ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಮಹಿಳೆಗೆ ಮೋಸ ಮಾಡಿದ್ದ ಆರೋಪಿ ಬಂಧನ

ಬೆಂಗಳೂರು, ಏಪ್ರಿಲ್ 30: ತಾನೂ ಪಿಎಂಓ ಕಚೇರಿಯಲ್ಲಿ ಕೆಲಸ ಮಾಡುವುದು. ಇಂಟೆಲಿಜೆನ್ಸ್ ಮತ್ತು ರಾ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿಯನ್ನು ವಸೂಲಿ ಮಾಡಿಕೊಂಡು ವಂಚಿಸಿದ್ದ ನಕಲಿ ಅಧಿಕಾರಿಯನ್ನು ಬಂಧಿಸುವಲ್ಲಿ ಬೆಳ್ಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕುನಾಲ್ ಸೆಕ್ಸೆನಾ ಎಂಬ ಮಹಿಳೆಯಿಂದ ಬೆಳ್ಳಂದೂರು ಪೊಲೀಸರಿಗೆ ದೂರು

ಕುನಾಲ್ ಸೆಕ್ಸೆನಾ ಎಂಬ ಮಹಿಳೆಗೆ ಅರಹತ್ ಅಲಿಯಾಸ್ ಆನಂದ್ ಎಂಬಾತ ಕೌಲಲಾಂಪುರದಲ್ಲಿ ವಿಮಾನದಲ್ಲಿ ತೆರೆಳುವಾಗ ಪರಿಚಯವಾಗಿದ್ದಾನೆ. ತಾನೂ ಪಿಎಂಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂಟಲಿಜೆನ್ಸ್ ಮತ್ತು ರಾ ಅಧಿಕಾರಿ ಎಂದೆಲ್ಲಾ ಪುಂಗಿ ಬಿಟ್ಟಿರುತ್ತಾನೆ. ಇದನ್ನು ನಂಬಿದ ಕುನಾಲ್ ಸೆಕ್ಸೆನಾ ಆತನ ಜೊತೆ ಮಾತನಾಡುತ್ತಾಳೆೆ. ಈಕೆ 2019 ರಲ್ಲಿ ಇಟಲಿ ಮತ್ತು ಚೆಕ್‌ ಗಣರಾಜ್ಯಕ್ಕೆ ತೆರಳಲು ವೀಸಾವನ್ನು ಅಪ್ಲೈ ಮಾಡಿರುತ್ತಾರೆ. ಆದರೆ ವೀಸಾ ರಿಜೆಕ್ಟ್ ಆಗಿರುತ್ತೆ. 2020 ರಲ್ಲಿ ಮತ್ತೊಮ್ಮೆ ವೀಸಾಗೆ ಅಪ್ಲೈ ಮಾಡಿದಾಗ ವೀಸ ಲಭ್ಯವಾಗಿರುತ್ತೆ. ಆದರೆ ಮೊದಲು ವೀಸಾ ರಿಜೆಕ್ಟ್ ಆಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳುತ್ತೇನೆ. ತಮ್ಮ ವಿವರವನ್ನೆಲ್ಲಾ ಕೊಡಿ ಎಂದು ಕಿಲಾಡಿತನದಲ್ಲಿ ಮಾತನಾಡಿ ಅರಹತ್ ವಿವರ ಪಡೆದಿದ್ದಾನೆ.

ವೀಸಾ ತಿರಸ್ಕಾರಕ್ಕೆ ಕಾರಣ Suspected terrorist Activities act..!

ಇಟಲಿ, ಜೆಕ್ ಗಣರಾಜ್ಯ, ಆಸ್ಟ್ರಿಯ, ನೆದರ್ಲ್ಯಾಂಡ್ ದೇಶಗಳು ತಮ್ಮ ಪಾಸ್‌ಪೋರ್ಟ್ ಅನ್ನು ಬ್ಲಾಕ್ ಲಿಸ್ಟ್‌ಗೆ ಹಾಕಿದ್ದೇವೆ. ಈ ದೇಶಗಳು ತಮ್ಮ ಮೇಲೆ ಶಂಕಿತ ಭಯೋತ್ಪಾದಕ ಚಟುವಟಿಕೆಗಳ ಕೃತ್ಯ

