Get Updates
Get notified of breaking news, exclusive insights, and must-see stories!

Namma Metro: ಹಣಕಾಸು ನಿರ್ದೇಶಕರ ವಿದೇಶಿ ಟ್ರಿಪ್, ಮೋಜು-ಮಸ್ತಿ? ತನಿಖೆಗೆ BMRCL ನೌಕರರ ಸಂಘ ಆಗ್ರಹ

ಬೆಂಗಳೂರು, ಮಾರ್ಚ್ 06: ಬೆಂಗಳೂರು ನಮ್ಮ ಮೆಟ್ರೋ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಇತ್ತೀಚೆಗೆ ದರ ಏರಿಕೆಯಿಂದ ಪ್ರಯಾಣಿಕರ ಆಕ್ರೋಶ ಎದುರಿಸಿದೆ. ಹೊಸ ಮಾರ್ಗ ನಿರ್ಮಿಸುತ್ತಿದೆ. ಅದಕ್ಕಾಗಿ ರೈಲು ಪೂರೈಕೆಗೆಂದು ವಿದೇಶಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೀಗೆ ಒಪ್ಪಂದದ ಮೇರೆಗೆ ವಿದೇಶಕ್ಕೆ ತಪಾಸಣೆಗೆ ತೆರಳಬೇಕಿದ್ದ ಮೆಟ್ರೋ ತಂತ್ರಜ್ಞರ ಬದಲಾಗಿ ಹಣಕಾಸು ನಿರ್ದೇಶಕರು ವಿದೇಶಕ್ಕೆ ತೆರಳಿ ಮೋಜು ಮಾಡಿದ್ದಾರೆ. ನಿಗಮದ ಹಣ ದುಂದು ವೆಚ್ಚ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹೌದು, ನಮ್ಮ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಉಪಕರಣ ಅಳವಡಿಕೆ ಆಗಬೇಕಿದೆ. ಅದರ ತಪಾಸಣೆ ನೆಪದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ತಂತ್ರಜ್ಞರ ಬದಲಾಗಿ ಹಣಕಾಸು ವಿಭಾಗದ ನಿರ್ದೇಶಕ ಜರ್ಮನಿಗೆ ತೆರಳಿದ್ದಾರೆ. ಅವರು ಒಬ್ಬರೇ ಹೋಗದೇ ಪತ್ನಿಯನ್ನು ಜೊತೆಗೆ ಕರೆದುಕೊಂಡು ಹೋಗಿ ವಿದೇಶ ಪ್ರವಾಸ ಮುಗಿಸಿ ಬಂದಿದ್ದಾರೆ. ಈ ಘಟನೆ ಸುಮಾರು ಎರಡು ವರ್ಷಗಳ ಹಿಂದೆ ನಡೆದಿದೆ. ಆ ನಿರ್ದೇಶಕರ ವಿರುದ್ಧ ತನಿಖೆ ನಡೆಸುವಂತೆ BMRCL ನೌಕರರ ಸಂಘ ಆಗ್ರಹಿಸಿದೆ. ಸಂಘವು, ಇಲ್ಲಿ ದುಂದು ವೆಚ್ಚವಾಗಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದೆ.

Namma Metro Finance Director s Foreign Trip Sparks Misuse of Funds Allegations Urges Probe

ಪ್ರಕರಣದ ಹಿನ್ನೆಲೆ ಹೀಗಿದೆ!

ಇದೇ ವಿಚಾರವಾಗಿ ನೌಕರರ ಸಂಘವು ಈ ಬಗ್ಗೆ ಪತ್ರ ಬರೆದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್‌ ಅವರಿಗೆ ದೂರು ಕೊಟ್ಟಿದೆ. ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಟೆಲಿಕಮ್ಯೂನಿಕೇಶನ್ ಪರಿಕರಗಳ ಅಳವಡಿಕೆ ಅಗತ್ಯವಿತ್ತು. ಈ ಸಂಬಂಧ ಉಪಗುತ್ತಿಗೆ ಪಡೆದಿದ್ದ ಜರ್ಮನಿಯ ಎಎಎಲ್ ಕಂಪನಿಯು ಫ್ಯಾಕ್ಟರಿ ಎಕ್ಸೆಪ್ಪೆನ್ಸ್‌ ಟೆಸ್ಟ್‌ಗೆ ನಮ್ಮ ಮೆಟ್ರೋ ತಜ್ಞರನ್ನು 2022ರ ಸೆಪ್ಟೆಂಬರ್‌ ಆಹ್ವಾನಿಸಿತ್ತು. ಆಗ ತಜ್ಞರ ಬದಲಾಗಿ, ಹಣಕಾಸು ನಿರ್ದೇಶಕರು ಹೋಗಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.

Take a Poll

ಮೆಟ್ರೋ ನಿಲ್ದಾಣಗಳಲ್ಲಿ ಆಡಿಯೋ ಸಿಸ್ಟಂ ಪರಿಕರ ಮುನ್ನ ಅವುಗಳನ್ನು ತಪಾಸಣೆ ನಡೆಸಿ ಅನುಮೋದಿಸಬೇಕಾಗುತ್ತದೆ. ಬಳಿಕ ಅವರು ಬೆಂಗಳೂರಿಗೆ ಬರುತ್ತವೆ. ಇದಕ್ಕಾಗಿ ವಿದೇಶಕ್ಕೆ ಹೋಗಿ ಬರಬೇಕಾಗುತ್ತದೆ. ಆದರೆ, ತಾಂತ್ರಿಕ ಪರಿಣತರ ಬದಲಾಗಿ ತಪಾಸಣೇಗಾಗಿ ಆರ್ಥಿಕ ವಿಭಾಗದ ನಿರ್ದೇಶಕರು ತಮ್ಮ ಕುಟುಂಬ ಸಮೇತರಾಗಿ ಹೋಗಿ ಬಂದಿದ್ದಾರೆ. ನಿಗಮದ ಕೆಲಸದ ವಿಚಾರವಾಗಿ, ನಿಗಮದ ದುಡ್ಡಿನಲ್ಲಿ ಅವರು ವಿದೇಶಕ್ಕೆ ಹೋಗಿ ಬರಲು ಅರ್ಹರೆ ಎಂಬುದು ನೌಕರರ ಸಂಘದ ಪ್ರಶ್ನೆ.

Namma Metro Finance Director s Foreign Trip Sparks Misuse of Funds Allegations Urges Probe

ತಾಂತ್ರಿಕ ತಪಾಸಣೆಗೆ ಅವರು ಅರ್ಹರೆ?

ಈ ಬಗ್ಗೆ ಮಾತನಾಡಿದ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣ ಮೂರ್ತಿ, 'ತಾಂತ್ರಿಕ ತಪಾಸಣೆಗೆ ಹೋಗಿಬರಲು ನಿರ್ದೇಶಕರು ಅರ್ಹರೆ? ಅವರಿಗೆ ಪರಿಕರಗಳ ತಪಾಸಣೆ ನಡೆಸಿ ಅಳವಡಿಕೆಗೆ ಒಪ್ಪಿಗೆ ನೀಡುವಷ್ಟು ಪರಿಣತಿ ಇರುತ್ತದೆಯೆ? ಅಲ್ಲದೆ, ನಿರ್ದೇಶಕರು ತಮ್ಮ ಪತ್ನಿಯನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದು ಯಾಕೆ' ಎಂದು ಪ್ರಶ್ನಿಸಿದ್ದಾರೆ.

BMRCL ಜೊತೆಗೆ ಉಪ ಗುತ್ತಿಗೆಯ ಕಂಪನಿಯು ಪೂರೈಸುವ ಉಪಕರಣದ ತಪಾಸಣೆಗೆ, ನಿಗಮದ ವ್ಯವಸ್ಥಾಪಕ ನಿರ್ದೇಶಕರ ಬದಲಾಗಿ ಹಣಕಾಸು ವಿಭಾಗದ ನಿರ್ದೇಶಕರಿಗೆ ಪತ್ರ ಬರೆದು ಆಹ್ವಾನಿಸಿತ್ತಾ? ಎಂದು ತನಿಖೆ ನಡೆಯಬೇಕು. ಎಫ್‌ಎಟಿ ತಪಾಸಣೆ ಅಳವಡಿಕೆಯಾಗಿ ಒಂದು ವೇಳೆ ಅದರಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಲ್ಲಿ ಯಾರು ಹೊಣೆ? ಎಂದು ನೌಕರರ ಸಂಘ ಉಪಾಧ್ಯಕ್ಷರು ಪ್ರಶ್ನಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+