Namma Metro: ಒಂದು ಮೆಟ್ರೋ ರೈಲು ಕ್ಲೀನ್ ಮಾಡೋಕೆ 6,200 ಲೀಟರ್ ನೀರು ಬೇಕಂತೆ.!-ಮೆಟ್ರೋ ಅಧಿಕಾರಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್, 18: ಇದೀಗ ದೇಶದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆ ಕಾರಣ ಭೀಕರ ಬರಗಾಲದಿಂದ ಜನರು ಬೇಸತ್ತು ಹೋಗಿದ್ದಾರೆ. ಹಾಗೆಯೇ ಮತ್ತೊಂದೆಡೆ ಈಗಾಗಲೇ ಪ್ರಮುಖ ಜಲಾಶಯಗಳಲ್ಲೂ ಕೂಡ ನೀರು ತಳ ಹಂತವನ್ನು ತಲುಪಿದೆ. ಅಲ್ಲದೇ ಕುಡಿಯುವ ನೀರಿಗೂ ಆಹಾಕಾರ ಶುರುವಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯದ ರಾಜಧಾನಿಯಲ್ಲಂತೂ ನೀರಿಗೆ ಬರಬಂದಂತಾಗಿದೆ.
ಇನ್ನು ಒಂದು ಬೆಂಗಳೂರು ನಮ್ಮ ಮೆಟ್ರೋದ ಒಂದು ರೈಲನ್ನು ಸ್ವಚ್ಛಗೊಳಿಸಲು 6,200 ಲೀಟರ್ ನೀರು ಬೇಕು ಅಂತೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಂತಹ ಸಮಯದಲ್ಲಿ ಇಷ್ಟುಂದು ನೀರು ದುಂದುವೆಚ್ಚ ಬೇಕಾ ಅಂತಿದ್ದಾರೆ ನಮ್ಮ ಜನರು. ಹಾಗದರೆ ಇದಕ್ಕೆ ಇನ್ನೇನೆಲ್ಲ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಹಾಗೂ ಮೆಟ್ರೋ ರೈಲಿನ ಸ್ವಚ್ಛತೆ ಕಾರ್ಯ ಹೇಗೆ ನಡೆಯಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನ ನಮ್ಮ ಮೆಟ್ರೋ ನಗರದ ಅತ್ಯಂತ ಸ್ವಚ್ಛ ಸಾರಿಗೆ ಎಂದೇ ಪ್ರಖ್ಯಾತಿ ಪಡೆದಿದೆ. ನಮ್ಮ ಮೆಟ್ರೋ ರೈಲಿನ್ನು ಸ್ವಚ್ಛಗೊಳಿಸುವ ಹಂತ-ಹಂತದ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಿರಿ. ಎರಡು ವಾರಗಳಿಗೆ ಒಮ್ಮೆ ಎಲ್ಲಾ ರೈಲುಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಎನ್ನುವ ಮಾಹಿತಿ ಇದೆ. ಮರುಬಳಕೆಯ ನೀರಿನಿಂದ ಮೆಟ್ರೋವನ್ನು ಸ್ವಚ್ಛಗೊಳಿಸಲಾಗುತ್ತದೆ ಎನ್ನುವ ಮಾಹಿತಿಯೂ ಇದೆ.
ಇನ್ನು ಬಿಎಂಆರ್‌ಸಿಎಲ್ ಮೆಟ್ರೋ ಸ್ವಚ್ಛಗೊಳಿಸಲು 2 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದೆ. ಒಟ್ಟು ಪ್ರತೀ ತಿಂಗಳು ನಮ್ಮ ಮೆಟ್ರೋ ಸ್ವಚ್ಛತೆಗೆಂದು 30 ಸಾವಿರ ಲೀಟರ್ ನೀರನ್ನು ವಿನಿಯೋಗಿಸಲಾಗುತ್ತದೆ. ಇನ್ನು ಒಂದು ಮಟ್ರೋ ಸ್ವಚ್ಛತೆಗೆ 6,200 ಲೀಟರ್ ನೀರು ಬಳಸಲಾಗುತ್ತದೆ ಎನ್ನುವ ಮಾಹಿತಿ ಇದೆ.
ಇದೀಗ ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದ್ದು, ರೈತರು, ಜನರು ಬಿಸಿಲಿನ ಧಗೆಗೆ ಬೆಂದು ಹೋಗಿದ್ದಾರೆ. ಈಗಲೇ ಹಿಂಗಾದ್ರೆ, ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಳ ಆಗುವ ಬಿಸಿಲಿಗೆ ಹೇಗೆ ತಡೆದುಕೊಳ್ಳಬೇಕು ಎನ್ನುವ ಆತಂಕ ಜನರಲ್ಲಿ ಕಾಡುತ್ತಿದೆ. ಈ ನಡುವೆ ಕೊಡಗು, ಮೈಸೂರು, ಚಿಕ್ಕಗಳೂರು, ದಕ್ಷಿಣ ಕನ್ನಡದ ಕೆಲವೆಡೆ ಅಲ್ಪ ಮಳೆಯಾಗಿದೆ. ಬಿಟ್ಟರೆ ಉಳಿದೆಡೆ ತಾಪಮಾನ ಏರಿಕೆ ಆಗುತ್ತಲೇ ಇದೆ.
ಹವಾಮಾನ ಇಲಾಖೆ ಮಾರ್ಚ್ 20 ರ ಬಳಿಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆ ನೀಡಿದ್ದು, ಇದರಿಂದ ಜನರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಮತ್ತೊಂದೆಡೆ ಈಗಾಗಲೇ ಹಲವು ಮುನ್ಸೂಚನೆಗಳು ಸುಳ್ಳಾಗಿದ್ದು, ಈ ಸೂಚನೆಯಾದರೂ ನಿಜವಾಗದಿದ್ದರೆ ನಮ್ಮ ಗತಿ ಏನು ಅಂತಿದ್ದಾರೆ ಜನರು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ಬೋರ್‌ವೆಲ್‌ಗಳಲ್ಲಿ ನೀರಿಲ್ಲದ ಕಾರಣ ಟ್ಯಾಂಕರ್‌ಗಳನ್ನಿಟ್ಟು ನೀರು ಹೊಡೆಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಒಂದು ನಮ್ಮ ಮಟ್ರೋ ರೈಲು ಸ್ವಚ್ಛತೆ ಮಾಡಲು ಇಷ್ಟು ನೀರು ಬೇಕಾ ಎಂದು ಜನರು ಕೆಂಡಕಾರುತ್ತಿದ್ದಾರೆ. ಇದಕ್ಕೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications