48 ಲಕ್ಷ ರೂ. ವಂಚಿಸಿದ ಕಿರಾತಕ ವಾಪಸು ಕೊಟ್ಟಿದ್ದು ಚಿತ್ರಹಿಂಸೆ !

ಬೆಂಗಳೂರು, ಡಿಸೆಂಬರ್ 21: ಕೇರಳ ಸ್ವಾಮೀಜಿಯೊಬ್ಬರ ಖಾತೆಯಿಂದ ಹಣ ದೇಣಿಗೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 48 ಲಕ್ಷ ರೂಪಾಯಿ ವಂಚಿಸಿರುವ ಅಂತರರಾಜ್ಯ ವಂಚಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಹಣ ನೀಡಿದ್ದ ವ್ಯಕ್ತಿಯ ಸಂಬಂಧಿಯನ್ನು ಅಕ್ರಮ ಬಂಧನದಲ್ಲಿಟ್ಟು ಮೂರು ತಿಂಗಳು ಕಾಲ ಚಿತ್ರಹಿಂಸೆ ನೀಡಿರುವ ಆರೋಪಿಯ ಇನ್ನೊಂದು ಮುಖ ವಿಡಿಯೋದಲ್ಲಿ ಅನಾವರಣಗೊಂಡಿದೆ.

ಸ್ವರೂಪ್ ಶೆಟ್ಟಿ ಅಲಿಯಾಸ್ ಅಜಿತ್ ಶೆಟ್ಟಿ ಬಂಧಿತ ಆರೋಪಿ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಮಂಗಳೂರು ಮೂಲದ ಸ್ವರೂಪ್ ಎಂಎನ್ ಸಿ ಕಂಪನಿ ಮಾಲೀಕ ಎಂದು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿದ್ದ. ಮಂಗಳೂರಿನ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಏಳು ಪ್ರಕರಣ ದಾಖಲಾಗಿವೆ.

ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅರ್ಶಾದ್ ಎಂಬಾತ ನನ್ನ ಗೆಳೆಯ. ಅವನು ಸಾಲ ಮಾಡಿಕೊಂಡು ಕಷ್ಟದಲ್ಲಿ ಸಿಕ್ಕಿಬಿದ್ದಿದ್ದಾನೆ. ಆರ್ಶಾದ್ ಗೆ ನಾನು ಕೂಡ ಐವತ್ತು ಸಾವಿರ ರೂಪಾಯಿ ಸಾಲ ನೀಡಿದ್ದೇನೆ. ನನಗೆ ಅಪಘಾತವಾಗಿ ಕೈ ಮೂಳೆ ಮುರಿದುಕೊಂಡಿದ್ದು, ಕೂಡಲೇ ಹಣ ಬೇಕು ಎಂದು ಅರ್ಶಾದ್ ಮಾವ ಮಹಮದ್ ರಫಿ ಎಂಬುವರಿಗೆ ಕರೆ ಮಾಡಿ ವಂಚಕ ನಂಬಿಸಿದ್ದಾನೆ. ರಫಿ ಅವರ ತಂಗಿಯ ಪುತ್ರ ಅರ್ಶಾದ್ ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಿದ್ದು ನಿಜ. ಹೀಗಾಗಿ ಸ್ವರೂಪ್ ಮಾತು ನಂಬಿ ಮೊದಲು ಐವತ್ತು ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.

Pradeep SEO Office, [21.12.20 10:35] Title: Notorious inter-state criminal held in Bengaluru

ಇದಾದ ಕೆಲ ದಿನಗಳ ಬಳಿಕ ರಫಿ ಅವರಿಗೆ ಕರೆ ಮಾಡಿ, ನಿಮ್ಮ ಅರ್ಶಾದ್ ಕಷ್ಟ ನೋಡಿ ಕೇರಳ ಶ್ರೀಪದ ವಿಶ್ವನಾಥ ಸ್ವಾಮೀಜಿ ಇಪ್ಪತ್ತೈದು ಲಕ್ಷ ರೂಪಾಯಿ ದೇಣಿಗೆ ನೀಡಲು ಒಪ್ಪಿದ್ದಾರೆ. ಆರ್ಶದ್ ಮೇಲೆ ತುಂಬಾ ಪ್ರೀತಿ ಇದೆ. ಹಣ ನಿಮ್ಮ ಅರ್ಶಾದ್ ಖಾತೆಗೆ ಹಾಕಿರುವುದನ್ನು ನಾನು ನೋಡಿದ್ದೇನೆ. ಆದರೆ ಆ ಖಾತೆಯನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ನೀವು 5.85 ಲಕ್ಷ ರೂಪಾಯಿ ತೆರಿಗೆ ಪಾವತಿಸಿದರೆ ಇಪ್ಪತ್ತೈದು ಲಕ್ಷ ರೂಪಾಯಿ ಹಣ ವಾಪಸು ಬರುತ್ತದೆ ಎಂದು ನಂಬಿಸಿದ್ದಾನೆ. ಕೆಲವು ನಕಲಿ ದಾಖಲೆಗಳನ್ನು ತೋರಿಸಿದ್ದು, ಅದನ್ನು ನಂಬಿದ ರಫೀಕ್ ಹಂತ ಹಂತವಾಗಿ 48 ಲಕ್ಷ ರೂಪಾಯಿ ಕೊಟ್ಟಿದ್ದಾನೆ.

Pradeep SEO Office, [21.12.20 10:35] Title: Notorious inter-state criminal held in Bengaluru

Recommended Video

      ಭಿಕ್ಷುಕನಿಗೆ ಒಲಿದ ಅದೃಷ್ಟ !! | Oneindia Kannada

      ರಫೀಕ್ ಬಳಿ ವಸೂಲಿ ಮಾಡುವ ವರೆಗೂ ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅರ್ಶಾದ್ ನನ್ನು ಕಾಡುಗೋಡಿಯ ಅಪಾರ್ಟ್ ಮೆಂಟ್‌ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಕಾಲಿನಲ್ಲಿ ಹಿಂಬದಿಯಿಂದ ಹೊದ್ದು ಅರ್ಶಾದ್ ನನ್ನ ಕೆಳಗೆ ಬೀಳಿಸಿ, ಮರ್ಮಾಂಗದ ಮೇಲೆ ಕಾಲಿಟ್ಟು ಹಿಂಸೆ ಕೊಡುವ ವಿಡಿಯೋ ಹೊರ ಬಿದ್ದಿದೆ. ಮೂರು ತಿಂಗಳು ಕಾಲ ಚಿತ್ರಹಿಂಸೆ ನೀಡಿದ್ದು, ಘಟನೆ ಕುರಿತು ಅರ್ಶಾದ್ ತನ್ನ ಮಾವನೊಂದಿಗೆ ಹಂಚಿಕೊಂಡಿದ್ದಾರೆ. ಅರ್ಶಾದ್ ಮಾವ ಮಹಮದ್ ರಫೀ ಅವರು ನೀಡಿದ ದೂರಿನ ಮೇರೆಗೆ ಸ್ವರೂಪ್ ಶೆಟ್ಟಿಯನ್ನು ಬಂಧಿಸಿದ್ದು, ಸಂದೀಪ್ ರೈ, ಕಿರಣ್ ಮತ್ತಿತರಿಗಾಗಿ ಶೋಧ ನಡೆಸಲಾಗುತ್ತಿದೆ. ಕಿರಾತಕ ಸ್ವರೂಪ್ ಶೆಟ್ಟಿ ಎಂಎನ್ ಸಿ ಕಂಪನಿ ಮಾಲೀಕ ಎಂದು ಹೇಳಿಕೊಂಡು ಅನೇಕ ಮಂದಿಗೆ ವಂಚನೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+