ಬೆಂಗಳೂರಿಗೆ ಇನ್ನಷ್ಟು ಮಳೆ ಅವಾಂತರ ಫಿಕ್ಸ್: ಗ್ರೇಟರ್ ಬೆಂಗಳೂರಿನಿಂದ ಈ 5 ಸಮಸ್ಯೆ ಖಚಿತ!
Greater Bengaluru Updates: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಜಾರಿ ಮಾಡುವುದಕ್ಕೆ ಭಾರೀ ಸಿದ್ಧತೆ ಶುರುವಾಗಿದೆ. ಆದರೆ, ಗ್ರೇಟರ್ ಬೆಂಗಳೂರು ಜಾರಿ ಮಾಡುವುದರಿಂದ ಇನ್ನೂ ಹೆಚ್ಚಿನ ಮಳೆ ಅವಾಂತರ ಸೇರಿದಂತೆ ಬೆಂಗಳೂರಿಗೆ 5 ಪ್ರಮುಖ ಸಮಸ್ಯೆಗಳು ಎದುರಾಗಲಿವೆ. ಹೌದು ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಡುವುದಕ್ಕೆ ಮುಂದಾಗಿದೆ. ಆದರೆ ಇದರ ಭಾಗವಾಗಿ ಬೆಂಗಳೂರಿನಲ್ಲಿ ಮೂರರಿಂದ ಐದು ಪಾಲಿಕೆಗಳು ಬರಲಿದ್ದು, ಭಾರೀ ಸಂಕಷ್ಟ ಎದುರಾಗಲಿದೆ.
ಬೆಂಗಳೂರಿನ ವಿಸ್ತೀರ್ಣ ಹೆಚ್ಚಾದಂತೆ ನಗರದಲ್ಲಿ ಸಮಸ್ಯೆಗಳು ಸಹ ಹೆಚ್ಚಾಗಿವೆ. ಇನ್ನು ಬೆಂಗಳೂರಿನ ಆಡಳಿತ ನಡೆಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಡಳಿತ ವೈಖರಿಯ ಬಗ್ಗೆ ಜನರಲ್ಲಿ ಮೊದಲಿನಿಂದಲೂ ಅಸಮಾಧಾನವಿದೆ. ಇನ್ನು ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದೆ. ಆದರೆ, ಮೂರು ಅಥವಾ ಐದು ಪಾಲಿಕೆಗಳು ಬಂದರೆ ಸಮನ್ವಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ಬೆಂಗಳೂರಿಗರ ಮೇಲೆ ಇನ್ನಷ್ಟು ಟ್ಯಾಕ್ಸ್ ಹೊರೆ ಬೀಳುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಹಾಗಾದರೆ ಗ್ರೇಟರ್ ಬೆಂಗಳೂರಿನಿಂದ ಆಗುವ ಸಮಸ್ಯೆಗಳೇನು ನೋಡೋಣ....

ಸಮನ್ವಯ ಕೊರತೆ & ಗೊಂದಲ: ಇನ್ನು ಬೆಂಗಳೂರಿನ ಆಡಳಿತಲ್ಲಿ 8 ವಲಯಗಳನ್ನು ಮಾಡಲಾಗಿದೆ. ಆದರೆ, ಈ 8 ವಲಯಗಳ ನಡುವೆಯೇ ಆಕಷ್ಟು ಸಮನ್ವಯ ಕೊರತೆ ಇದೆ. ಅಲ್ಲದೇ ಇನ್ಮುಂದೆ ಮೂರು ಪಾಲಿಕೆಯಾದರೆ ಎಲ್ಲವೂ ಗ್ರೇಟರ್ ಬೆಂಗಳೂರು / ಮುಖ್ಯಮಂತ್ರಿ ಅವರ ಅಧ್ಯಕ್ಷತೆಗೆ ಬರುತ್ತದೆಯಾದರೂ, ಬೆಂಗಳೂರಿನಲ್ಲಿ ಭಾರೀ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ. ಮೂರು ಪಾಲಿಕೆಗಳ ನಡುವೆ ಸಮನ್ವಯತೆ ಕೊರತೆ ಎದುರಾಗಿ, ಗೊಂದಲದ ವಾತಾವರಣ ನಿರ್ಮಾಣವಾಗಲಿದೆ. ಅದರಲ್ಲೂ ಮೂರು ಪಾಲಿಕೆಗಳಲ್ಲಿ ವಿಭಿನ್ನ (ಸಹಜವಾಗಿಯೇ ಬರಲಿವೆ) ಪಕ್ಷಗಳು ಅಧಿಕಾರಕ್ಕೆ ಬಂದರೆ ಮಿನಿ ರಾಜ್ಯ ಸರ್ಕಾರದಂತೆ ಗೊಂದಲದ ಮಹಾಪುರವೇ ನಿರ್ಮಾಣವಾಗಲಿದೆ.
ಮೂರು ಪಾಲಿಕೆ ಬೇಕು: ಗ್ರೇಟರ್ ಬೆಂಗಳೂರಿನ ಆಡಳಿತದ ಭಾಗವಾಗಿ ಮೂರು ಪಾಲಿಕೆಗಳನ್ನು ನಿರ್ಮಾಣ ಮಾಡುವುದರಿಂದ ಮೂರು ಪಾಲಿಕೆಯ ಕಟ್ಟಡ ಹಾಗೂ ಸಿಬ್ಬಂದಿಯ ಅವಶ್ಯಕತೆಯೂ ಇದೆ. ಮೂರು ಪಾಲಿಕೆಗಳು ಬಂದರೆ ಈಗ ಇರುವ ವಾರ್ಡ್‌ಗಳ ಸಂಖ್ಯೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಳವಾಗಲಿದೆ. ವಾರ್ಡ್ ಸದಸ್ಯರ ಸಂಖ್ಯೆಯೂ ಹೆಚ್ಚಾಗಲಿದ್ದು. ಮೂರು ಪ್ರತ್ಯೇಕ ಪಾಲಿಕೆಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇನ್ನು ಈಗ ಇರುವ ಒಂದು ಪಾಲಿಕೆಯ ಕಟ್ಟಡವನ್ನು ಬಳಸಿಕೊಳ್ಳಬಹುದು. ಆದರೆ ಇನ್ನೆರಡು ಕಟ್ಟಡಗಳು ನಿರ್ಮಾಣ ಮಾಡಬೇಕಾಗುತ್ತದೆ.












Click it and Unblock the Notifications