Man Arrested for defrauding a woman by claiming to be an intelligence office

ಪ್ರಕರಣವನ್ನು ದಾಖಲು ಮಾಡಿವೆ ಎಂದು ಹೇಳಿ ಹೆದರಿಸಿರುತ್ತಾನೆ. ನಿಮ್ಮ ಪಾಸ್‌ಪೋರ್ಟ್ ಅನ್ನು ಬ್ಲಾಕ್‌ಲಿಸ್ಟ್ ನಿಂದ ತೆಗೆಯಬೇಕಾದರೆ ಇಂಟಲಿಜೆನ್ಸ್ ಅಧಿಕಾರಿಯಾಗಿ ಅಧಿಕಾರವನ್ನು ಬಳಸಿಕೊಳ್ಳಬೇಕು. ತಾನೂ ಎಲ್ಲಾ ದೇಶಗಳ ಬಳಿ ಮಾತನಾಡುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ. ಆ ಬಳಿಕ ಆಸ್ಟ್ರಿಯಾ, ಜೆಕ್ ಗಣರಾಜ್ಯಕ್ಕೆ 5 ಲಕ್ಷ ಯೂರೋ (ನಾಲ್ಕು ಕೋಟಿ ರೂಪಾಯಿ), ಇಟಲಿಗೆ 2 ಲಕ್ಷ ಯುರೋ(ಎರಡು ಕೋಟಿ) ಕೊಡಬೇಕು ಎಂದಿದ್ದಾನೆ. ಅಷ್ಟೋದು ಹಣವಿಲ್ಲ ಎಂದ ಕುನಾಲ್ ಗೆ ತಮ್ಮ ಬಳಿ ಎಷ್ಟು ಹಣವಿದೆಯೋ ಅಷ್ಟು ಹಣವನ್ನು ಹಾಕಿ ಎಂದು ವಿವಿಧ ಅಕೌಂಟ್ ನಂಬರ್ ಗಳನ್ನು ನೀಡಿದ್ದಾನೆ. ಅರಹತ್ ಹೇಳಿದ್ದೇ ಸತ್ಯವೆಂದು ನಂಬಿದ ಕುನಾಲ್ ಸೆಕ್ಸೆನಾ 89 ಲಕ್ಷ ಹಣವನ್ನು ಹಾಕಿದ್ದಾಳೆ.

ಅರಹತ್ ನಿವಾಸದ ಮೇಲೆ ಪೊಲೀಸರ ದಾಳಿ ;

ಬೆಳ್ಳಂದೂರ ಪೊಲೀಸರು ಅರಹತ್‌ನ ರಾಜಾಜಿನಗರದಲ್ಲಿರುವ ನಿವಾಸ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಮನೆಯಲ್ಲಿ ಈತ ಬಳಸುತ್ತಿದ್ದ 13ಕ್ಕೂ ಬ್ಯಾಂಕ್ ಪಾಸ್‌ಬುಕ್, ಹಣ ವರ್ಗಾವಣೆ ಬಗ್ಗೆ ಬರೆದಿದ್ದ ನೋಟ್ ಬುಕ್, ಪಾಸ್ ಪೋರ್ಟ್ ಲಭ್ಯವಾಗಿದೆ.

ಹಣದ ಮೂಲದ ಬಗ್ಗೆ ಬಾಯ್ಬಿಡದ ಆರೋಪಿ

ಆರೋಪಿ ಅರಹತ್ ಕುನಾಲ್ ಸೆಕ್ಸೆನಾ ರವರಿಗೆ 89 ಲಕ್ಷ ಹಣವನ್ನು ಪಡೆದ ವಂಚಿಸಿದ್ದ. ಬೆಳ್ಳಂದೂರು ಪೊಲೀಸರು ಆರೋಪಿಯ ಹೆಡೆಮುರಿಯನ್ನು ಕಟ್ಟಿದ್ರು. ಅವನಿಂದ ಹಣನ್ನು ರಿಕವರಿ ಮಾಡಲು ಸಾಧ್ಯವಾಗಿಲ್ಲ. ಆರೋಪಿ ತನಿಖೆಗೆ ಅಸಹಕಾರ ನೀಡುತ್ತಿದ್ದಾನೆ ಎಂದು ತಿಳಿದು ಬಂದಿದ್ದು. ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ಆರೋಪಿ ಹಣದ ಮೂಲವನ್ನು ಜಾಲಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+