೀತದ ವಿವಿಧ ಪ್ರಕಾರಗಳಾದ ಸುಗಮ ಸಮಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವನ್ನು ಕೂಡಾ ಕಲಿಸಿಕೊಡುತ್ತದೆ. ನಿರ್ದಿಷ್ಟ ಸಮಯದಲ್ಲಿ ಮಾರ್ಗದರ್ಶಕರು ಮತ್ತು ಶಿಕ್ಷಕರು ವೈಯಕ್ತಿಕವಾಗಿ ಭೇಟಿ ಮಾಡಬೇಕಾದ ಅಗತ್ಯತೆ ಇಲ್ಲದಿರುವುದರಿಂದ, ಇಡೀ ಕಲಿಕಾ ಪ್ರಕ್ರಿಯೆ ಅತ್ಯಂತ ಸ್ಥಿತಿಸ್ಥಾಪಕತ್ವವನ್ನು ಹೊಂದಿದ್ದು, ಕಲಿಕಾರ್ಥಿಗಳು ತಮ್ಮ ಮನೆಗಳಲ್ಲಿ ಆರಾಮವಾಗಿ ಕುಳಿತೇ ಸಂಗೀತ ಕಲಿಯಬಹುದಾಗಿದೆ.

ಸಂಸ್ಥಾಪಕ ಪಾಲುದಾರ ರವಿ ಕೃಷ್ಣಮೂರ್ತಿ

ಸಂಸ್ಥಾಪಕ ಪಾಲುದಾರ ರವಿ ಕೃಷ್ಣಮೂರ್ತಿ

ಈ ಬಗ್ಗೆ ವಿವರ ನೀಡಿದ ಆಕ್ಟಾವೆಝ್ ಸಂಸ್ಥಾಪಕ ಪಾಲುದಾರ ರವಿ ಕೃಷ್ಣಮೂರ್ತಿ, "ಆಕ್ಟಾವೆಝ್ ಯಾವುದೇ ಹಿನ್ನೆಲೆಯ ಸಂಗೀತ ಕಲಿಕಾಕಾಂಕ್ಷಿಗಳ ಎಲ್ಲ ಅಗತ್ಯತೆಯನ್ನು ಪೂರೈಸುವ ಒಂದು ಸಮಗ್ರ ಸೊಲ್ಯೂಶನ್ ಆಗಿದೆ. ಖ್ಯಾತ ಸಂಗೀತಜ್ಞರನ್ನು ವರ್ಚುವಲ್ ಪ್ಲಾಟ್‍ಫಾರಂ ಮೂಲಕ ಕಲಿಕಾರ್ಥಿಗಳ ಜತೆ ಸಂಪರ್ಕಿಸುವ ಈ ಆ್ಯಪ್, ಕಲಿಕಾರ್ಥಿಗಳು ಆರಾಮದಾಯಕವಾಗಿ ತಮ್ಮ ಮನೆಗಳಲ್ಲೇ ಕುಳಿತುಕೊಂಡು ಕನಿಷ್ಠ ದಣಿವಿನಲ್ಲಿ ಗರಿಷ್ಠ ಕಲಿಕೆಗೆ ಅವಕಾಶ ಕಲ್ಪಿಸಿಕೊಡುವ ರೀತಿಯಲ್ಲಿ ರೂಪುಗೊಂಡಿದೆ.

  Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada
  ಇದರ ಬೆಲೆ ಕೂಡಾ ಕೈಗೆಟುಕುವಂತಿದೆ

  ಇದರ ಬೆಲೆ ಕೂಡಾ ಕೈಗೆಟುಕುವಂತಿದೆ

  ''ಇದರ ಬೆಲೆ ಕೂಡಾ ಕೈಗೆಟುಕುವಂತಿದ್ದು, ಮಾಸಿಕ 2000 ರೂಪಾಯಿಗಳಿಂದ ಆರಂಭ ಹಾಗೂ ಸುಲಭ ಇಎಂಐ ಆಯ್ಕೆಗಳು ಕೂಡಾ ಲಭ್ಯ. ಈ ಆ್ಯಪ್ ವೈವಿಧ್ಯಮಯ ಕಲಿಕಾ ಅಗತ್ಯತೆಗಳನ್ನು ಪೂರೈಸಲಿದೆ. ಈ ಆ್ಯಪ್, ಸಂಗೀತ ಪರಿಕರಗಳ ಖರೀದಿ ಹಾಗೂ ನಿರ್ವಹಣೆಯ ಅಗತ್ಯತೆಯನ್ನೂ ಪೂರೈಸುತ್ತದೆ. ಜನ ತಮ್ಮ ಪ್ರೀತಿಪಾತ್ರವಾದ ಸಂಗೀತ ಪರಿಕರಗಳ ನಿರ್ವಹಣೆಯ ಬಗ್ಗೆ ಅನಗತ್ಯವಾಗಿ ಶ್ರಮಪಡುವುದುನ್ನು ತಡೆಯುತ್ತದೆ" ಎಂದು ರವಿ ಕೃಷ್ಣಮೂರ್ತಿ ವಿವರಿಸಿದರು.

  English summary
  OCTAVEZ – an innovative app developed by the Bengaluru-based Global Performing Arts Academy (GPAA). Designed with a mission to make music accessible and affordable for everyone, their app has been steadily gaining popularity since its launch a few months ago.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X