ಆನಂದ ಗುರೂಜಿ ಮನೆಯೊಳಗೆ ಬಾಟಲ್, ಮಾಂಸದ ತುಂಡು ಎಸೆದ ದುಷ್ಕರ್ಮಿಗಳು
Recommended Video

ಆನಂದ ಗುರೂಜಿ ಮನೆಯೊಳಗೆ ಬಾಟಲ್, ಮಾಂಸದ ತುಂಡು ಎಸೆದ ದುಷ್ಕರ್ಮಿಗಳು | Oneindia Kannada
ಬೆಂಗಳೂರು, ಸೆಪ್ಟೆಂಬರ್ 16 : ನಗರದ ಕಾಮಾಕ್ಯ ಚಿತ್ರಮಂದಿರ ಬಳಿ ಇರುವ ಜ್ಯೋತಿಷಿ ಆನಂದ ಗುರೂಜಿ ಅವರ ಮನೆಯೊಳಗೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಬಿಯರ್ ಬಾಟಲ್ ಮತ್ತು ಮಾಂಸದ ತುಂಡುಗಳನ್ನ ಎಸೆದಿದ್ದಾರೆ.
ನಿನ್ನೆ ರಾತ್ರಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿ ಪರಾರಿಯಾಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆನಂದ ಗುರೂಜಿ ಖಾಸಗಿ ಕಾರ್ಯಕ್ರಮದಲ್ಲಿ ಗೋ ಹತ್ಯೆ ಬಗ್ಗೆ ಪ್ರವಚನ ನೀಡಿದ್ದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
Miscreants pelted beer bottles at astrologer #AnandaGuruji's house in #KamakyaLayout. Astrologer had previously given discourse on #BeefBan pic.twitter.com/7jSl3K7IFt
— NEWS9 (@NEWS9TWEETS) September 16, 2017












Click it and Unblock the Notifications