Infosys Narayana Murthy: ಮಾಲೀಕರಿಗೆ ಕೋಟಿ ಉದ್ಯೋಗಿಗಳ ಪರಿಸ್ಥಿತಿ ಹೇಗೆ: ನಾರಾಯಣ ಮೂರ್ತಿಗೆ ಕ್ಲಾಸ್!
ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ದಿನಕ್ಕೆ ಕನಿಷ್ಠ 12 ಗಂಟೆಯಾದರೂ ಕೆಲಸ ಮಾಡಬೇಕು ಎಂದು ಪದೇ ಪದೇ ಹೇಳುತ್ತಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಗೆ ಇದೀಗ ಹೊಸ ಹಾಗೂ ಕಿರಿಯ ಉದ್ಯಮಿಗಳು ಸಹ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗಂಟೆಗಟ್ಟಲೆ ಕೆಲಸ ಮಾಡಬೇಕು. ಪರ್ಸನಲ್ ಲೈಫ್ ಹಾಗೂ ಕೆಲಸದ ನಡುವೆ ನಾನು ವ್ಯತ್ಯಾಸ ನೋಡಲ್ಲ. ವರ್ಕ್ ಲೈಫ್ ಬ್ಯಾಲೆನ್ಸ್ ಕಾನ್ಸೆಪ್ಟ್‌ನ ನಾನು ನಂಬಲ್ಲ ಎಂದು ನಾರಾಯಣ ಮೂರ್ತಿ ಅವರು ಹೇಳಿದ್ದರು. ಇದಕ್ಕೆ ದೇಶದಾದ್ಯಂತ ಯುವ ಸಮೂಹದಿಂದ ವ್ಯಾಪಕ ಖಂಡನೆ ವ್ಯಕ್ತವಾದ ಮೇಲೆ ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದ ನಾರಾಯಣ ಮೂರ್ತಿ ಅವರು ನಾನು ಸಾಯುವ ವರೆಗೂ ಇದನ್ನೇ ಹೇಳ್ತೀನಿ ಎಂದಿದ್ದರು. ಇದಕ್ಕೆ ಮತ್ತೆ ವಿರೋಧ ವ್ಯಕ್ತವಾಗಿದೆ. ನಿಮಗೆ ಕೋಟಿ ಕೋಟಿ ಬರುತ್ತೆ ಉದ್ಯೋಗಿಗಳ ಪರಿಸ್ಥಿತಿ ಏನು ಎಂದು ನವ ಉದ್ಯಮಿಗಳು ಪ್ರಶ್ನೆ ಮಾಡಿದ್ದಾರೆ.
ಈಚೆಗೆ ತಮಿಳುನಾಡಿನ ಸಂಸದ ಪಿ ಚಿದಂಬರಂ ಅವರು ಸಹ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವುದು ಮೂರ್ಖತನ ಅಂತ ನೇರವಾಗಿಯೇ ಹೇಳಿದ್ದರು. ಇದೀಗ ಎಂ.ಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಿಇಒ ನಮಿತಾ ಥಾಪರ್ ಅವರು ಸಹ ನಾರಾಯಣ ಮೂರ್ತಿ ಅವರ ಕೆಲಸದ ಅವಧಿ ಹೇಳಿಕೆಗೆ ಪರೋಕ್ಷ ಕ್ಲಾಸ ತೆಗೆದುಕೊಂಡಿದ್ದಾರೆ. ಭಾರತ ಅಭಿವೃದ್ಧಿ ಹೊಂದಬೇಕಾದರೆ ಯುವಕರು ಹೆಚ್ಚು ದುಡಿಯಬೇಕು ಎಂದು ನಾರಾಯಣ ಮೂರ್ತಿ ಅವರು ಹೇಳಿದ್ದರು. ಇದೀಗ ಅವರ ಮಾತಿಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ಹ್ಯೂಮನ್ಸ್ ಆಫ್ ಬಾಂಬೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ನಮಿತಾ ಥಾಪರ್ ಅವರು, ಕೋಟಿ ಗಟ್ಟಲೆ ಹಣ ಸಂಪಾದಿಸುವ ಸಂಸ್ಥೆಗಳ ಮಾಲೀಕರು, ಸಿಇಒ ಹಾಗೂ ಬಾಸ್‌ಗಳು 70 ಅಲ್ಲದಿದ್ದರೆ 100 ಗಂಟೆಯೂ ದುಡಿಯುತ್ತಾರೆ. ಅವರಿಗೆ ಟನ್ ಗಟ್ಟಲೆ ಹಣ ಬರುತ್ತೆ. ಅಲ್ಲದೆ ಅವರು ಮಾಡುವ ಕೆಲಸಕ್ಕೂ ಸಾಮಾನ್ಯ ಉದ್ಯೋಗಿಗಳು ಮಾಡುವ ಕೆಲಸಕ್ಕೂ ತುಂಬಾನೇ ವ್ಯತ್ಯಾಸ ಇದೆ. ಮಾಲೀಕರಾದ ನಾವು ದಿನದ 24 ಬೇಕಾದರೂ ಕೆಲಸ ಮಾಡಬಹುದು. ಉದ್ಯೋಗಿಗಳ ಪರಿಸ್ಥಿತಿ ಏನು. ವಾರಕ್ಕೆ 70 ಗಂಟೆ ಕೆಲಸ ಮಾಡುವುದು ಎಂದರೆ ಕೆಲಸ ಮಾಡುವವರ ಮೇಲೆ ವಿಪರೀತ ಒತ್ತಡವಾಗುತ್ತದೆ ಎಂದು ಹೇಳಿದ್ದಾರೆ.
ಉದ್ಯೋಗಿಗಳು ಗಂಟೆಗಟ್ಟಲೆ ಕೆಲಸ ಮಾಡುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಸಮಸ್ಯೆಯ ಮೇಲೆ ಗಂಭೀರ ಸಮಸ್ಯೆ ಆಗುತ್ತದೆ. ಅವರ ವೈಯಕ್ತಿಕ ಹಾಗೂ ಕೆಲಸದ ಜೀವನದ ನಡುವೆ ಸಮತೋಲನ ಇರಬೇಕು. ಅದನ್ನು ಬಿಟ್ಟು ದುಡಿಯುತ್ತಲ್ಲೇ ಇದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಸಂಸ್ಥೆಯ ಮಾಲೀಕರಿಗಾದರೆ, ಲಾಭ ಮಾಡುವುದು ಆದ್ಯತೆಯ ಕೆಲಸವಾಗುತ್ತದೆ. ಹೂಡಿಕೆ ಮಾಡುವುದು ಹೇಗೆ, ಆ ಹೂಡಿಕೆಯಿಂದ ಲಾಭ ಮಾಡಿಕೊಳ್ಳುವುದು ಹೇಗೆ ಎನ್ನುವ ಲೆಕ್ಕಾಚಾರಗಳೇ ಅವರಿಗೆ ಹೆಚ್ಚಾಗಿ ಇರುತ್ತದೆ. ಕಂಪನಿಯ ಮಾಲೀಕರಂತೆಯೇ ಉದ್ಯೋಗಿಗಳು ಸಹ ಕೆಲಸ ಮಾಡಬೇಕು ಅಂತ ನಿರೀಕ್ಷೆ ಮಾಡುವುದು ತಪ್ಪು. ಇಬ್ಬರ ಕೆಲಸದ ನಡುವೆ ಸಾಕಷ್ಟು ವ್ಯತ್ಯಾಸ ಇದೆ ಎಂದು ನವೋದ್ಯಮಿ ನಮಿತಾ ಥಾಪರ್ ಅವರು ಹೇಳಿದ್ದಾರೆ.
ನಮಿತಾ ಥಾಪರ್ ಅವರ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕನಿಷ್ಠ ಇವರಾದರೂ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡರಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಹೊಸದಾಗಿ ಸ್ಟಾರ್ಟ್ ಅಪ್ ಮಾಡಿದವರಿಗೆ ಇರುವ ತಿಳುವಳಿಕೆ ಹಿರಿಯ ಉದ್ಯಮಿಗಳಿಗೆ ಇಲ್ಲವೇ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications