Metoo campaign: 2018ರಲ್ಲೇ ಅಭಿಯಾನ ಪ್ರಾರಂಭಿಸಿದ್ದ "ಫೈರ್", ಏನಿದರ ಹಿನ್ನೆಲೆ ?
kannada film industry |Fire: ಕನ್ನಡ ಚಿತ್ರರಂಗದಲ್ಲಿ ಮೀಟೂ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಮೀಟೂ ಅಭಿಯಾನ ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚನಲವನ್ನೇ ಮೂಡಿಸುವ ಸಾಧ್ಯತೆ ಇದೆ. ಈ ಬಾರಿ ಪ್ರಸಿದ್ಧ ನಟ, ನಟಿಯರು, ಕಲಾವಿದರು ಹಾಗೂ ಸಾಹಿತಿಗಳು ಸೇರಿದಂತೆ ನೂರಾರು ಜನ ಗಣ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕೇರಳದಲ್ಲಿ ಹೇಮಾ ಕಮಿಟಿ ರಚನೆ ಮಾಡಿದ್ದ ಮಾದರಿಯಲ್ಲೇ ಇಲ್ಲೂ ಕಮಿಟಿಯೊಂದನ್ನು ರಚನೆ ಮಾಡಬೇಕು. ಕನ್ನಡ ಚಿತ್ರರಂಗವನ್ನು ಶುದ್ಧೀಕರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಅದರಲ್ಲಿ "ಫೈರ್" ಮಹತ್ವದ ಪಾತ್ರ ವಹಿಸಿದೆ.
ಏನಿದು ಫೈರ್, ರಚನೆಯಾಗಿದ್ದು ಯಾವಾಗ ಮತ್ತು ಏಕೆ ?
ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು ಎಂದು ಫೈರ್ ಸಂಸ್ಥೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಈ ಫೈರ್ (ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ) ಸಂಸ್ಥೆಯನ್ನು 2018ರಲ್ಲಿ ಶುರುಮಾಡಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳಾ ಶೋಷಣೆಯ ವಿರುದ್ಧವಾಗಿ ಕೆಲಸ ಮಾಡುವುದು ಈ ಸಂಸ್ಥೆಯ ಉದ್ದೇಶವಾಗಿದೆ. 2018ರಲ್ಲಿ ಕರ್ನಾಟಕದಲ್ಲೂ ಮೀಟೂ ಅಭಿಯಾನ ಜೋರಾಗಿತ್ತು.

ಆ ಸಂದರ್ಭಲ್ಲಿ ಮೀಟೂದ ಬಗ್ಗೆ ಪ್ರಖ್ಯಾತ ನಟಿ ಶ್ರುತಿ ಹರಿಹರನ್ ಅವರು ಮಾತನಾಡಿದ್ದರು. ಅಲ್ಲದೇ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪವನ್ನು ಮಾಡಿದ್ದರು. ಈ ಅಭಿಯಾನಗಳಿಗೆ ನಟ ಚೇತನ್ ಸೇರಿದಂತೆ ಕೆಲವೇ ಕೆಲವು ಪ್ರಮುಖ ನಟ, ನಟಿಯರು ಬೆಂಬಲವಾಗಿ ನಿಂತಿದ್ದರು. ಈ ಫೈರ್ ಎನ್ನುವ ಸಂಸ್ಥೆಯು ನಟ ಚೇತನ್ ಅವರ ಕನಸಿನ ಕೂಸಾಗಿದ್ದು, ಇದಕ್ಕೆ ಹಲವರು ಬೆಂಬಲ ಸೂಚಿಸಿದ್ದಾರೆ. ಸಂಸ್ಥೆಯ ಮೂಲಕ ಗುರುತಿಸಿ ಕೊಂಡಿದ್ದಾರೆ.
ಮಲಯಾಳಂ ಫಿಲಂ ಇಂಡಸ್ಟ್ರಿ: ದೇಶದಲ್ಲಿ ಮೊದಲು ಪರ್ಯಾಯ ಸಂಘ
ದೇಶದಲ್ಲೇ ಮೊದಲ ಬಾರಿ ಎನ್ನುವಂತೆ ಮಲಯಾಳಂ ಚಿತ್ರರಂಗದಲ್ಲಿ ಮೀಟೂ ಅಭಿಯಾನ ಭಾರೀ ಸಂಚಲವನ್ನೇ ಮೂಡಿಸಿತ್ತು. ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟಿಯನ್ನು ಕೇರಳದ ಪ್ರಸಿದ್ಧ ನಗರವಾದ ಕೊಚ್ಚಿಯಲ್ಲಿ ಕೆಲವರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಆ ಸಂಕಷ್ಟದ ಸಂದರ್ಭದಲ್ಲಿ ಅಮ್ಮಾ (ಅಸೋಸಿಯೇಷನ್ ಆಫ್ ಮಲೆಯಾಳಂ ಮೂವಿ ಆರ್ಟಿಸ್ಟ್)ನಿಂದ ನಿರೀಕ್ಷಿತ ನೆರವು ಸಿಗಲಿಲ್ಲ ಎನ್ನುವ ಆರೋಪ ಇದೆ. ಇದಾದ ಕೆಲವೇ ದಿನಗಳಲ್ಲಿ ಕೇರಳದ ಪ್ರಮುಖ ನಟಿಯರಿಂದಲೇ ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ (wcc) ರಚನೆಯಾಯಿತು.
ಈ ಅಸೋಸಿಯೇಷನ್ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿತು. ಹೋರಾಟಕ್ಕೆ ಇಳಿಯಿತು. ನಿರ್ದಿಷ್ಟವಾಗಿ ಕನ್ನಡ ಚಿತ್ರರಂಗದಲ್ಲೂ 2017 -18ನೇ ವರ್ಷದ ಅವಧಿಯಲ್ಲಿ ಇದೇ ಮಾದರಿಯ ಹೋರಾಟಗಳು ನಡೆದಿದ್ದವು. ಆ ಹೋರಾಟದ ನಂತರ ಸೃಷ್ಟಿಯಾಗಿದ್ದೇ ಫೈರ್ ಎನ್ನುವ ಸಂಸ್ಥೆ. ನಟ ಚೇತನ್ ಅವರು ಈ ಸಂಸ್ಥೆ ಹಾಗೂ ಅಭಿಯಾನವನ್ನು ಮುಂದುವರಿಸಿದ್ದು. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಳೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications