Shakti Scheme: ರಾಜ್ಯದಲ್ಲಿ ನೂರಾರು ಸಮಸ್ಯೆಗಳು ಸೃಷ್ಟಿ, ಮಾಸಿಕ 10,000 ಪರಿಹಾರ ಬೇಕೆಂದ ಆಟೋ ಚಾಲಕರು
ಬೆಂಗಳೂರು, ಜುಲೈ 13: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಮತ್ತು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ 'ಶಕ್ತಿ' ಯೋಜನೆ ಕುರಿತು ರಾಜ್ಯ ಬಿಜೆಪಿ ವಾಗ್ದಾಳಿ ಯನ್ನು ಮುಂದುವರಿಸಿದೆ. ಈ ಯೋಜನೆ ಜಾರಿಯಾದ ಬಳಿಕ ರಾಜ್ಯದಲ್ಲಿ ನೂರೆಂಟು ಸಮಸ್ಯೆಗಳು ತಲೆ ಎತ್ತಿರುವ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಕುರಿತು ಗುರುವಾರ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು, ಇದೊಂದು ಅಪ್ರಬುದ್ಧ ಯೋಜನೆಯಾಗಿದ್ದು, ಇದರಿಂದ ಅನೇಕ ಸಮಸ್ಯೆಗಳು ಎದುರಾಗಿವೆ. ಉಚಿತ ಬಸ್ ಪ್ರಯಾಣವೇಣು ಸರ್ಕಾರ ಮಾಡಿತು, ಆದರೆ ಅದರಿಂದ ಸೂಕ್ತ ಅನುದಾನ ಸಿಗದೆ ರಾಜ್ಯದ ನಾಲ್ಕು ನಿಗಮಗಳು ಆರ್ಥಿಕ ಚೈತನ್ಯ ಕಳೆದುಕೊಂಡಿವೆ. ಅವು ದಿವಾಳಿಯತ್ತ ಮುಖ ಮಾಡಿವೆ ಎಂದು ಬಿಜೆಪಿ ದೂರಿದೆ.

ಈ ಮಧ್ಯೆ ನಡುವೆ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು, ನಿರ್ವಾಹಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತೆ ಸಕಾ್ರ ಮಾಡಿದೆ. ಅದಲ್ಲದೇ ಅವರ ಜೀವನಕ್ಕಾಗಿ ಪರ್ಯಾಯ ಮಾರ್ಗ ಕಂಡುಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು, ನಿರ್ವಾಹಕರನ್ನೆಲ್ಲ ಬೀದಿಗೆ ತಳ್ಳಿ ಈಗ ಸಂಭ್ರಮಿಸುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದರು. ತನ್ನ ಟ್ವೀಟ್ ನಲ್ಲಿ ಎಟಿಎಂ ಸರ್ಕಾರ ಎಂದು ಕುಟುಕಿದೆ.
ಕಳೆದ ತಿಂಗಳು ಜೂನ್ 11ರಂದು ಕಾಂಗ್ರೆಸ್‌ನ ಮೊದಲ ಗ್ಯಾರಂಟಿ ಯೋಜನೆಯಾದ 'ಶಕ್ತಿ ಯೋಜನೆ' ಜಾರಿ ಆಯಿತು. ಅಂದಿನಿಂದ ಈ ವರೆಗೆ ಸಾರಿಗೆ ಇಲಾಖೆ ನಾಲ್ಕು ನಿಗಮದ ಬಸ್‌ಗಳಲ್ಲಿ ಮಹಿಳೆಯ ಓಡಾಟ ಹೆಚ್ಚಾಗುತ್ತಿದೆ. ಇದರಿಂದ ಆಟೋ, ಟ್ಯಾಕ್ಸಿ, ಅಷ್ಟೇ ಯಾಕೇ ಅಲ್ಪ ಪ್ರಯಾಣದಲ್ಲಿ ಮೆಟ್ರೋ ಪ್ರಯಾಣಕ್ಕೆ ಹೊಡೆತ ಬಿದ್ದಿದೆ ಎನ್ನಲಾಗಿದೆ.
ರೂ.1,000 ಪರಿಹಾರ ನೀಡುವಂತೆ ಆಟೋ ಚಾಲಕರ ಆಗ್ರಹ
ರಾಜ್ಯದಲ್ಲಿ ಶಕ್ತಿ ಯೊಜನೆ ಅನುಷ್ಠಾನದ ನಂತರ ಖಾಸಗಿ ವಾಹನ ಮಾಲೀಕರಿಗೆ ತೊಂದರೆ ಆಗಿದೆ. ಇದಕ್ಕೆ ಆಟೋ ರೀಕ್ಷಾ ಚಾಲಕರು ಹೊರತಾಗಿಲ್ಲ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಆಟೋ ಚಾಲಕರಿಗೆ ಮಾಸಿಕವಾಗಿ ಸರ್ಕಾರ 10,000 ರೂಪಾಯಿ ಯನ್ನು ಪರಿಹಾರವಾಗಿ ನೀಡಬೇಕು ಎಂದು ಬೆಂಗಳೂರು ಆಟೋ ಡ್ರೈವರ್ಸ್ ಯೂನಿಯಟ್ ಆಗ್ರಹಿಸಿದೆ.

ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಅನೇಕ ಆಟೋ ರಿಕ್ಷಾ ಚಾಲಕರ ಬದುಕು ಬೀದಿಗೆ ಬಿದ್ದಿದೆ, ಆರ್ಥಿಕವಾಗಿ ನರಳುತ್ತಿದ್ದಾರೆ.
ಈಗಾಗಲೇ ಆಟೋ ಚಾಲಕರ ಆದಾಯವನ್ನು ಬೈಕ್, ಟ್ಯಾಕ್ಸಿಗಳು ಕಬಳಿಸುತ್ತಿದ್ದವು, ಇದೀಗ ಈಗ ಶಕ್ತಿ ಯೋಜನೆ ಜಾರಿಯಿಂದ ತಮ್ಮ ಜೀವನ ನಿರ್ವಹಣೆಯೇ ದುಸ್ತರವಾಗಿದೆ.
ಈ ಸಮಸ್ಯೆಗಳಿಂದಾಗಿ ಅನೇಕ ಚಾಲಕರು ಬಾಡಿಗೆ ಪಾವತಿಸಲಾಗದೇ, ಸಾಲ ತೀರಿಸಲಾಗಿದೆ ಪರದಾಡುತ್ತಿದ್ದಾರೆ. ಇನ್ನೂ ಮಕ್ಕಳ ಶಾಲಾ ವಿದ್ಯಾಭ್ಯಾಸ ಖರ್ಚು ನಿಭಾಯಿಸಲು ಹೆಣಗಾಡುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಹೇಳಿದರು.
ಕಾಂಗ್ರೆಸ್ ಸರ್ಕಾರ ಚುಣಾವಣೆ ಪೂರ್ವದಲ್ಲಿ ನಿಯಮ ಬಾಹೀರ ಸೇವೆ ನೀಡುವ ಬೈಕ್- ಟ್ಯಾಕ್ಸಿಗಳನ್ನು ನಿಷೇಧಿಸುವ ಬಗ್ಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಭರವಸೆ ನೀಡಲಾಗಿತ್ತು ಎಂದು ಅವರು ಸರ್ಕಾರ ಗಮನ ಸೆಳೆದರು.












Click it and Unblock the Notifications