ಹೆಣ್ಣೇ ನೀ ಅಬಲೆಯಲ್ಲ.. ನಿರ್ಭಯಾಳಿಗೆ ಸಂಗೀತ ನಮನ

ಅತ್ಯಾಚಾರದ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡುವ 'ಸಿಡಿದೇಳಿ... ಭಯ ಬಿಡಿ' ಟ್ಯಾಗ್‍ಲೈನ್ ಇರುವ ಡಾಕ್ಯುಮೆಂಟರಿ ಚಿತ್ರದ ನಂತರ ಈಗ ನಿರ್ಭಯಾಳಂಥ ಅನೇಕಾನೇಕ ಸ್ತ್ರೀಶಕ್ತಿಗಳಿಗೆ ಹಾಡಿನ ಮೂಲಕ ಗಾಯಕ ಮನೋಜ್ ವಶಿಷ್ಠ ನಮನ ಸಲ್ಲಿಸಿದ್ದಾರೆ.

ದೆಹಲಿಯಲ್ಲಿ ಡಿಸೆಂಬರ್ 16, 2012ರಂದು ಚಲಿಸುತ್ತಿದ್ದ ಬಸ್ಸಿನಲ್ಲಿ 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಜನ ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಆಕೆ ಹೊಟ್ಟೆ ಮತ್ತು ಮರ್ಮಾಂಗವನ್ನು ಬಗೆದುಹಾಕಿದ್ದರು. ನಂತರ ಆಕೆ ಮತ್ತು ಆಕೆಯ ಜೊತೆಗಿದ್ದ ಸ್ನೇಹಿತನನ್ನು ಚಲಿಸುತ್ತಿದ್ದ ಬಸ್ಸಿನಿಂದಲೇ ಬೆತ್ತಲು ಸ್ಥಿತಿಯಲ್ಲಿ ಬಿಸಾಕಿದ್ದರು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ದೇಶದ ಯುವಜನತೆಯೇ ಸಿಡಿದುನಿಂತಿತ್ತು.

Nirbhaya -A Musical Tribute by Manoj Vasishta

ಈ ದಾರುಣ ಘಟನೆ ನಡೆದು ಎರಡು ವರ್ಷಗಳು ಕಳೆದರೂ ದೇಶದ ಇತರೆಡೆಯಂತೆ ದೆಹಲಿಯಲ್ಲೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ತೀರಾ ಇತ್ತೀಚೆಗೆ ಕ್ಯಾಬ್ ಚಾಲಕನೊಬ್ಬ ಅತ್ಯಾಚಾರ ಮಾಡಿದ ಘಟನೆಯಿಂದ ದೆಹಲಿ ಮತ್ತೊಮ್ಮೆ ತಲೆ ತಗ್ಗಿಸುವಂತಾಗಿದೆ. [ಚಲಿಸುತ್ತಿರುವ ವಾಹನದಲ್ಲಿ ನಡೆದ ಅತ್ಯಾಚಾರಗಳು]

ಅದರೆ, ಎಂಥಾ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಎಷ್ಟೇ ಕಷ್ಟ ನಷ್ಟ ನೋವು ಇದ್ದರೂ ಮಹಿಳೆಯರು ಎಂದಿಗೂ ಅಬಲೆಯರಲ್ಲ, ಸಬಲೆಯರು. ಎಲ್ಲರಲ್ಲೂ ಶಕ್ತಿ ಸ್ವರೂಪಿಣಿ ಎಂಬ ಚೈತನ್ಯ ತುಂಬುವ ಹಾಡನ್ನು ಗಾಯಕ ಮನೋಜ್ ವಶಿಷ್ಠ ಅವರು ನಿರ್ಭಯಾಳಿಗೆ ಅರ್ಪಿಸಿದ್ದಾರೆ. ನಟಿ ಕಮ್ ರಾಜಕಾರಣಿಗಳಾದ ಮಾಳವಿಕ ಅವಿನಾಶ್, ಬಿ.ಜಯಶ್ರೀ ಅವರು ಹಾಡಿನ ನಡುವೆ ನಾಲ್ಕು ಮಾತಾಡಿ ಸ್ಪೂರ್ತಿ ತುಂಬಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+