Namma Metro: ಪ್ರಯಾಣಿಕರಿಗೆ 1 ಮತ್ತು 3 ದಿನದ ಪಾಸ್‌ಗಳನ್ನು ಪರಿಚಯಿಸಿದ ನಮ್ಮ ಮೆಟ್ರೋ
ಬೆಂಗಳೂರು, ಮಾರ್ಚ್ 30: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳ ಮುನ್ನ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ 1 ಹಾಗೂ 3 ದಿನದ ಪಾಸ್ ಅನ್ನು ಬಿಎಂಆರ್‌ಸಿಎಲ್ (BMRCL) ಪರಿಚಯಿಸುತ್ತಿದ್ದು, ಒಂದು ದಿನದ ಪಾಸ್ಗೆ 200 ರೂಪಾಯಿಯನ್ನು ನಿಗದಿಯಾಗಿದೆ. ಪಾಸ್ ಖರೀದಿಸಿದ ದಿನದಂದು ಪ್ರಯಾಣಿಕರು ಅನಿಯಮಿತವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.
Finally, @cpronammametro to introduce 1-day (Rs 200) and 3-day (Rs 400) passes pic.twitter.com/YOlIA9ZWwK
— ChristinMathewPhilip (@ChristinMP_TOI) March 30, 2022
ಇನ್ನು ಮೂರು ದಿನದ ಪಾಸ್ಗೆ 400 ರೂಪಾಯಿ ನಿಗದಿಗೊಳಿಸಲಾಗಿದ್ದು, ಖರೀದಿ ದಿನದಿಂದ 3 ದಿನ ಅನಿಯಮಿತವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಬಹುದು. ಪಾಸ್ ಮೊತ್ತದಲ್ಲಿ 50 ರೂ. ಹಿಂಪಡೆಯಲು ಅವಕಾಶವಿದೆ. ಈ ಕುರಿತು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

1 ದಿನದ ಮತ್ತು 3 ದಿನದ ಪಾಸ್‌ಗಳು ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಪ್ರಯಾಣಿಕರು 1 ದಿನದ ಅಥವಾ 3 ದಿನದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಯಾವುದೇ ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ಉತ್ತಮ ಸ್ಥಿತಿಯಲ್ಲಿ ಹಿಂದಿರುಗಿಸಿದರೆ, ಪ್ರಯಾಣಿಕರು 50 ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಹಿಂಪಡೆಯಬಹುದು.
ಪ್ರಯಾಣಿಕರು ಆನ್‌ಲೈನ್‌ನಲ್ಲಿ ಅಂದರೆ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಿದ ಮೊತ್ತವನ್ನು ಸ್ಮಾರ್ಟ್ ಕಾರ್ಡ್‌ಗೆ 1 ಗಂಟೆಯ ನಂತರ ಮತ್ತು ರೀಚಾರ್ಜ್ ಮಾಡಿದ ದಿನಾಂಕದಿಂದ 7 ದಿನಗಳ ಒಳಗೆ ಎಎಫ್ಸಿ ಗೇಟ್‌ನಲ್ಲಿ ಟ್ಯಾಪ್ ಮಾಡುವ ಮೂಲಕ ಅಥವಾ ಕಾರ್ಡ್ ಟಾಪ್-ಅಪ್ ಟರ್ಮಿನಲ್‌ಗಳಲ್ಲಿ ಸಿಟಿಟಿ ರೀಚಾರ್ಜ್ ಮಾಡಿದ ದಿನಾಂಕದಿಂದ 15 ದಿನಗಳಲ್ಲಿ ನವೀಕರಿಸಬಹುದು.
ಆದಾಗ್ಯೂ, ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್ಗಳಲ್ಲಿ ಬ್ಯಾಲೆನ್ಸ್ ಮೊತ್ತವನ್ನು 15 ದಿನಗಳ ಒಳಗೆ ನವೀಕರಿಸಲು ಸಾಧ್ಯವಾಗದಿದ್ದರೆ. ಅಂತಹ ಕ್ಲೈಮ್ ಮಾಡದ ಮೊತ್ತವನ್ನು ರಿಚಾರ್ಜ್ ಮಾಡಿದ ದಿನಾಂಕದಿಂದ 30 ದಿನಗಳ ಒಳಗೆ ಅದೇ ಚಾನೆಲ್ ಮೂಲಕ ರಿಚಾರ್ಜ್ ಮಾಡಿದ ಮೊತ್ತದಿಂದ ಶೇ.2.5 ರದ್ದತಿ ಶುಲ್ಕವನ್ನು ಕಡಿತಗೊಳಿಸಿ ರೀಚಾರ್ಜ್ ಮೊತ್ತವನ್ನು ಮರುಪಾವತಿ ಮಾಡಲಾಗುವುದು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications