ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ: ಜಾರ್ಜ್

By Mahesh
|
Google Oneindia Kannada News

ಬೆಂಗಳೂರು, ಜುಲೈ 13: ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ನಮ್ಮ ಮೆಟ್ರೋನಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಅಳವಡಿಸಲು ಬೇಡಿಕೆ ಇದೆ. ಈ ಬಗ್ಗೆ ಸೂಕ್ತ್ ಕ್ರಮ ಸದ್ಯದಲ್ಲೇ ಜರುಗಿಸಲಾಗುವುದು. ಹೆಚ್ಚುವರಿ ಬೋಗಿಗಳನ್ನು ಒದಗಿಸಲಾಗುವುದು ಎಂದು ಬೆಂಗಳೂರು ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಅವರು ಹೇಳಿದರು.

ನಮ್ಮ ಮೆಟ್ರೋ ರೈಲಿನಲ್ಲಿರುವ ಮೂರು ಬೋಗಿಗಳ ಬದಲಿಗೆ 6 ಬೋಗಿಗಳನ್ನು ಅಳವಡಿಸಲಾಗುವುದು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬೋಗಿ ನೀಡಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಕ್ರಮ ಜರುಗಿಸಲಾವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಸದನಕ್ಕೆ ತಿಳಿಸಿದರು. [ಸುರಂಗದಲ್ಲಿ ಮೆಟ್ರೋ ಕೆಟ್ಟು ನಿಂತಾಗ, ಜಾರ್ಜ್ ಜತೆಗಿದ್ರು!]

Namma Metro To have a 'Women compartment or Bogie' : KJ George

ಮಹಾಲಕ್ಷ್ಮಿ ಲೇಔಟ್ ನ ಜೆಡಿಎಸ್‌ ಶಾಸಕ ಕೆ. ಗೋಪಾಲಯ್ಯ ಅವರ ಪ್ರಶ್ನೆಗೆ ಕೆಜೆ ಜಾರ್ಜ್ ಅವರು ಲಿಖಿತ ಉತ್ತರ ನೀಡಿದರು. ಜೊತೆಗೆ ಮೆಟ್ರೋದಲ್ಲಿ ಎಷ್ಟು ಮಂದಿ ಪ್ರತಿನಿತ್ಯ ಪ್ರಯಾಣ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು. [ನಮ್ಮ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ]
|
ಮೆಟ್ರೋದಲ್ಲಿ ದಿನನಿತ್ಯ 1.50 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಪೂರ್ವ ಪಶ್ಚಿಮ ಕಾರಿಡಾರ್ ನ ಪರ್ಪಲ್ ಲೈನ್ ಆರಂಭವಾದ ಮೇಲೆ ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆ ಕಡೆ ಸಂಚಾರ ಹೆಚ್ಚಾಗಿದೆ. [ನಮ್ಮ ಮೆಟ್ರೋ ಸುರಂಗ ಸಂಚಾರ ಲೋಕಾರ್ಪಣೆ]

43 ಆಸನಗಳಿರುವ ಪ್ರತಿ ಬೋಗಿಯಲ್ಲಿ 250 ಜನ ಪ್ರಯಾಣಿಸಬಹುದು. ಮೆಟ್ರೋದಲ್ಲಿ ಪ್ರಯಾಣ ಅವಧಿ ಕಡಿಮೆ ಇದ್ದರೂ ಅನೇಕ ಬಾರಿ ಮಹಿಳೆಯರು ಕುಳಿತುಕೊಳ್ಳಲು ಸೀಟು ಸಿಗುವುದಿಲ್ಲ, ಬಿಎಂಆರ್ ಸಿಎಲ್ ಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

English summary
Bengaluru in-charge minister K J George in the legislative assembly on Tuesday said Namma Metro To have a 'Women compartment or Bogie'. We will examine the proposal to reserve a coach only for women and take action."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X